ಮುಂಗಾರು ಮಳೆಗೆ ಮೈದುಂಬಿದ ಜೋಗ ಜಲಪಾತ

RELATED POSTS

ಶಿವಮೊಗ್ಗ(www.thenewzmirror.com): ಮುಂಗಾರು ಆರಂಭವಾಗುತ್ತಿದ್ದಂತೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ದುಮ್ಮಿಕ್ಕುತ್ತಿರುವ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು,ಜೋಗ್ ಫಾಲ್ಸ್ ನೋಡಲು ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.

ಬೇಸಿಗೆಯಲ್ಲಿ ನೀರಿಲ್ಲದ‌ ಸೊರಗಿದ್ದ ಜೋಗಜಲಪಾದ ಇದೀಗ ಮುಂಗಾರು ಮಳೆಗೆ ದುಮ್ಮಿಕ್ಕುತ್ತಿದೆ.ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಮೈದುಂಬಿಕೊಂಡಿವೆ. ಇವುಗಳನ್ನು ಕಣ್ತುಂಬಿಕೊಳ್ಳಲು ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲಿಯು ಪ್ರವಾಸಿಗರು ಆಗಮಿಸುತ್ತಿದ್ದಾರೆ.ಮಂಜಿನ‌ ಕಣ್ಣಾ ಮುಚ್ಚಾಲೆ ಆಟದ ನಡುವೆ ಪ್ರವಾಸಿಗರು ಸೆಲ್ಫಿ, ಫೋಟೊ ಕ್ಲಿಕ್ಕಿಸಕೊಳ್ಳುತ್ತಿದ್ದಾರೆ.

ಶರಾವತಿ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಜಲಪಾತ ತನ್ನ ವೈಭವವನ್ನು ಮರಳಿ ಪಡೆದುಕೊಂಡಿದೆ ಹಾಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗದ ಕಡೆ ಮುಖ ಮಾಡುತ್ತಿದ್ದಾರೆ.

ಇನ್ನು ಶಿವಮೊಗ್ದದಿಂದ ಸ್ಥಳೀಯ ಟೂರಿಸ್ಟ್ ಸಂಸ್ಥೆಗಳು ಒನ್ ಡೆ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಆಯೋಜಿಸುತ್ತಿದ್ದಾರೆ. ಬೆಳಗ್ಗೆ ಶಿವಮೊಗ್ಗದಿಂದ ಕರೆದೊಯ್ದು ರಾತ್ರಿ ವಾಪಸ್ ಕರೆ ತರಲಿದ್ದು ಉಪಹಾರ, ಊಟದ ಜೊತೆ ಜಲಪಾತ ವೀಕ್ಷಣೆಯ ಪ್ಯಾಕೇಜ್ ನೊಂದಿಗೆ ಟೂರ್ ಆಯೋಜನೆ ಮಾಡುತ್ತಿದ್ದು ಪ್ರವಾಸೋದ್ಯಮಕ್ಕೂ ಮುಂಗಾರ ಒಳ್ಳೆಯ ಆರಂಭ ನೀಡಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist