ಬೆಂಗಳೂರು,(www.thenewzmirror.com) ;
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣದರ ಶನಿವಾರ ಮಧ್ಯ ರಾತ್ರಿಯಿಂದ ಜಾರಿಗೆ ಬಂದಿದೆ. ಇಂದು ಮಧ್ಯರಾತ್ರಿಯಿಂದ ಪ್ರಯಾಣದರದಲ್ಲಿ ಶೇಕಡ 15 ರಷ್ಟು ಹೆಚ್ಚಳ ಮಾಡಲಾಗಿದೆ.
ರಾಜ್ಯದ ನಾಲ್ಕೂ ನಿಗಮಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಇದನ್ನ ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದರು. ಅದರಂತೆ ಇದೀಗ ಶೇ.15 ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದು ಪ್ರಯಾಣಿಕರು ಸರ್ಕಾರದ ನಡೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಒಂದ್ಕಡೆ ಫ್ರೀ ಭಾಗ್ಯ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಅಂತ ಕಿಡಿಕಾರುತ್ತಿದ್ದಾರೆ.
ಈ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪಯಾಣದ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ದರ ಪರಿಷ್ಕರಣೆಯಿಂದಾಗಿ ನಿಗಮದ ಸಿಬ್ಬಂದಿ ವೇತನ ವೆಚ್ಚ ಇಂಧನ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಸರಿದೂಗಿಸಲು ಸಹಕಾರಿಯಾಗಲಿದೆಯಂತೆ. ಪ್ರಸ್ತುತದಲ್ಲಿ ಸಿಬ್ಬಂದಿ ವೆಚ್ಚ ಸೇರಿ ವಾರ್ಷಿಕವಾಗಿ 3650.00 ಕೋಟಿ ನಿಗಮಕ್ಕೆ ಹೊರೆಯಾಗುತ್ತಿದೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸದ್ಯ 25337 ಬಸ್‌ಗಳು ಸಂಚಾರ ಮಾಡುತ್ತಿದ್ದು ಪ್ರತಿದಿನ ಸರಾಸರಿಯಾಗಿ 116.18ಲಕ್ಷ ಪ್ರಯಾಣಿಕರು ಸಂಚಾರ ಮಾಡ್ತಿದ್ದಾರೆ. ಮೂಲಗಳ ಪ್ರಕಾರ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳು 2024-25ನೇ ಆರ್ಥಿಕ ವರ್ಷದ 1ನೇ ಏಪ್ರಿಲ್‌ನಿಂದ 30ನೇ ನವೆಂಬರ್‌ವರೆಗೆ ಒಟ್ಟು ಆದಾಯ ರೂ.8418.46 ಕೋಟಿ ಆಗಿದ್ರೆ ವೆಚ್ಚ ಮಾಡಿದ್ದು ಬರೋಬ್ಬರಿ 9511.41 ಕೋಟಿ ರೂ.
ರಾಜ್ಯದ ನಾಲ್ಕು ನಿಗಮಗಳು ಸುಮಾರು 1,01,648 ಸಿಬ್ಬಂದಿಗಳನ್ನು ಹೊಂದಿದ್ದು, ಆಯಾ ನಿಗಮಗಳು ಸಿಬ್ಬಂದಿ ಸಂಬಳ ಮತ್ತು ಎಲ್ಲ ಭತ್ಯೆಗಳನ್ನು ನಿಗಮಗಳ ಆದಾಯದ ಮೂಲಕ ಮಾತ್ರ ಪಾವತಿ ಮಾಡಲಾಗುತ್ತಿದ್ದು ಆದಾಯದ ಕೊರತೆಯಿಂದಾಗಿ ದರ ಏರಿಕೆ ಮಾಡುವ ಮೂಲಕ ಆರ್ಥಿಕಹೊರೆ ತಗ್ಗಿಸೋ ಕೆಲಸ ಮಾಡುತ್ತಿದೆ. ಸಾರಿಗೆ ನಿಗಮಗಳಿಂದ ಆಚರಣೆ ಮಾಡುತ್ತಿರುವ ವಿವಿಧ ಮಾದರಿಯ ಬಸ್‍ಗಳಿಗೆ ಪ್ರತಿ ಕಿ.ಮೀ.ಗೆ ವಿಧಿಸುತ್ತಿರುವ ದರಗಳನ್ನು ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯದ ನಿಗಮಗಳ ಪ್ರಯಾಣ ದರ ಕಡಿಮೆಯಿದೆ ಎನ್ನುವ ಸಮರ್ಥನೆಯ ನಡುವೆನೇ ಹೊಸ ದರ ಜಾರಿಯಾಗಿದ್ದು ಪ್ರಯಾಣಿಕರಿಗೆ ಇದಿ ಹೊರೆಯಾಗಲಿದೆ.
ಎಲ್ಲಿಂದ-ಎಲ್ಲಿಗೆ-ಪ್ರಸ್ತುತ ಪ್ರಯಾಣ ದರ (ರೂ.ಗಳಲ್ಲಿ)- ಪರಿಷ್ಕೃತ ಪ್ರಯಾಣ ದರ (ರೂ.ಗಳಲ್ಲಿ)
ಬೆಂಗಳೂರು-ತುಮಕೂರು-80- 91
ಬೆಂಗಳೂರು-ಮಂಗಳೂರು- 398 – 454
ಬೆಂಗಳೂರು – ಉಡುಪಿ – 452 – 516
ಬೆಂಗಳೂರು- ದಾವಣಗೆರೆ – 320- 362
ಬೆಂಗಳೂರು – ಮೈಸೂರು – 141 – 162
ಬೆಂಗಳೂರು – ಕೋಲಾರ- 74- 85
ಬೆಂಗಳೂರು- ಕಲಬುರಗಿ- 706-805
ಬೆಂಗಳೂರು-ಬೀದರ್- 821-936
ಬೆಂಗಳೂರು- ರಾಯಚೂರು- 560-638
ಬೆಂಗಳೂರು-ಬೆಳಗಾವಿ – 617-697
ಬೆಂಗಳೂರು- ಧಾರವಾಡ-523- 591
ಬಿಎಂಟಿಸಿಯಲ್ಲಿ ಮತ್ತೆ ಚಿಲ್ಲರೆ ಸಮಸ್ಯೆ..!
ಶನಿವಾರ ಮಧ್ಯರಾತ್ರಿಯಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಿದೆ. ಸರ್ಕಾರದ ಆದೇಶದಂತೆ 15% ಟಿಕೆಟ್ ದರ ಏರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೊಸ ಬಸ್ ದರಗಳಲ್ಲಿ ರೌಂಡ್ ಆಫ್ ಕಡಿಮೆ ಇರುವ ಕಾರಣ, ಬಸ್ ಹತ್ತೋ ಮುನ್ನ ಪ್ರಯಾಣಿಕರು ಕೈಯಲ್ಲಿ ಚಿಲ್ಲರೆ ಹಿಡಿದುಕೊಂಡೇ ಏರಿದರೆ, ಕಂಡಕ್ಟರ್ ಜೊತೆ ಗಲಾಟೆ ಮಾಡಿಕೊಳ್ಳೋದು ತಪ್ಪಲಿದೆ.
ಈ ಮೊದಲು ಒಂದು ಸ್ಟೇಜ್ ಗೆ 5 ರೂಪಾಯಿಯನ್ನು ಬಿಎಂಟಿಸಿ ಚಾರ್ಜ್ ಮಾಡುತ್ತಿತ್ತು. ಇದನ್ನೀಗ 6 ರೂಪಾಯಿಗೆ ಏರಿಕೆ ಮಾಡಲಾಗಿದೆ. 2 ಸ್ಟೇಜ್ ಟಿಕೆಟ್ ದರವನ್ನ 10 ರೂಪಾಯಿಯಿಂದ 12 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಏರ್ಪೋಟ್ ಬಿಎಂಟಿಸಿ ಬಸ್ ಟಿಕೆಟ್ ರೇಟ್ ಲಿಸ್ಟ್ ಕೂಡ ಬಿಡುಗಡೆಯಾಗಿದೆ. ಏರ್ಪೋಟ್ ಗೆ ವಾಯುವಜ್ರ ಎಸಿ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಹೀಗಾಗಿ 15% ದರ ಏರಿಕೆಗೆ ಜಿಎಸ್‌ಟಿ ಕೂಡ ಹಾಕಲಾಗಿದೆ. ಟೋಲ್ ದರ ಸೇರಿ ಟಿಕೆಟ್ ರೇಟ್ ಹೆಚ್ಚಳ. ಏರ್ಪೋಟ್ ನಿಂದ ಮೆಜೆಸ್ಟಿಕ್ ಗೆ 250 ರೂಪಾಯಿ ಇದ್ದ ದರ 290 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಈ ಹಿಂದೆ ದರ ಏರಿಕೆ ಮಾಡಿದ್ದ ವೇಳೆಯೂ ಚಿಲ್ಲರೆ ಸಮಸ್ಯೆ ಉಂಟಾಗಿತ್ತು. ಹೀಗಾಗಿ ರೌಂಡಪ್ ಮಾಡಿದ್ದ ನಿಗಮ ಇದೀಗ ಮತ್ತದೇ ಹಳೆ ದರವನ್ನ ಜಾರಿಗೆ ಮಾಡಿದೆ. ಹಾಗಿದ್ರೆ ದರ ಏರಿಕೆ ಬಳಿಕ ಬಸ್ ಪ್ರಯಾಣ ದರ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ.
ಮೆಜೆಸ್ಟಿಕ್ ಟು ಜೆ.ಪಿ ನಗರ ಹಿಂದಿನ ದರ- 20 ರುಪಾಯಿ ಪರಿಷ್ಕೃತ ದರ- 24 ರುಪಾಯಿ
ಮೆಜೆಸ್ಟಿಕ್ ಟು ನಂದಿನಿ ಲೇಔಟ್ ಸದ್ಯ- 25 ಹೊಸ ದರ- 28 ರುಪಾಯಿ
ಮೆಜೆಸ್ಟಿಕ್ ಟು ಯಶವಂತಪುರ ರೈಲ್ವೆ ಸ್ಟೇಷನ್ ಸದ್ಯ- 20 ಹೊಸ ದರ- 23
ಮೆಜೆಸ್ಟಿಕ್ ಟು ಪೀಣ್ಯ ಎರಡನೇ ಹಂತ ಸದ್ಯದ ದರ- 25 ಹೊಸ ದರ- 28
ಮೆಜೆಸ್ಟಿಕ್ ಟು ಅತ್ತಿಬೆಲೆ ಸದ್ಯ- 25 ಹೊಸ ದರ- 30
ಮೆಜೆಸ್ಟಿಕ್ ಟು ವಿದ್ಯಾರಣ್ಯಪುರ ಸದ್ಯದ ದರ- 25 ಹೊಸ ದರ- 28
ಮೆಜೆಸ್ಟಿಕ್ ಟು ದೊಡ್ಡಬಳ್ಳಾಪುರ ಸದ್ಯದ ದರ- 25 ಹೊಸ ದರ- 30
ಮೆಜೆಸ್ಟಿಕ್ ಟು ಬಿಇಎಂಎಲ್ 5 ನೇ ಹಂತ- ಸದ್ಯ- 20 ಹೊಸ ದರ- 24
ಮೆಜೆಸ್ಟಿಕ್ ಟು ಕುಮಾರಸ್ವಾಮಿ ಲೇಔಟ್ ಸಸ್ಯದ ದರ- 25 ಹೊಸ ದರ- 28
ಮೆಜೆಸ್ಟಿಕ್ ಟು ಬಿಟಿಎಂ ಲೇಔಟ್ ಸದ್ಯ- 25 ಹೊಸ- 28