ಬೆಂಗಳೂರು, (www.thenewzmirror.com) ;
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಭರ್ಜರಿ ಎಂಟ್ರಿ ಸಿಕ್ಕಿದೆ. ಈಗಾಗಲೇ ಸ್ಪರ್ಧಾಳುಗಳು ಸ್ವರ್ಗ ಹಾಗೂ ನರಕದ ಮನೆಯಲ್ಲಿ ಒಂದು ದಿನ ಕಳೆದಿದ್ದಾರೆ. ಇದರ ನಡುವೆನೇ ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಡಾನ್ ಗಳಿಗೆ ಎಂಟ್ರಿ ಸಿಕ್ಕಿದೆ.
ಅಚ್ಚರಿ ಅನಿಸಿದರೂ ಇದು ಸತ್ಯ. ಸ್ವತಃ ವಕೀಲ ಜಗದೀಶ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರಿಗೆ ಜಗದೀಶ್ ಕುಮಾರ್ ಫೀಮೇಲ್ ಡಾನ್ ಅಂತ ಬಿರುದು ಕೊಟ್ಟಿದ್ದಾರೆ. ಹಾಗೆನೇ ನಾನು ಮೇಲ್ ಡಾನ್ ಅಂತ ಬಿರುದು ಕೊಟ್ಟಿದ್ದಾರೆ.
https://www.facebook.com/share/v/DwBfNw4wQbCma7SH/?mibextid=GOdwvm
ಇಷ್ಟು ದಿನ ತಮಗಿಷ್ಟ ಬಂದಂತೆ ಬದುಕಿದ್ದ ಸ್ಪರ್ಧಾಳುಗಳಿಗೆ ಇದೀಗ ಹೊಸ ಅಧ್ಯಾಯ ಶುರುವಾಗಿದ್ದು, ಮೊದಲ ದಿನವೇ ಟೀಕೆ ಟಿಪ್ಪಣಿಗಳು ಆರಂಭವಾಗಿವೆ. ಕಲ್ಲರ್ಸ್ ಕನ್ನಡ ಬಿಡುಗಡೆಮಾಡಿರುವ ಮೊದಲ ಪ್ರೋಮೋದಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಗೌತಮಿ ಜಾಧವ್ ಅವರು ಟೋಪನ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಅವರನ್ನು ಮನೆಯ ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅವರು ಕಣ್ಣೀರು ಹಾಕಿದ್ದಾರೆ.