Bengaluru Press club Election | 2024 ನೇ ಸಾಲಿನ ಚುನಾವಣೆ ಫಲಿತಾಂಶ , ಶ್ರೀಧರ್ ನೇತೃತ್ವದಲ್ಲಿ ಮತ್ತೆ ಹೊಸ ಸಮಿತಿ..!

ಬೆಂಗಳೂರು, (www.thenewzmirror.com) ;

ಬೆಂಗಳೂರು ಪ್ರೆಸ್ ಕ್ಲಬ್ 2024 – 25 ನೇ ಸಾಲಿನ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಮತದಾನ ನಡೆದಿದ್ದು ಬಳಿಕ ಫಲಿತಾಂಶ ಪ್ರಕಟವಾಗಿದೆ.

RELATED POSTS

ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು  ಸ್ಥಾನಗಳಿಗೆ ಚುನಾವಣೆ ನಡೆಯಿತು.

ಬೆಳಗ್ಗೆ  9 ರಿಂದ 2ಗಂಟೆ ಮತದಾನ ಅವಕಾಶ ಮತದಾರರು ಮತಗಟ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು.

ಮಧ್ಯಾಹ್ನದ ವರೆಗೂ ನಡೆದ ಮತದಾನದಲ್ಲಿ1040 ಮತದಾರರ ಪೈಕಿ 767 ಮತಗಳು ಚಲಾವಣೆಯಾಗಿದ್ವು.

ಅಧ್ಯಕ್ಷ ಸ್ಥಾನಕ್ಕೆ ಧ್ಯಾನಪೂಣಚ್ಚ, ಶ್ರೀಧರ್  ಆರ್.ಮತ್ತು ಸುಭಾಶ್ ಹೂಗಾರ್ ರವರು ಸ್ಪರ್ಧೆ ಮಾಡಿದ್ದರು.

ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದ ಶ್ರೀಧರ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಶ್ರೀಧರ್ ಆರ್ 404ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.ಅವರು ತಮ್ಮ ಪ್ರತಿಸ್ಪರ್ದಿಗಳಾದ  ಧ್ಯಾನಪೂಣಚ್ಚ,ಮತ್ತು ಸುಭಾಶ್ ಹೂಗಾರ್ ಅವರನ್ನು ಮಣಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದವರ ಪೈಕಿ ವಿ.ಎನ್.ಮೋಹನ್ ಕುಮಾರ್ 417ಮತಗ ಪಡೆದು ವಿಜಯಿಶಾಲಿಯಾದರು 336 ಮತ ಪಡೆದು ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಅಂತಿಮವಾಗಿ ಪ್ರಕಟವಾದ ಫಲಿತಾಂಶದ ವಿವರ..

ಶ್ರೀಧರ್ ಆರ್ ,
ಅಧ್ಯಕ್ಷರು-404ಮತಗಳು

ವಿ.ಎನ್.ಮೋಹನ್ ಕುಮಾರ್ ಉಪಾಧ್ಯಕ್ಷರು -417ಮತಗಳು.

ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿ- ಮತಗಳು 336

ಜಿ.ಗಣೇಶ್ ಖಜಾಂಚಿ-ಮತಗಳು556

ಜಿ.ವೈ.ಮಂಜುನಾಥ್ ಕಾರ್ಯದರ್ಶಿ-ಮತಗಳು 288

ಧರಣೇಶ್ ಜಂಟಿ ಕಾರ್ಯದರ್ಶಿ ಮತಗಳು-195

ಮಹಿಳಾ ಸ್ಥಾನ- ಮಿನಿ ತೇಜಸ್ವಿ ಮತಗಳು-491

6 ಕಮಿಟಿ ಸದಸ್ಯರು-
ಶಿವಣ್ಣ-234,
ಶರಣಬಸಪ್ಪ-258
ಯಾಸ್ನಿಫ್ ಮುಸ್ತಾಕ್-259
ಮುತ್ತಾಜ್ ಅಲೀಮ್-272
ರೋಹಿಣಿ ಅಡಿಗ-306
ಮಂಜುನಾಥ್-281

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist