ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ಸೂಸೈಡ್ ಮಾಡಿಕೊಂಡಿದ್ದಾರೆ. ಅಮಾನತ್ತಾಗಿದ್ದರಿಂದ ಖಿನ್ನತೆಗೆ ಒಳಗಾಗಿ ಈ ಕೃತ್ಯ ಮಾಡಿಕೊಂಡ್ರಾ ಅನ್ನೋ ಅನುಮಾನ ಮೂಡುತ್ತಿದೆ.
ಸದ್ಯ ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ತಿಮ್ಮೇಗೌಡ ಕಾರ್ಯನಿರ್ವಹಿಸುತ್ತಿದ್ದ ಅವರು, ರಾಮನಗರ ಜಿಲ್ಲೆಯ ಬಿಡಿದಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನಲ್ಲಿ ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮೇಗೌಡರನ್ನ ಈ ಹಿಂದೆ ಅಮಾನತ್ತಾಗಿದ್ದರು.
ರಾಮನಗರ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತಿಮ್ಮೇಗೌಡ ಅವರ ಕುಟುಂಬಸ್ಥರು ಬಂದಿದ್ದಾರೆ. ಸ್ಥಳದಲ್ಲಿ ಸದ್ಯ ಯಾವುದೇ ಮರಣಪತ್ರ ದೊರೆತಿಲ್ಲ. ಲೋಕಾಯುಕ್ತದಲ್ಲಿ ತಿಮ್ಮೇಗೌಡ ಅವರ ವಿರುದ್ಧ ಇತ್ತೀಚೆಗೆ ಪ್ರಕರಣವೊಂದು ದಾಖಲಾಗಿತ್ತು.
ಅಲ್ಲದೇ
ಕಳೆದ ವರ್ಷ ಅತ್ತಿಬೆಲೆಯಲ್ಲಿ ಕಾರ್ಯನಿರ್ವಹಿಸುವಾಗ ಆನೇಕಲ್‌ನಲ್ಲಿ ಪಟಾಕಿ ದುರಂತ ನಡೆದಿತ್ತು.. ಆಗ ಇಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ತಿಮ್ಮೇಗೌಡ ಪಟಾಕಿ ಅಂಗಡಿಗೆ ಅನುಮತಿ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅವರನ್ನ ಅಮಾನತು ಮಾಡಲಾಗಿತ್ತು. ನಂತರ ನಡೆದ ಇಲಾಖಾ ವಿಚಾರಣೆ ವೇಳೆ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಕ್ಲೀನ್ ಚಿಟ್ ಸಿಕ್ಕಿದ್ದರೂ ತೀವ್ರ ಖಿನ್ನತೆಗೆ ಒಳಗಾಗಿದ್ರು ಎಂದು ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. 2003ರ ಬ್ಯಾಚ್‌ನಲ್ಲಿ ತಿಮ್ಮೇಗೌಡ ಅವರು ಇಲಾಖೆಗೆ ಸೇರಿದ್ದರು.