ಬೆಂಗಳೂರು, (www.thenewzmirror.com) ;
ಕೇರಳದ ವಯನಾಡು ಮತ್ತು ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಸಾಕಷ್ಟು ಹಾನಿಯಾಗಿದೆ. ನೂರಾರು ಮಂದಿ ಸೂರನ್ನ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ವಯನಾಡು ಹಾಗೂ ಶಿರೂರು ಸಂತ್ರಸ್ತರಿಗೆ ಇಡೀ ದೇಶವೇ ಮರುಗುತ್ತಿದ್ದ ರಾಜ್ಯ ಸರ್ಕಾರವೂ ಸ್ಪಂದನೆ ಮಾಡುತ್ತಿದೆ. ಇದರ ಬೆನ್ನಲ್ಲೇ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ 9 ಟ್ರಕ್ ಗಳಲ್ಲಿ ಸುಮಾರು ಒಂದೂವರೆ ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಪರಿಹಾರ ಸಾಮಾಗ್ರಿಗಳನ್ನ ಹೊತ್ತ 9 ಟ್ರಕ್ ಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಈ ವೇಳೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಕೂಡ ಹಾಜರಿದ್ದರು. ಇನ್ನೊಂದು ವಿಶೇಷತೆ ಎಂದರೆ ವಯನಾಡು ಭೂ ಕುಸಿತ ಪ್ರದೇಶಕ್ಕೆ ಸ್ವತಃ ಸೌಮ್ಯ ರೆಡ್ಡಿ ತೆರಳಿ ಪರಿಹಾರ ಸಾಮಾಗ್ರಿಗಳನ್ನ ವಿತರಣೆ ಮಾಡಲಿದ್ದು, ಇವರಿಗೆ ಮಾಜಿ ಮಹಾಪೌರ ಮಂಜುನಾಥ್ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯ ನಾಗರಾಜು ಕೂಡ ಸಾಥ್ ನೀಡಲಿದ್ದಾರೆ.
ಕಷ್ಟಗಳಿಗೆ ಮಿಡಿಯುವ ಮನಸ್ಸು ರಾಮಲಿಂಗಾರೆಡ್ಡಿಯದ್ದು..!
ಮಳೆಯಿಂದ ಹಾನಿಯುಂಟಾದ ಸ್ಥಳಗಳಿಗೆ ಪರಿಹಾರ ಸಾಮಾಗ್ರಿ ನೀಡುತ್ತಿರೋದು ಇದೆ ಮೊದಲಲ್ಲ. ಈ ಹಿಂದೆಯೂ ಅಂದರೆ 2019 ರಲ್ಲಿಯೂ ಕೂಡ ಕೊಡಗು ಕೇರಳ ಪ್ರವಾಹ ದುರಂತಕ್ಕೆ 16 ಲಾರಿಗಳಲ್ಲಿ ರೂ.1 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿ, 2020 ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಪ್ರವಾಹದ ದುರಂತದ ಸಮಯದಲ್ಲಿ ಸಹ 20 ಲಾರಿಗಳಲ್ಲಿ ರೂ. 1.25 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿತ್ತು.
ಡಿಸಿಎಂ ರಿಂದ ಅಭಿನಂದನೆ..!
ನೆರೆ ಸಂತ್ರಸ್ತರಿಗೆ ಸ್ಪಂದನೆ ಮಾಡುತ್ತಿರುವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವ್ರಿಗೆ ಡಿಸಿಎಂ ಡಿಕೆ ಶಿವಕುಮಾರ್ ಧನ್ಯವಾದ ಸಲ್ಲಿಸಿದ್ರು. ಕಷ್ಟದಲ್ಲಿ ಇರುವವರಿಗೆ ಸ್ಪಂದನೆ ಮಾಡುವ ನಿಟ್ಟಿನಲ್ಲಿ ಸದಾ ಮುಂದೆ ಇರುತ್ತಾರೆ ಅಂತಾನೂ ಮೆಚ್ಚುಗೆ ವ್ಯಕ್ತಪಡಿಸಿದ್ರು.