ಬೆಂಗಳೂರು, (www.thenewzmirror.com) ;
ಪರಿಸರ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಪೆಟ್ರೋಲ್, ಡಿಸೇಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದಾಗಿ ಕಳೆದ ಕೆಲ ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದೆ. ಇದರ ಬೆನ್ನಲ್ಲೇ ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ ಆಫ್ ಎನರ್ಜಿ ಎಫಿಷೊಯೆನ್ಸಿ(BEE) ಬಿಡುಗಡೆ ಮಾಡಿರುವ ಒಂದು ವರದಿ ಇದೀಗ ಇಡೀ ದೇಶವೇ ಕರ್ನಾಟಕದತ್ತ ಮುಖ ಮಾಡುವಂತೆ ಮಾಡಿದೆ.
ಅಚ್ಚರಿ ಅನಿಸಿದರೂ ಇದು ಸತ್ಯ BEE ಬಿಡುಗಡೆ ಮಾಡಿರುವ ವರದಿ ಪ್ರಕಾರ ಕರ್ನಾಟಕ ಇಡಿಒ ದೇಶದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕದ ವಾಹನ ಚಾರ್ಜಿಂಗ್ ಸ್ಟೇಷನ್ (PEVCS)ಹೊಂದಿದೆ ಅಂತ ತಿಳಿದುಬಂದಿದೆ. ಅದರಲ್ಲೂ ಅತಿ ಹೆಚ್ಚಿನ ಪಾಲು ಬೆಂಗಳೂರು ಅನ್ನೋದು ಮತ್ತೊಂದು ವಿಶೇಷ.
ವರದಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 5,765 ಪಿಇವಿಸಿಎಸ್‌ಗಳಿದ್ರೆ, ಅದರಲ್ಲಿ 4,462 ಬೆಂಗಳೂರು ನಗರವೊಂದರಲ್ಲೇ ಇವೆ. 2023 ಮತ್ತು 2024 ರಲ್ಲಿ ವಾಹನ್ ಮತ್ತು ಯಾತ್ರಾ ಪೋರ್ಟಲ್ ಬಿಡುಗಡೆ ಮಾಡಿದ ವರದಿ ಆಧಾರದ ಮೇಲೆ BEE ತನ್ನ ರಿಪೋರ್ಟ್ ಕೊಟ್ಟಿದೆ.
ಬೆಂಗಳೂರು ನಗರ ದಲ್ಲಿ 4,462 ಇವಿ ಚಾರ್ಜಿಂಗ್ ಕೇಂದ್ರಗಳಿದ್ದು, ರಾಜ್ಯದ ಶೇಕಡಾ 85% ಚಾರ್ಜಿಂಗ್ ಸ್ಟೇಷನ್ ಗಳನ್ನ ಹೊಂದಿದ ನಗರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಆ ಮೂಲಕ ಹೆಚ್ಚು ಸುಸ್ಥಿರತೆ ಮತ್ತು ಶುದ್ಧ ಇಂಧನಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎನ್ನೋದರ ಪ್ರತಿಬಿಂಬ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚಾರ್ಜಿಂಗ್ ಸ್ಟೇಷನ್‌ಗಳಿಗೆ ವಿವಿಧ ಮೂಲಗಳಿಂದ ಹಣ ನೀಡಲಾಗಿದೆ. ಕೇಂದ್ರ ಸರ್ಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಯೋಜನೆ, ಬೆಸ್ಕಾಂನ ಸ್ವಂತ ಹೂಡಿಕೆಗಳು, ರಾಜ್ಯ ಸಾರಿಗೆ ಇಲಾಖೆಯಿಂದ ಹಸಿರು ಸೆಸ್ ನಿಧಿಗಳು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ತ್ವರಿತ ಅಡಾಪ್ಷನ್ ಮತ್ತು ಮ್ಯಾನಿಫ್ಯಾಕ್ಚರಿಂಗ್ ಸೇರಿವೆ.
ಕರ್ನಾಟಕ 2017 ರಲ್ಲಿ ಎಲೆಕ್ಟ್ರಾನಿಕ್ ವಾಹನ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಎನ್ನುವ ಖ್ಯಾತಿ ಗಳಿಸಿತ್ತು. ಇದರ ಜತೆಗೆ 2021 ರಿಂದ ಇದನ್ನ ಇನ್ನಷ್ಟು ಒತ್ತು ನೀಡುವ ಕೆಲಸ ಸರ್ಕಾರ ಮಾಡುತ್ತಾ ಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಎಲೆಕ್ಟ್ರಿಕ್ ವೆಹಿಕಲ್ ಗಳನ್ನ ಉತ್ತೇಜಿಸೋ ನಿಟ್ಟಿನಲ್ಲಿ ಬಜೆಟ್ ನಲ್ಲಿ ಪಿಪಿಪಿ(ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ರಾಜ್ಯದಾದ್ಯಂತ ಸುಮಾರು 2,500 ಹೊಸ ಇವಿ ಚಾರ್ಜಿಂಗ್ ಕೇಂದ್ರಗಳು, ಹಾಗೆನೇ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು 35 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು.