ಬೆಂಗಳೂರು, (www.thenewzmirror.com) ;
ದೇಶದ ಸಾರಿಗೆ ಸಂಸ್ಥೆಗಳಲ್ಲಿ ತನ್ನದೇ ಆದ ಮೈಲಿಗಲ್ಲು ಸಾಧಿಸುತ್ತಿರೋ KSRTC ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ನಿಗಮವು ಕೈಗೊಂಡಿರುವ ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ವರ್ಷದ ದೇಶದ ಅತ್ಯುತ್ತಮ ಸಂಸ್ಥೆ ವರ್ಗದಲ್ಲಿ ಟಿವಿ-9 ನೆಟ್ ವರ್ಕ್ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024ರ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.
ನವದೆಹಲಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಗಮದ ವರಿಯಿಂದ ಸಿಬ್ಬಂದಿ ಮತ್ತು ಜಾಗೃತ ದಳ ನಿರ್ದೇಶಕಿ ನಂದಿನಿ ದೇವಿ ಪ್ರಶಸ್ತಿ ಸ್ವೀಕರಿಸಿದ್ರು. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವ ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಹರ್ಷ್ ಮಲೋತ್ರ ಪ್ರಶಸ್ತಿ ಪ್ರದಾನ ಮಾಡಿದ್ರು. ಸಂಸ್ಥೆಯ ಸಾಧನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.