ಬೆಂಗಳೂರು, (www.thenewzmirror.com );
ರಾಜ್ಯದಲ್ಲಿ ಕೊನೆಗೂ ಗ್ಯಾರಂಟಿಗಳ ಭಾಗ್ಯ ಜನತೆಗೆ ಸಿಕ್ಕಿದೆ. ಐದು ಗ್ಯಾರಂಟಿಗಳ ಪೈಕಿ 200 ಯೂನಿಟ್ ಉಚಿತ ನೀಡಿಕೆ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿದ್ದು 200 ಯೂನಿಟ್ ವರೆಗಿನ ಕರೆಂಟ್ ಗೆ ಇನ್ಮುಂದೆ ಬಿಲ್ ಕಟ್ಟುವಂತಿಲ್ಲ.
ಇಂದು ನಡೆದ ಮಹತ್ವದ ಸಚಿವ ಸಂಪುಟ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು 12 ತಿಂಗಳ ಸರಾಸರಿ ಬಳಕೆ ಮೇಲೆ ಶೇಕಡಾ 10 ರಷ್ಟು ಹೆಚ್ಚಿಗೆ ಮಾಡಿ ಆದೇಶ ಹೊರಡಿಸಿದೆ.
ಉದಾಹರಣೆಗೆ ಒಂದು ಬಿಲ್ ನಲ್ಲಿ ಒಂದು ತಿಂಗಳು 190 ಯೂನಿಟ್ , ಮತ್ತೊಂದು ತಿಂಗಳು 185 ಯೂನಿಟ್ ಬಳಕೆ ಮಾಡಿದ್ದರೆ ಒಟ್ಟಾರೆ 12 ತಿಂಗಳ ಸರಾಸರಿ ಯೂನಿಟ್‌ಬಳಕೆ ಮಾಡಿ ಅದಕ್ಕೆ ಶೇಕಡಾ 10 ರಷ್ಟು ಹೆಚ್ಚಳ ಮಾಡಿ ತೀರ್ಮಾನ ಕೈಗೊಂಡಿದೆ.
ಜುಲೈ ತಿಂಗಳ ವಿದ್ಯುತ್‌ಬಿಲ್ ನಲ್ಲಿ ಈ ಉಚಿತ ಭಾಗ್ಯ ಅನ್ವಯವಾಗಲಿದ್ದು ಆಗಸ್ಟ್ ತಿಂಗಳ ಬಿಲ್ ನಲ್ಲಿ ರಾಜ್ಯದ ಜನತೆಗೆ 200 ಯೂನಿಟ್ ಉಚಿತ ಸಿಗಲಿದೆ.