ಬೆಂಗಳೂರು, (www.thenewzmirror.com) ;
ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ KSRTC ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಹೊಸ ಪದಾಧಿಕಾರಿಗಳ ಆಗಮನವಾಗಿದೆ. ನಿರೀಕ್ಷೆಯಂತೆಯೇ KSRTC ನೌಕರರ ಕೂಟವೇ ಪ್ರಾಬಲ್ಯ ಮೆರೆದಿದ್ದು, ಅನಂತ್ ಸುಬ್ಬರಾವ್ ಬಣಕ್ಕೆ ಭಾರೀ ಮುಖಭಂಗವಾಗಿದೆ. KSRTC ನೌಕರರ ಕೂಟದ ಪರವಾಗಿ ನಿಂತಿದ್ದ 19 ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳು ಸೊಸೈಟಿಗೆ ಆಯ್ಕೆಯಾಗಿದ್ದಾರೆ.
ಜುಲೈ 7 ರಂದು ಸೊಸೈಟಿಗೆ ಚುನಾವಣೆ ನಡೆದಿತ್ತು. ಚುನಾವಣೆ ಸಾಕಷ್ಟು ಗೊಂದಲ ಹಾಗೂ ಆರೋಪ ಪ್ರತ್ಯಾರೋಪಗಳ ನಡುವೆ ನಡೆದಿತ್ತಾದರೂ ಫಲಿತಾಂಶ ಮಾತ್ರ ತಕ್ಷಣಕ್ಕೆಬಿಡುಗಡೆ ಮಾಡದೆ ಆಗಸ್ಟ್ 18 ರಂದು ಫಲಿತಾಂಶ ಪ್ರಕಟ ಮಾಡಲು ಸಹಕಾರ ಸಂಘಗಳ ನಿಭಂಧಕರ ಕಚೇರಿ ತೀರ್ಮಾನ ಮಾಡಿತ್ತು ಅದರಂತೆ ಇಂದು ಫಲಿತಾಂಶ ಪ್ರಕಟವಾಗಿದ್ದು, ಚಂದ್ರಶೇಖರ್ ನೇತೃತ್ವದ KSRTC ನೌಕರರ ಕೂಟ ಸದಸ್ಯರು ಸೊಸೈಟಿಯ ಆಡಳಿತ ಮಂಡಳಿಯಲ್ಲಿ ಪಾರುಪತ್ಯ ಮೆರೆದಿದ್ದಾರೆ.
ನೂತನ ಪದಾಧಿಕಾರಿಗಳ ಹೆಸರು ಹಾಗೂ ಪಡೆದ ಮತಗಳ ಸಂಖ್ಯೆ
ನವೀನ್ ಎ 1598
ಕುರುವತ್ತಿ ಸುಣಗಾರ 1570
ಚಲುವರಂಗಯ್ಯ ಎಂ.ಕೆ. 1527
ಮಹೇಂದ್ರ ಡಿ.ಪಿ. 1401
ಲೋಕೇಶ್ ಪಿ. 1390
ಪುಟ್ಟಯ್ಯ ಕೆ.ವಿ. 1364
ರಾಘವೇಂದ್ರ ಪಿ.ಬಿ. 1331
ರಾಘವೇಂದ್ರ ಜಿ. 1296
ನಾಗೇಶ್ ಜಿ.ಬಿ. 1275
ಮಲ್ಲೇಶಪ್ಪ 1265
ಮಲ್ಲಪ್ಪ ಅಣ್ಣಿಗೇರಿ 1246
ಸತೀಶ್ ಎನ್. 1205
ರೇಣುಕಾನಂದ 1170
ಗೌರಮ್ಮ 1767
ಭಾಗ್ಯಲಕ್ಷ್ಮಿ ಆರ್. 1421
ಕೃಷ್ಣ 1602
ಓಂಕಾರಪ್ಪ ಎಸ್. 1546
ಕುಮಾರ್ ಸಿಂಗ್ ಹೆಚ್. 1399
ಯೋಗೀಶ್ ವಿ.ಎಸ್. 1509
ಅನಂತ್ ಸುಬ್ಬರಾವ್ ಬಣ ಹಾಗೂ ಚಂದ್ರಶೇಖರ್ ಬಣದ ಪ್ರತಿಷ್ಠೆಯ ಕಣವಾಗಿದ್ದ ಸೊಸೈಟಿ ಚುನಾವಣೆ ಎರಡೂ ಬಣಗಳಿಗೂ ಜಡ್ಜ್ ಮೆಂಟ್ ಡೇ ಆಗಿತ್ತು ಎಂದರೆ ತಪ್ಪಾಗಲಾರದು.
ಅನಂತ್ ಸುಬ್ಬರಾವ್ ಅನೇಕ ವರ್ಷಗಳಿಂದ ಸಾರಿಗೆ ಸಮುದಾಯದ ಮೇಲೆ ತಮ್ಮ ಅನುಭವ, ಹಿರಿತನ, ಸಂಘಟನಾಶಕ್ತಿ, ಚತುರತೆಯಿಂದ ಹಿಡಿತ ಸಾಧಿಸಿದ್ದವರು. ಚಂದ್ರಶೇಖರ್ ಕಳೆದ ಕೆಲವರ್ಷಗಳಿಂದ ಏಳನೇ ವೇತನ ಹಾಗೂ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕಮಬ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದವರು. ಹೋರಾಟ ನಿರೀಕ್ಷೆಗೂ ಮೀರಿ ಯಶಸ್ವಿಯಾದ ಹಿನ್ನಲೆಯಲ್ಲಿ ಚಂದ್ರಶೇಖರ್ ಹೊಸ ಮುಖಂಡರಾಗಿ ಹೊರಹೊಮ್ಮಿದ್ರು.
ತಮ್ಮ ಹಿರಿತನ, ಅನುಭವ ಹಾಗೂ ಸಂಘಟನಾತ್ಮಕ ಚತುಕತೆಯಿಂದಲೇ ಖ್ಯಾತಿಗಳಿಸಿದ್ದ ಅನಂತ್ ಸುಬ್ಬರಾವ್, ಸರ್ಕಾರಿ ನೌಕರರ ಹೋರಾಟದಲ್ಲಿ ಬೆಂಬಲ ನೀಡಲಿಲ್ಲ ಅನ್ನೋ ಕಾರಣಕ್ಕೆ ಲಕ್ಷಾಂತರ ನೌಕರರು ಇವರ ವಿರುದ್ಧ ತಿರುಗಿ ಬಿದ್ದಿದ್ದರು.
ಅಂದಿನಿಂದಲೇ ಚಂದ್ರಶೇಖರ್ ಬಣ ಹಾಗೂ ಅನಂತ್ ಸುಬ್ಬರಾವ್ ಬಣ ಅಂತ ಎರಡು ಬಣಗಳಾಗಿ ನೌಕರರ ಪರ ಹೋರಾಟಗಳು ನಡೆದುಕೊಂಡು ಬರುತ್ತಿದ್ದವು. ಅದು ಎಷ್ಟರ ಮಟ್ಟಿಗೆ ಎಂದರೆ ನಾನಾ ನೀನಾ ಅನ್ನೋ ಲೆವಲ್ ಗೂ ಬಂದಿತ್ತು. ಅಂತಿಮವಾಗಿ ಸೊಸೈಟಿಯ ಫಲಿತಾಂಶದಲ್ಲಿ ಅನಂತ್ ಸುಬ್ಬರಾವ್ ಗಿಂತ ನಾನೇ ಗ್ರೇಟ್ ಅನ್ನೋದನ್ನ ಚಂದ್ರಶೇಖರ್ ತೋರಿಸಿಕೊಟ್ಟಿದ್ದಾರೆ.
KSRTC ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೂರಾರು ಕೋಟಿ ವಹಿವಾಟು ಇರುವ ಸೊಸೈಟಿ. ಕಳೆದ ಹಲವು ವರ್ಷಗಳಿಂದ ಸಾರಿಗೆ ನೌಕರರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದನೆ ಮಾಡುತ್ತಾ ಬರ್ತಿದೆ. ಅಷ್ಟೇ ಅಲ್ದೆ ನೌಕರರಿಗೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಕೆಲಸ ಮಾಡುತ್ತಿದೆ. ಇದರ ಜತೆಗೆ ನೂರಾರು ಕೋಟಿ ವ್ಯವಹಾರ ಇರೋದ್ರಿಂದ ಭ್ರಷ್ಟಚಾರದ ವಾಸನೆನೂ ಕೇಳಿ ಬಂದಿತ್ತು. ಹೀಗಾಗು ಚುನಾವಣೆ ನಡೆಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣೆ ಮಹತ್ವದ ಪಾತ್ರ ವಹಿಸಲಿದೆ.
ಸದ್ಯ KSRTC ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಮುಂದಿನ 5 ವರ್ಷಗಳಿಗೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿಗಳೊಂದಿಗೆ ಸೊಸೈಟಿಯನ್ನ ಮುನ್ನಡೆಸಬೇಕಿದ್ದು, ಲಕ್ಷಾಂತರ ಸಂಖ್ಯೆಯಲ್ಲಿರೋ ನೌಕರರ ಪರವಾಗಿ ಕೆಲಸ ಮಾಡಲಿ ಅನ್ನೋದು ಇತರ ನೌಕರರ ಆಶಯ.