ಬೆಂಗಳೂರು(thenewzmirror.com): 2025ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ತಿದ್ದುಪಡಿ)ವಿಧೇಯಕವನ್ನು ಪರ್ಯಾಲೋಚಿಸಿ ಪ್ರಸ್ತಾವವನ್ನು ಅಂಗೀಕರಿಸಬೇಕೆಂದು ಉಪಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವರಾದ ಕೆ.ಹೆಚ್. ಪಾಟೀಲ್ ಅವರು ಇಂದು ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಿದರು.
ಈ ವಿಧೇಯಕವು ಯಾವುದೇ ಬೀದಿಯನ್ನು ಸಾರ್ವಜನಿಕ ಬೀದಿ ಎಂದು ಘೋಷಿಸಲು, ಬಿಬಿಎಂಪಿ ಪ್ರದೇಶದಲ್ಲಿರುವ ಖಾಸಗಿ ಬೀದಿಗಳ ಅಭಿವೃದ್ಧಿಯನ್ನು ಖಚಿತಪಡಿಸಿವುದು. ಭಾರತ ಸಂವಿಧಾನದ 243ಎಕ್ಸ್ ಅನುಚ್ಛೇದದ ಅನುಸಾರ ಶುಲ್ಕ, ಲೆವಿ ಅಥವಾ ದಂಡದ ದರಗಳನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಾಲಿಕೆಯು ತೀರ್ಮಾನ ಕೈಗೊಳ್ಳುವುದನ್ನು ಸಾಧ್ಯವಾಗಿಸುವುದು. ಗರಿಷ್ಟಮಿತಿಯನ್ನು ಕಡಿಮೆಗೊಳಿಸುವುದು ಮತ್ತು ಕಟ್ಟಡ ಲೈಸನ್ಸ್, ಪ್ರಾರಂಭ ಪ್ರಮಾಣ ಪತ್ರ ಮತ್ತು ಸ್ವಾಧೀನ ಪ್ರಮಾಣ ಪತ್ರಗಳಿಗಾಗಿ ಪರಿಶೀಲನಾ ಶುಲ್ಕದೊಂದಿಗೆ ಅನುರೂಪವಾದ ಶುಲ್ಕವನ್ನು ತರುವುದು. ನಿವಾಸಿ ಕಟ್ಟಡ ಅನುಮತಿಗಾಗಿ, ಸಂದಾಯ ಮಾಡಬೇಕಾದ ಶುಲ್ಕದರದ ಮೇಲಿನ ಗರಿಷ್ಟ ಮಿತಿಯನ್ನು ಕಡಿಮೆಗೊಳಿಸುವುದು, ಅನಧಿಕೃತ ನಿರ್ಮಾಣವನ್ನು ತಡೆಗಟ್ಟುವುದು ಮತ್ತು ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸುವುದರಿಂದ ಮಾಲೀಕ ಅಥವಾ ಇತರ ವ್ಯಕ್ತಿಯನ್ನು ನಿರ್ಬಂಧಿಸುವುದು, ಇದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕವಾದ ಕೆಲವು ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡುವುದಕ್ಕೆ ಈ ವಿಧೇಯಕ ಎಂದು ಸದನಕ್ಕೆ ಸಚಿವರು ಮಾಹಿತಿ ನೀಡಿದರು.ನಂತರ ವಿಧೇಯಕ ಅಂಗೀಕಾರವಾಯಿತು.
ವಿಧಾನಸಭೆಯಲ್ಲಿ ಕರ್ನಾಟಕ ಸ್ಟಾಂಪು ( ತಿದ್ದುಪಡಿ)ವಿಧೇಯಕ ಅಂಗೀಕಾರ:
2025ನೇ ಸಾಲಿನ ಕರ್ನಾಟಕ ಸ್ಟಾಂಪು ( ತಿದ್ದುಪಡಿ)ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೋರಿದರು.
ಈ ವಿಧೇಯಕದ ಉದ್ದೇಶ ಡಿಜಿಟಲ್ ಇ-ಸ್ಟಾಂಪಿಂಗ್ ನ್ನು ಕ್ರಮಬದ್ಧ ಸ್ಟಾಂಪಿನ ಪರಿಧಿಯೊಳಗೆ ತರಲು, ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲವನ್ನು ನೀಡಲು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಸ್ಟಾಂಪು ಸುಂಕವನ್ನು ಸಾದ್ಯವಾಗಿಸಲು ಎಂದು ಸದನಕ್ಕೆ ಮಾಹಿತಿ ನೀಡಿದರು. ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.
2025ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ)ವಿಧೇಯಕ, 2025ನೇ ಸಾಲಿನ ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ( ತಿದ್ದುಪಡಿ)ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ)ವಿಧೇಯಕಗಳನ್ನು
ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಪ್ರಸ್ತಾವವನ್ನು ಮಂಡಿಸಿದರು. ಮೇಲ್ಕಂಡ ವಿಧೇಯಕಗಳನ್ನು ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ( ತಿದ್ದುಪಡಿ)ವಿಧೇಯಕ ಅಂಗೀಕಾರ:
2025ನೇ ಸಾಲಿನ ಕರ್ನಾಟಕ ಭೂ ಕಂದಾಯ ( ತಿದ್ದುಪಡಿ)ವಿಧೇಯಕವನ್ನು
ಪರ್ಯಾಲೋಚಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೋರಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.
ಕರ್ನಾಟಕ ಸ್ಟಾಂಪು ( ತಿದ್ದುಪಡಿ)ವಿಧೇಯಕ ಅಂಗೀಕಾರ:
2025ನೇ ಸಾಲಿನ ಕರ್ನಾಟಕ ಸ್ಟಾಂಪು ( ತಿದ್ದುಪಡಿ)ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೋರಿದರು.
ಈ ವಿಧೇಯಕದ ಉದ್ದೇಶ ಡಿಜಿಟಲ್ ಇ-ಸ್ಟಾಂಪಿಂಗ್ ನ್ನು ಕ್ರಮಬದ್ಧ ಸ್ಟಾಂಪಿನ ಪರಿಧಿಯೊಳಗೆ ತರಲು, ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲವನ್ನು ನೀಡಲು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಸ್ಟಾಂಪು ಸುಂಕವನ್ನು ಸಾದ್ಯವಾಗಿಸಲು ಎಂದು ಸದನಕ್ಕೆ ಮಾಹಿತಿ ನೀಡಿದರು. ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಿದ್ದುಪಡಿ) ವಿಧೇಯಕ ಅಂಗೀಕಾರ:
2025ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರಸ್ತಾವವನ್ನು ವಿಧಾನಸಭೆಯ ಅಧಿವೇಶನದಲ್ಲಿಂದು ಸಲ್ಲಿಸಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.
ಕರ್ನಾಟಕ ಪಶು ಆಹಾರದ ವಿಧೇಯಕ ಅಂಗೀಕಾರ:
2025ನೇ ಸಾಲಿನ ಕರ್ನಾಟಕ ಪಶು ಆಹಾರ (ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣದ ವಿನಿಯಮನ) ವಿಧೇಯಕವನ್ನು
ಪರ್ಯಾಲೋಚಿಸಬೇಕೆಂದು ಪಶುಸಂಗೋಪನೆ ಸಚಿವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಪ್ರಸ್ತಾವವನ್ನು ಮಂಡಿಸಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ( ತಿದ್ದುಪಡಿ) ವಿಧೇಯಕ ಅಂಗೀಕಾರ:
2025ನೇ ಸಾಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ( ತಿದ್ದುಪಡಿ) ವಿಧೇಯಕವನ್ನು
ಪರ್ಯಾಲೋಚಿಸಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಪ್ರಸ್ತಾವವನ್ನು ಮಂಡಿಸಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.