ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ ; ಯಾರಿಗೆಲ್ಲಾ ಅಧ್ಯಕ್ಷ ಪಟ್ಟಿ ಇಲ್ಲಿದೆ FULL ಲಿಸ್ಟ್.

ಬೆಂಗಳೂರು, (www.thenewzmirror.com);

ರಾಜ್ಯದಲ್ಲಿ ಹಲವು ತಿಂಗಳಿನಿಂದ ಖಾಲಿ ಇದ್ದ ನಿಗಮ ಮಂಡಳಿಗಳಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಂತ ನಿಗಮ ಮಂಡಳಿ ನೇಮಕಾತಿ ಪಟ್ಟಿ ಹೊರ ಬಿದ್ದಂತೆ ಆಗಿದೆ.

RELATED POSTS

ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ನಡವಳಿ ಹೊರಡಿಸಿದ್ದು, ಈ ಕೆಳಕಂಡವರಿಗೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು 9 ತಿಂಗಳ ಬಳಿಕ ಪಟ್ಟಿ ಅಂತಿಮಾಡಿದ್ದು 34 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ.

ಬಿಡಿಎ ಅಧ್ಯಕ್ಷ ಸ್ಥಾನ  ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಆಪ್ತ ಶಾಸಕ ಎನ್.ಎ. ಹ್ಯಾರಿಸ್ ಪಾಲಾಗಿದೆ. ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಪ್ರಮುಖಗಳಾದ ಗೃಹ ಮಂಡಳಿಗೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗುಬ್ಬಿ ಶಾಸಕ ಎಸ್‌.ಆರ್.‌ ಶ್ರೀನಿವಾಸ್‌ ಅವರನ್ನು ನೇಮಕ ಮಾಡಲಾಗಿದೆ.

ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ

ಎರಡು ಮೂರು ಬಾರಿ ಗೆದ್ದ ಶಾಸಕರಿಗೆ ಮಾತ್ರ ಮಣೆ

ಮೊದಲೇ ಹೇಳಿದಂತೆ ಮೊದಲ ಬಾರಿ ಗೆದ್ದ ಶಾಸಕರಿಗೆ ಈ ಬಾರಿ ಅವಕಾಶ ನೀಡಲಾಗಿಲ್ಲ. ಎರಡು, ಮೂರು ಬಾರಿ ಗೆದ್ದ ಶಾಸಕರಿಗೆ ಮಾತ್ರ ಮಣೆ ಹಾಕಲಾಗಿದೆ. ಮೊದಲ ಬಾರಿ ಗೆದ್ದ ಶಾಸಕರು ಒತ್ತಡ ಹಾಕಿದರೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೊಪ್ಪು ಹಾಕಿಲ್ಲ.

ಅಪ್ಪ ಮಂತ್ರಿ, ಮಗಳಿಗೆ ನಿಗಮ ಮಂಡಳಿ ಭಾಗ್ಯ!

ಒಂದೇ ಸರ್ಕಾರದಲ್ಲಿ ಅಪ್ಪ ಮಂತ್ರಿಯಾಗಿದ್ದರೆ, ಮಗಳಿಗೆ ನಿಗಮ ಮಂಡಳಿ ಭಾಗ್ಯ ದೊರೆತಿದೆ. ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಮಗಳು ರೂಪಕಲಾಗೆ ಅವರಿಗೆ ಸ್ಥಾನ ಕೊಡಲಾಗಿದೆ. ಕರ್ನಾಟಕ ಕರಕುಶಲ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ರೂಪಕಲಾ ಅವರನ್ನು ಆಯ್ಕೆ ಮಾಡಲಾಗಿದೆ

ಶಾಸಕರಿಗೆ ನೀಡಿರುವಂತ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಲೀಸ್ಟ್

• ಹಂಪನಗೌಡ ಬಾದರ್ಲಿ – ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ

• ಅಪ್ಪಾಜಿ ಸಿಎಸ್ ನಾಡಗೌಡ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್

• ಭರಮಗೌಡ ಅಲಗೌಡ ಕಾಗೆ – ಹುಬ್ಬಳ್ಳಿ ಸಾರಿಗೆ ನಿಗಮ

• ಯಮುನಪ್ಪ ವೈ ಮೇಟಿ – ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ

• ಎಸ್ ಆರ್ ಶ್ರೀನಿವಾಸ್ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

• ಬಸವರಾಜ್ ನೀಲಪ್ಪ ಶಿವಣ್ಣನವರ್ – ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ

• ಬಿಜಿ ಗೋವಿಂದಪ್ಪ – ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

• ಹೆಚ್ ಸಿ ಬಾಲಕೃಷ್ಣ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

• ಜಿಎಸ್ ಪಾಟೀಲ್ – ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಯಮಿತ

• ಎನ್ ಎ ಹ್ಯಾರೀಸ್ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

• ಕೌಜಲಗಿ ಮಹಾಂತೇಶ್ ಶಿವಾನಂದ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

• ಪುಟ್ಟರಂಗಶೆಟ್ಟಿ – ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್

• ಜೆಟಿ ಪಾಟೀಲ್ – ಹಟ್ಟಿ ಚಿನ್ನದಗಣಿ

• ಎಸ್ ಎನ್ ನಾರಾಯಣಸ್ವಾಮಿ – ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಮಕಾಸು ನಿಗಮ ನಿಯಮಿತ

• ಪಿಎಂ ನರೇಂದ್ರಸ್ವಾಮಿ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

• ಟಿ ರಘುಮೂರ್ತಿ – ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ

• ಎ ಬಿ ರಮೇಶ್ ಬಂಡಿ ಸಿದ್ದೇಗೌಡ – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ

• ರಾಜಾ ವೆಂಕಟಪ್ಪ ನಾಯಕ್ – ಕರ್ನಾಟಕ ರಾಜ್ಯ ಉಗ್ರಾಹಣ ನಿಗಮ

• ಬಿಕೆ ಸಂಗಮೇಶ್ – ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ, ಲ್ಯಾಂಡ್ ಆರ್ಮಿ

• ಕೆಎಂ ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ

• ಅಬ್ಬಯ್ಯ ಪ್ರಸಾದ್ – ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ

• ಬಿಕೆ ಗೋಪಾಲಕೃಷ್ಣ ಬೇಳೂರು – ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ

• ಬಿ ಶಿವಣ್ಣ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

• ಎಸ್ ಎನ್ ಸುಬ್ಬಾರೆಡ್ಡಿ – ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ

• ವಿನಯ್ ಕುಲಕರ್ಣಿ- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

• ಅನಿಲ್ ಚಿಕ್ಕಮಾದು – ಜಂಗಲ್ ಲಾಡ್ಜಸ್

• ಬಸವನಗೌಡ ದದ್ದಲ್ – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

• ಕನೀಜ್ ಫಾತಿಮಾ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ

• ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ – ಕರ್ನಾಟಕ ಕ್ರೀಡಾ ಪ್ರಾಧಿಕಾರ

• ಶ್ರೀನಿವಾಸ ಮಾನೆ – ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು

• ಟಿಡಿ ರಾಜೇಗೌಡ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ

• ರೂಪಕಲಾ ಎಂ – ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist