ಬೆಂಗಳೂರು, (www.thenewzmirror.com) :
ನಟ ಧ್ರುವ ಸರ್ಜಾ ಪ್ರಯಾಣ ಮಾಡುತ್ತಿದ್ದ ವಿಮಾನ ಕ್ರ್ಯಾಶ್ ಆಗಬೇಕಿತ್ತು. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು ನಟ ಸೇರಿದಂತೆ ಚಿತ್ರ ತಂಡ ಸುರಕ್ಷಿತವಾಗಿದೆ.
ಮಾರ್ಟಿನ್ ಚಿತ್ರದ ಹಾಡಿನ ಶೂಟಿಂಗ್ಗಾಗಿ ಚಿತ್ರತಂಡ ಶ್ರೀನಗರಕ್ಕೆ ತೆರಳಿತ್ತು. ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಶ್ರೀನಗರದಿಂದ ಚಿತ್ರತಂಡ ದೆಹಲಿಗೆ ಬರುತ್ತಿತ್ತು. ಹಾಡಿನ ಚಿತ್ರೀಕರಣ ಮುಗಿಸಿದ್ದ ಸರ್ಜಾ ವಿಮಾನ ವಾಪಾಸ್ ಮರಳುತ್ತಿತ್ತು ಈ ವೇಳೆ ವಿಮಾನ ಕ್ರ್ಯಾಶ್ ಆಗುವ ಸಂಭವವಿತ್ತು ಮಾಟಿ ಚಿತ್ರತಂಡ ಬಚಾವ್ ಆಗಿದೆ.
ಇಂಡಿಗೋ ಫ್ಲೈಟ್ ನಲ್ಲಿ ಮಾರ್ಟಿನ್ ಚಿತ್ರತಂಡ ತೆರಳುತ್ತಿತ್ತು. ಈ ವೇಳೆ ಕೂದಲೆಳೆ ಅಂತರದಲ್ಲಿ ಮಾರ್ಟೀನ್ ಚಿತ್ರ ತಂಡ ಪಾರಾಗಿದೆ ಎಂದು ಹೇಳಲಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ವೇಳೆ ಬಚಾವಾಗಿದ್ದಾರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ನಂತರ ವಿಮಾನದಲ್ಲಿ ಧ್ರುವ ಸರ್ಜಾ ಮಾತನಾಡಿದ್ದು ಇದೊಂದು ಕೆಟ್ಟ ಅನುಭವ ಆಗಿದ್ದು. ನಮ್ಮ ಚಿತ್ರತಂಡಕ್ಕೆ ಯಾವುದೇ ರೀತಿಯಾದ ಅಪಾಯವಾಗಿಲ್ಲ ಎಲ್ಲರೂ ಸುರಕ್ಷಿತವಾಗಿದ್ದೇವೆ. ಜೈ ಆಂಜನೇಯ ಜೈ ಶ್ರೀ ರಾಮ್ ಎಂದು ತಿಳಿಸಿದ್ದಾರೆ.