ಬೆಂಗಳೂರು, (www.thenewzmirror.com) ;
ಶಕ್ರಿ ಯೋಜನೆ ಜಾರಿ ಆದಮೇಲೆ ಸಾರಿಗೆ ನಿಗಮಗಳಲ್ಲಿ ಭ್ರಷ್ಟಚಾರ ಕಡಿಮೆಯಾಗುತ್ತೆ.., ನಷ್ಟದಲ್ಲಿರುವ ಸಂಸ್ಥೆಗಳು ಲಾಭದತ್ತ ಮುಖ ಮಾಡುತ್ತವೆ, ಹಾಗೆನೇ ನಿಯಮಗಳು ಯಥಾವತ್ತಾಗಿ ಫಾಲೋ ಆಗ್ತವೆ ಅಂತೆಲ್ಲ ಭಾವಿಸಲಾಗಿತ್ತು. ಆದರೆ ಅದೆಲ್ಲ ಪುಸ್ತಕದ ಬದನೆಕಾಯಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
KSRTC ಯಲ್ಲಿ ಕೆಲ ಅಧಿಕಾರಿಗಳಿಗಡ ರೂಲ್ಸ್ ಇರೋದೇ ಬ್ರೇಕ್ ಮಾಡೋದಿಕ್ಕೆ ಅನ್ನೋ ಹಾಗೆ ವರ್ತನೆ ಮಾಡ್ತಿದ್ದಾರೆ. ನಿಯಮಗಳು ಮಾಡಿ ಇಟ್ಟಿದ್ದಾರೆ ಅದನ್ನ ನಾನ್ಯಾಕೆ ಫಾಲೋ ಮಾಡ್ಬೇಕು ಅಂತ ಕೆಲ ಹಣಬಾಕ ಅಧಿಕಾರಿಗಳು ಅದನ್ನೇ ಬಂಡವಾಳವನ್ನಾಗಿಸಿಕೊಂಡು ಶ್ರಮಿಕ ವರ್ಗದವರ ಹತ್ರ ಹಣ ಪೀಕುತ್ತಿದ್ದಾರೆ. ರಾಜಾರೋಷವಾಗಿ ಲಂಚದ ರೂಪದಲ್ಲಿ ಎಂಜಲು ಕಾಸು ಕಿತ್ತುಕೊಳ್ಳದಲ್ಲದೆ ಅದನ್ನ ರಾಜರೋಷವಾಗಿ ಏಣಿಸಿ ಜೇಬಿಗೆ ಇಳಿಸಿಕೊಳ್ತಿದ್ದಾರೆ.
KSRTC ಯಲ್ಲಿ ನಿಗಮದ ಹಿತ ಹಾಗೂ ಆದಾಯ ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ G.S.O. No.21, Date- 31/12/1958 ರಲ್ಲಿ ಒಂದಷ್ಟು ನಿರ್ದೇಶನ ನೀಡಲಾಗಿತ್ತು. ಈ ನಿರ್ದೇಶನದ ಪ್ರಕಾರ ನಿರ್ವಾಹಕರ ಮಾರ್ಗ ಪತ್ರಕ್ಕೆ ಆಯಾ ನಿಲ್ದಾಣದಲ್ಲಿ ನಿಗಧಿಪಡಿಸಿದ ಟಿಸಿ(ಟ್ರಾಫಿಕ್ ಕಂಟ್ರೋಲರ್) ಪ್ರತಿ ವಾಹನ(ಬಸ್) ದಲ್ಲಿ ಇರುವ ಎಲ್ಲಾ ಪ್ರಯಾಣಿಕರಿಗೆ ಚೀಟಿ ವಿತರಣೆ ಮಾಡಿರುವ ಬಗ್ಗೆ ಭೌತಿಕವಾಗಿ ಖಚಿತ ಪಡಿಸಿಕೊಂಡ ಬಳಿಕ ನಿರ್ವಾಹಕರ ಮಾರ್ಗ ಪತ್ರಕ್ಕೆ ಸಹಿಯನ್ನು ಹಾಕಬೇಕು ಅನ್ನೋದು ಉಲ್ಲೇಖವಾಗಿದೆ.
ಈ ನಿಯಮವಿದ್ದರೂ ಬಹುತೇಕ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಿಸಿತಾವು ಕೂತಲ್ಲಿಯೇ ಕುರ್ಚಿ ಬಿಸಿ ಮಾಡಿಕೊಂಡು ನಿರ್ದೇಶನಗಳನ್ನು ಉಲ್ಲಂಘಿಸಿ ವಾಹನಗಳ ಬಳಿ ಹೋಗಿ ಬಸ್ಸಿನಲ್ಲಿ ಇರುವ ಎಲ್ಲಾ ಪ್ರಯಾಣಿಕರಿಗೆ ಚೀಟಿ ವಿತರಣೆ ಮಾಡಿರುವ ಬಗ್ಗೆ ಭೌತಿಕವಾಗಿ ಖಚಿತ ಪಡಿಸಿಕೊಳ್ಳದೆ ಕುರ್ಚಿಯಲ್ಲಿ ಕುಳಿತು ಕೊಂಡು ನಿರ್ವಾಹಕರ ಮಾರ್ಗ ಪತ್ರಕ್ಕೆ ಸಹಿ ಹಾಕುವ ಕೆಲಸ ಮಾಡ್ತಿದ್ದಾರೆ. ಅದು ಅಷ್ಟಕ್ಕೆ ಸುಮ್ಮನಾದರೆ ವಿಶೇಷತೆ ಇರುತ್ತಾ ಇರಲಿಲ್ಲ. ಸಹಿ ಹಾಕಿದ ಕೂಡಲೇ ನಿರ್ವಾಹಕ ಐದು ರುಪಾಯಿನೋ ಇಲ್ಲ ಹತ್ತು ರುಪಾಯಿನೋ ಹಣ ಟಿಸಿ ಕೈಗೆ ಇಡಬೇಕು. ಇಲ್ಲಾಂದ್ರೆ ಅವಾಚ್ಯ ಶಬ್ದಗಳ ಮೂಲಕ ನಿಂದನೆ ಶುರುವಾಗಿ ಬಿಡುತ್ತೆ.
ದಿ ನ್ಯೂಝ್ ಮಿರರ್ ಗೆ ಸಿಕ್ಕ ವೀಡಿಯೋ ಪ್ರಕಾರ ಮೈಸೂರು ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಮುನಿಸ್ವಾಮಿ ಗೌಡ ಎನ್ನುವ ಟಿಸಿ, ತಮಗೆ ಬೇಕಾದವರಿಗೆ ಹಣ ಪಡೆದು ನಿರ್ವಾಹಕರುಗಳಿಗೆ ಎಂಟ್ರಿ ಹಾಕಿ ಕಳುಹಿಸಿ ಕೊಡುವ ಕೆಲ್ಸ ಮಾಡ್ತಿದ್ದಾರೆ. ಈ ಅಧಿಕಾರಿಗೆ ಹಣ ಕೊಟ್ಟರೆ ಸಾಕು ಸಮಯಕ್ಕೆ ಮುಂಚೆ ರೂಟ್ ಗೆ ಕಳುಹಿಸೋದು, ಸಮಯ ಕಳೆದ ನಂತರ ಬಂದರೂ ರೂಟ್ ಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರಂತೆ. ಆಗಸ್ಟ್ 22 ರಂದು ಮೈಸೂರು ಬಸ್ ನಿಲ್ದಾಣದಲ್ಲಿ ಹಾಡ ಹಗಲೇ ನಿರ್ವಾಹಕರಿಂದ ಹಣ ಪಡೆದು ಮಾರ್ಗ ಚೀಟೊಗೆ ಸೀಲು, ಸಹಿ ಹಾಕುವ ಕೆಲಸ ಮಾಡುತ್ತಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಜೇಬಿನಲ್ಲೇ ಇರುತ್ತೆ ನಿಗಮದ ಸೀಲ್…!
ಮೈಸೂರು ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಟಿಸಿ ಮುನಿಸ್ವಾಮಿ ಗೌಡ ನಿಗಮದ ಸೀಲ್ ತನ್ನ ತನ್ನ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಾ ಇರುತ್ತಾರೆ. ಸಂಸ್ಥೆಯ ಸೀಲ್ ಅನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಮೊದಲು ಸೈನ್ ಮಾಡಿ ಆನಂತರ ತಮ್ಮ ಜೇಬಿನಲ್ಲಿ ಇಟ್ಟುಕೊಂಡ ಸೀಲ್ ಅನ್ನ ತೆಗೆದು ಸೀಲ್ ಒತ್ತಿದ ತಕ್ಷಣವೇ ನಿರ್ವಾಹಕ ಟಿಸಿ ಫಿಕ್ಸ್ ಮಾಡಿದ ಹಣವನ್ನ ಮಚದ ರೂಪದಲ್ಲಿ ಕೊಟ್ಟು ಬಿಡ್ಬೇಕು. ಹೀಗೆ ಅಲಿಖಿತ ನಿಯಮದ ಪ್ರಕಾರ ಪ್ರತಿ ಬಸ್ ನ ಮಾರ್ಗ ಚೀಟಿಗೆ ಸೀಲು ಸಹಿ ಹಾಕಿದ ತಕ್ಷಣ ಹಣ ಕೊಡ್ಲೇಬೇಕು.
ದಿನದ ಕಲೆಕ್ಷನ್ ಅನ್ನ ನಿಲ್ದಾಣದಲ್ಲೇ ಏಣಿಸ್ತಾರೆ..!.
ಮೈಸೂರು ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಟಿಸಿ ಮುನಿಸ್ವಾಮಿ ಗೌಡ ಆಯಾ ದಿನದ ಕಲೆಕ್ಷನ್ ಅನ್ನ ಅಂದೇ ಏಣಿಸುತ್ತಾರೆ. ಈ ದಿನದ ಕಲೆಕ್ಷನ್ ಎಷ್ಟಾಗಿದೆ ಅಂತ ಪ್ರತಿ ನಿರ್ವಾಹಕರಿಂದ ಕೈಯೊಡ್ಡಿ ಲಂಚದ ರೂಪದಲ್ಲಿ ಬೇಡಿಕ ಹಣವನ್ನ ಜೇಬಿನಿಂದ ತೆಗೆದಯ ಏಣಿಸುತ್ತಿರೋದೂ ವೀಡಿಯೋದಲ್ಲಿ ಸೆರೆಯಾಗಿದೆ.
ಪ್ರತಿ ಬಸ್ ನಿಂದ ಐದು, ಹತ್ತು ರುಪಾಯಿ ಪಡೆಯುವ ಈತ ಈ ಪಾಲನ್ನ ತಾನೊಬ್ಬನೇ ಇಟ್ಟುಕೊಳ್ಳೋದಿಲ್ಲವಂತೆ ಈತನ ಮೇಲಿರೋ ಅಧಿಕಾರಿಗಳಿಗೂ ಸ್ವಲ್ಪ ಸ್ವಲ್ಪ ಕೊಡ್ತಾರಂತೆ. ಹೀಗಾಗಿಯೇ ಆಯಾ ದಿನದ ಟಾರ್ಗೇಟದ ಫಿಕ್ಸ್ ಮಾಡಿ ಇಂತಿಷ್ಟು ಹಣ ಮಾಡಿಕೊಂಡೇ ಆ ದಿನದ ಕೆಲ್ಸ ಮುಗಿಸುತ್ತಾರಂತೆ. ಇಂಥದೊಂದು ಸುದ್ದಿ ಮೈಸೂರು ಬಸ್ ನಿಲ್ದಾಣದಲ್ಲಿ ಮೊಬೈಲ್ ನೆಟ್ ವರ್ಕ್ ಗಿಂತ ಸ್ಪೀಡಾಗಿ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ ಒಂದು ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿ ಸಿಕ್ಕಿಬಿದ್ದಿದ್ದ ಕೆಲ ಟಿಸಿಗಳನ್ನ ಇದೇ ಸಾರಿಗೆ ನೌಕರರ ಸಂಘಟನೆ ಮುಖಂಡರು ಬಚಾವ್ ಮಾಡಿದ್ದರಂತೆ. ಮಂಗಳೂರಿನಿಂದ ಬೆಂಗಳೂರಿಗೆ ಬರ್ತಿದ್ದ ಬಸ್ ಸಂಸ್ಥೆ ನಿಗಧಿಪಡಿಸಿದ ಬಸ್ ನಿಲ್ದಾಣದಲ್ಲಿ ಟಿಸಿಗಳ ಮಾರ್ಗ ಚೀಟಿಗೆ ಸಹಿ ಹಾಕಿಸಿಕೊಂಡು ಬಸ್ ಮೆಜೆಸ್ಟಿಕ್ ಬಂದು ತಲುಪಿತ್ತು. ಈ ವೇಳೆ ಪ್ರಯಾಣಿಕರನ್ನ ಇಳಿಸಿ ಡಿಪೋಗೆ ತೆರಳುವ ವೇಳೆಗೆ ನಿಗಮದ ಇತರ ಸಿಬ್ಬಂದಿ ಬಸ್ ಹತ್ತಿದ್ರು. ಇದೇ ಸಮಯವನ್ನ ಕಾದು ಹೊಂಚು ಹಾಕುತ್ತಿದ್ದ ತನಿಖಾ ಸಿಬ್ಬಂದಿ, ಶಾಂತಲಾ ಸಿಲ್ಕ್ ಸಿಗ್ನಲ್ ಬಳಿ ಮಂಗಳೂರಿನಿಂದ ಬೆಂಗಳೂರಿನಗೆ ಬಂದ ಬಸ್ ಹತ್ತೇ ಬಿಟ್ಟಿದ್ರು. ಗಾಡಿಯಲ್ಲಿ ಇದ್ದಿದ್ದು ತಮ್ಮ ಇಲಾಖೆ ಸಿಬ್ಬಂದಿ ಅಂತ ಗೊತ್ತಿದ್ರೂ ಮಂಗಳೂರಿನಿಂದ ಬೆಂಗಳೂರಿಗೆ ಬರುವಾಗ ಐದು ಟಿಕೆಟ್ ನೀಡಿಲ್ಲ ಅಂತ ಮೆಮೊ ಕೊಟ್ಟು ನಿರ್ವಾಹಕರನ್ನ ಕೆಲ್ಸದಿಂದ ತೆಗೆಯುವ ಕೆಲಸ ಮಾಡಿದ್ದಂತೆ ಅಂತ ನೊಂದ ನಿರ್ವಾಹಕರೊಬ್ಬರು ಅಳಲನ್ನ ತೋಡಿಕೊಂಡ್ರು
ಯಾವಾಗ ಮೆಮೊ ಕೊಟ್ರೋ ಆಗ್ಲೇ ನೋಡಿ ಅನಂತ್ ಸುಬ್ಬರಾವ್ ಎಂಟ್ರಿ ಆದ್ರು ಇದರಲ್ಲಿ ತಮ್ಮ ನಿರ್ವಾಹಕನ ತಪ್ಪೆನೂ ವಾದ ಮಾಡಿದ್ರು. ಆಗ ವಿಚಾರಣೆ ವೇಳೆ ಮಂಗಳೂರು ಟು ಬೆಂಗಳೂರು ನಡುವೆ ಮಾರ್ಗ ಚೀಟಿಗೆ ಸಹಿ ಹಾಕಿದ್ದ ಎಲ್ಲ ಟಿಸಿಗಳನ್ನ ಕರೆಸಿ ವಿಚಾರಣೆ ಮಾಡಿದಾಗ ನಿರ್ವಾಹಕನ ತಪ್ಪಿಲ್ಲ ಅನ್ನೋದು ಸಾಬೀತಾಗಿತ್ತು. (ಅಂದೂ ಇದೇ ಟಿಸಿಗಳು ಕುರ್ಚಿಯಲ್ಲೇ ಕೂತು ಮಾರ್ಗ ಪತ್ರಕ್ಕೆ ಸಹಿಹಾಕಿದ್ರು.)
ನಿಗಮದಲ್ಲಿ ಹೀಗೆ ಹಣಬಾಕ ಅಧಿಕಾರಿಗಳು ಇರುವ ವರೆಗೂ ಸಂಸ್ಥೆಗೆ ಒಳ್ಳೆ ಹೆಸರು ಬರೋದಿಕ್ಕೆ ಸಾಧ್ಯ ಆಗ್ತಾನೇ ಇಲ್ಲ. ಎಷ್ಟೇ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದ್ರೂ ಇಂಥ ಹಣಬಾಕ ಅಧಿಕಾರಿಗಳ ಕೈಗೆ ಬೀಗ ಹಾಕದೆ ಹೊರ್ತು ಏನೂ ಪ್ರಯೋಜನವಾಗೋದಿಲ್ಕ.
ಕ.ರಾ.ರ.ಸಾ. ಸಂಸ್ಥೆಯ ನೌಕರರ ( ಶಿಸ್ತು ಮತ್ತು ನಡತೆ) ನಿಯಮಾವಳಿ 1971 ರಲ್ಲಿನ ಭಾಗ-2 ರ ನಿಯಮ 3 ರ ಉಪನಿಯಮ 1(1) (11) (111) ಉಲ್ಲಂಘಿಸಿರುವ ಈ ಅಧಿಕಾರಿ ವಿರುದ್ಧ ತನಿಖೆ ನಡೆಸುವ ಜತೆಗೆ ಅಮಾನತ್ತು ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಹಾಗೆನೇ ಕಠಿಣ ಕ್ರಮಕೈಗೊಳ್ಳಬೇಕೆಂದೂ ಆಗ್ರಹ ಮಾಡ್ತಿದ್ದಾರೆ ಸಾರಿಗೆ ನೌಕರರ ಸಂಘಟನೆ ಮುಖಂಡರು.