ಬೆಂಗಳೂರು, (www.thenewzmirror.com ) ;
ರಾಜ್ಯದ ಜನತೆಗೆ ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅವುಗಳನ್ನ ಅನುಷ್ಠಾನ ಮಾಡುವ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ತಾಳಿಲ್ಲ. ಈಗಾಗಲೇ ರಾಜ್ಯಾದ್ಯಂತ ಸಾಕಷ್ಟು ವಿರೋಧ ವ್ಯಕ್ತ ಅದ ಹಿನ್ನಲೆಯಲ್ಲಿ 5 ಗ್ಯಾರಂಟಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಗ್ಯಾರಂಟಿಗಳ ಜಾರಿಗೆ ಮಾನದಂಡ ನಿಗದಿ ಮಾಡುವ ಸಾಧ್ಯತೆಯಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಗೃಹ ಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂ, ಸರ್ಕಾರಿ ಬಸ್ ನಲ್ಲಿ ಉಚಿತ ಓಡಾಟ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಪ್ರತಿ ತಿಂಗಳು ಫ್ರಿ, ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ಯುವನಿಧಿ ಯೋಜನೆ ಹಾಗೂ ಯುವಶಕ್ತಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ 3000, ಡಿಪ್ಲೋಮಾ ಆಗಿ ಕೆಲಸ ಸಿಗದವರಿಗೆ 1500 ರೂ ನೀಡುವುದಾಗಿ ಘೋಷಣೆ ಮಾಡಿತ್ತು.
ಪೂರ್ಣ ಹಾಗೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಸದ್ಯ ರಾಜ್ಯದಲ್ಲಿ ಜೋಡೆತ್ತಿನ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ. ಇದರ ನಡುವೆನೇ ರಾಜ್ಯದ ಜನತೆ ಸರ್ಕಾರನೇ ಉಚಿತ ಅಂತ ಹೇಳಿದೆ ಹೀಗಾಗಿ ಕರೆಂಟ್‌ಬಿಲ್ ಕಟ್ಟೋದಿಲ್ಲ, ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳೋದಿಲ್ಲ ಅಂತ ಮಹಿಳೆಯರು ಗಲಾಟೆ ಮಾಡುತ್ತಿದ್ದಾರೆ. ವಿಪಕ್ಷಗಳೂ ಕೂಡ ಯೋಜನೆಯನ್ನ ಶೀಘ್ರದಲ್ಲೇ ಜಾರಿ ಮಾಡಿ ಎಂದು ಒತ್ತಾಯ ಮಾಡುತ್ತಿವೆ.
ಹೀಗೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಸಾಧ್ಯವಾದಷ್ಟು ಬೇಗ 5 ಗ್ಯಾರಂಟಿಗಳನ್ನ ಜಾರಿಗೆ ಕಸರತ್ತನ್ನ ಮಾಡುತ್ತಿದೆ.
ಇದರ ನಡುವೆ ಸಚಿವ ಸಂಪುಟ ಸದಸ್ಯರ ಜತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಸಚಿವರ ಅಭಿಪ್ರಾಯವನ್ನ ಈಗಾಗಲೇ ಪಡೆದಿದ್ದಾರೆ. ಹಾಗೆನೇ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಹೀಗಾಗಿಯೇ ಸಭೆ ಬಳಿಕ 5 ಗ್ಯಾರಂಟಿ ಜಾರಿ ಮಾಡೋದು ಗ್ಯಾರಂಟಿ ಅಂತ ಸಿಎಂ ಗಟ್ಟಿ ಧ್ವನಿಯಲ್ಲಿ ಪುನರುಚ್ಚರಿಸಿದ್ದಾರೆ.
ಆದರೆ ಅಧಿಕಾರಿಗಳ ಸಭೆಯಲ್ಲಿ 5 ಗ್ಯಾರಂಟಿ ಜಾರಿ ಮಾಡಬೇಕಾದರೆ ಒಂದಿಷ್ಟು ಸಲಹೆಗಳನ್ನ ಅಧಿಕಾರಿಗಳು ನೀಡಿದ್ದಾರಂತೆ
5 ಗ್ಯಾರಂಟಿ ಜಾರಿಗೆ 5 ಸಲಹೆಗಳು..!
– ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು
– ಆಸ್ತಿ ತೆರಿಗೆ ಹೆಚ್ಚಳದ ಜತೆಗೆ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಮಾಡಬೇಕು
– ಇಲಾಖಾವಾರು ಬಳಸದೇ ಇರುವ ಅನುದಾನ ಸಮರ್ಪಕ ಬಳಕೆ
– ರಾಜ್ಯಾದ್ಯಂತ ಬಾಕಿ ಇರುವ ಅಕ್ರಮ ಸಕ್ರಮ ಯೋಜನೆ ಶೀಘ್ರದಲ್ಲೇ ಜಾರಿಗೊಳಿಸಬೇಕು
– ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಹೆಚ್ಚಳದ ಜತೆಗೆ ಅಬಕಾರಿ ಇಲಾಖೆಯಿಂದಲೂ ಹೆಚ್ಚಿನ ಆದಾಯ ನಿರೀಕ್ಷೆ
ಹೀಗೆ 5 ಗ್ಯಾರಂಟಿಗಳ ಜಾರಿಗೆ ಅಧಿಕಾರಿಗಳು 5 ಸಲಹೆಗಳನ್ನ ನೀಡಿದ್ದಾರಂತೆ. ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ಇನ್ನಷ್ಟು ವರ್ಕೌಟ್ ಮಾಡಿ ಮಾಹಿತಿ ತರುವಂತೆ ಅಧಿಕಾರಿಗಳಿಗೆ ಸೂಚನಡ ನೀಡಿದ್ದಾರೆಂದು ತಿಳಿದು ಬಂದಿದೆ.
ಸ್ಪಷ್ಟ ಬಹುಮತ ಬಂದಾಗಿನಿಂದಲೂ ಯಾವಾಗ 5 ಗ್ಯಾರಂಟಿಗಳು ಜಾರಿಯಾಗ್ತವೆ ಎನ್ನುವ ಗೊಂದಲಗಳಿಗೆ ನಾಳೆ ತೆರೆ ಬೀಳಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಹೊರಬೀಳಲಿದ್ದು, ಯಾವ ಮಾನದಂಡಗಳ ಆಧಾರದ ಮೇಲೆ ಜಾರಿಯಾಗುತ್ತೆ ಅನ್ನೋ ಕುತೂಹಲ ಮೂಡಿದೆ