ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಸಂಭವನೀಯ ಆಯ್ಕೆಪಟ್ಟಿ ಪ್ರಕಟಿಸಿದ ಕೆಎಸ್ಆರ್ಟಿಸಿ

RELATED POSTS

ಬೆಂಗಳೂರು(www.thenewzmirror.com):2020ರ ಫೆಬ್ರವರಿ 14ರ ಜಾಹೀರಾತಿನನ್ವಯ ಚಾಲಕ-ಕಂ-ನಿರ್ವಾಹಕ ಹುದ್ದೆಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ನಿಗಮದ ಕೇಂದ್ರ ಕಛೇರಿ, ಶಾಂತಿ ನಗರ, ಬೆಂಗಳೂರು-27 ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್-ಸೈಟ್ ಆದ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ.

ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕಗಳು ಹಾಗೂ ಹುಟ್ಟಿದ ದಿನಾಂಕದ ವಿವರಗಳನ್ನು ಕೆಎಸ್ಆರ್ಟಿಸಿ ಪ್ರಕಟಿಸಿದೆ. ಈ ಸಂಭವನೀಯ ಆಯ್ಕೆಪಟ್ಟಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ದಿನಾಂಕ: 11-06-2025 ರ ಸಂಜೆ 5.30 ರ ಒಳಗಾಗಿ ಕರಾರಸಾ ನಿಗಮ, ಕೇಂದ್ರ ಕಛೇರಿ, ನೇಮಕಾತಿ ಶಾಖೆ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ನಿಗಮದ ಅಧಿಕೃತ ಇ-ಮೇಲ್ [email protected] ಮುಖಾಂತರ ಸಲ್ಲಿಸಲು ತಿಳಿಸಲಾಗಿದೆ. ದಿನಾಂಕ: 11-06-2025 ರ ನಂತರ ಸ್ವೀಕರಿಸಲಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಕೆಎಸ್ಆರ್ಟಿಸಿ ತಿಳಿಸಿದೆ.

ವಿಶೇಷ ಸೂಚನೆ:- ಸದರಿ ನೇಮಕಾತಿಯು ಪಾರದರ್ಶಕವಾಗಿದ್ದು ಯಾವುದೇ ಆಮಿಷ/ ಅವ್ಯವಹಾರದಲ್ಲಿ ಅಭ್ಯರ್ಥಿಗಳು ತೊಡಗಬಾರದೆಂದು ಅಧ್ಯಕ್ಷರು, ಆಯ್ಕೆ ಸಮಿತಿ/ನಿರ್ದೇಶಕರು (ಸಿ & ಜಾ) ಸೂಚಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist