ಬೆಂಗಳೂರು, (www.thenewzmirror.com) ;
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದ ಮಾಂಸ ಕುರಿ ಮಾಂಸವೇ ಆಗಿದ್ದು, ನಾಯಿ ಮಾಂಸವಲ್ಲ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಸ್ಪಷ್ಟನೆ ಕೊಟ್ಟಿದ್ದಾರೆ.
ಜುಲೈ 26 ಕ್ಕೆ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಲೋಡ್ಗಟ್ಟಲೇ ಮಾಂಸದ ಬಾಕ್ಸ್ಗಳು ನಾಯಿ ಸ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್ಗಳಲ್ಲಿ ನಾಯಿ ಮಾಂಸದ ಜತೆ ಕುರಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಅಂತ ಆರೋಪ ಮಾಡಿದ್ರು ಪುನೀತ್ ಕೆರೆಹಳ್ಳಿ. ಇದೀಗ ಹೈದರಬಾದ್ ನಿಂದ ಬಂದಿರುವ ವರದಿ ಪುನೀತ್ ಕೆರೆಹಳ್ಳಿ ತಂಡ ಮಾಡಿದ್ದ ಆರೋಪ ಸುಳ್ಳು ಎನ್ನೋದು ಬಹಿರಂಗವಾದಂತಾಗಿದೆ.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್‌ಗಳಲ್ಲಿದ್ದ ಮಾಂಸದ ಮಾದರಿಯನ್ನ ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿ ಆಹಾರ ಮತ್ತು ಸುರಕ್ಷತಾ ಇಲಾಖೆ ಕೈ ಸೇರಿದ್ದು, ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹಾಗೆಂದರೆ ಅದು ಕುರಿಯ ವೈಜ್ಞಾನಿಕ ಹೆಸರಾಗಿದ್ದು, ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಸದ್ಯ ಡಿಎನ್‌ಎ ಪರೀಕ್ಷೆ ಮಾತ್ರ ಮಾಡಲಾಗಿದ್ದು, ಇದರ ಶುಚಿತ್ವದ ಬಗ್ಗೆ ಇನ್ನೊಂದು ಪರೀಕ್ಷೆ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಆ ವರದಿನೂ ಕೈ ಸೇರಲಿದೆ ಅಂತ ತಿಳಿಸಿದ ಶ್ರೀನಿವಾಸ್, ಈಗ ಬಂದಿರುವ ವರದಿಯನ್ನು ಪೊಲೀಸರಿಗೆ ನೀಡಲಾಗುತ್ತೆ ಬಳಿಕ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಾರೆ ಅಂತ ಹೇಳಿದ್ರು.
FSSAI ಗೈಡ್‌ಲೈನ್ಸ್ ಪ್ರಕಾರ ಉದ್ಯಮಿ ರಜಾಕ್ ಕೊಟ್ಟ ದಾಖಲೆ ಎಲ್ಲವೂ ಸರಿಯಾಗಿಯೇ ಇದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಯಿಂದ ನಗರಕ್ಕೆ ಮಾಂಸ ಆಮದಾಗುತ್ತಿದೆ. ಮೀನು, ಕುರಿ ಸೇರಿದಂತೆ ವಿವಿಧ ರೀತಿಯ ಮಾಂಸ ಆಮದಾಗುತ್ತಿದೆ. ಎಲ್ಲವನ್ನೂ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ಮಾಡಿದೆ. ಮುಂದೆಯೂ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.