ಬೆಂಗಳೂರು, (www.thenewzmirror.com) ;
ರಾಜ್ಯ ಬಜೆಟ್ ಹೊಸ್ತಿಲಲ್ಲೇ ಬೆಂಗಳೂರು ಜನತೆಗೆ ಬಿಎಂಆರ್ ಸಿಎಲ್ ಶಾಖ್ ಕೊಟ್ಟಿದೆ. ಆ ಮೂಲಕ ಮೆಟ್ರೋ ಪ್ರಯಾಣ ದರವನ್ನ ಏರಿಕೆ ಮಾಡಿದ್ದು, ಬಿಸಿ ಮುಟ್ಟಿಸಿದೆ.
ನಾಳೆಯಿಂದಲೇ ನೂತನ ದರ ಜಾರಿಗೆ ಬರಲಿದೆ ಅಂತ ಬಿಎಂಆರ್ ಸಿಎಲ್ ತಿಳಿಸಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ನಿಗಮ ಇದೀಗ ದರ ಏರಿಕೆಯಿಂದ ಆರ್ಥಿಕ ಹೊರೆಯನ್ನ ತಗ್ಗಿಸಿಕೊಳ್ಳುವ ಪ್ಲಾನ್ ಮಾಡಿದೆ. ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂ. ಇದ್ದು ಗರಿಷ್ಠ 90 ರೂಪಾಯಿ ಇರಲಿದೆ.

ಇನ್ನು ದರ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಡಿಸೆಂಬರ್ 16 ರಂದು ಶಿಫಾರಸ್ಸು ಸಲ್ಲಿಸಲಾಗಿತ್ತು..ದರ ಪರಿಷ್ಕರಣೆಗೆ ಹೈಕೋರ್ಟಿನ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನ ರಚಿಸಲಾಗಿತ್ತು. ಆ ಸಮಿತಿ ಶಿಫಾರಸ್ಸಿನ ಆಧಾರದಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ.
ಹಾಗಿದ್ರೆ ಮೆಟ್ರೋ ನೂತನ ದರ ಯಾವ ರೀತಿ ಅನ್ನೋದನ್ನ ನೋಡುವುದಾದರೆ

ಕಿಲೋ ಮೀಟರ್ ಪ್ರಯಾಣ ದರ
0-2 10 ರೂಪಾಯಿ
2-4 20 ರೂಪಾಯಿ
4-6 30 ರೂಪಾಯಿ
6-8 40 ರೂಪಾಯಿ
8-10 50 ರೂಪಾಯಿ
10-15 60 ರೂಪಾಯಿ
15-20 70 ರೂಪಾಯಿ
20-25 80 ರೂಪಾಯಿ
25 ಕಿಮೀ ಮೇಲ್ಪಟ್ಟು 90 ರೂಪಾಯಿ
ಡೈಲಿ ಪಾಸ್ ದರ 300 ರೂ ಇರಲಿದೆ. ಮೂರು ದಿನದ ಪಾಸ್ 600 ರೂಪಾಯಿ ಹಾಗೆನೇ ಐದು ದಿನದ ಪಾಸ್ ದರ 800 ರೂಪಾಯಿ ಇರಲಿದೆ. ಹಾಗೆನೇ ಸ್ಮಾರ್ಟ್ ಕಾರ್ಡಿನಲ್ಲಿ ಮಿನಿಮಮ್ 90 ರೂಪಾಯಿ ಬ್ಯಾಲೆನ್ಸ್ ಕಡ್ಡಾಯವಾಗಿ ಇರಬೇಕೆಂಬ ನಿಯಮವನ್ನೂ ಬಿಎಂಆರ್ ಸಿಎಲ್ ಹಾಕಿದೆ. ಇದರ ಜತೆಗೆ ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿ ಘೋಷಣೆ ಮಾಡಿದೆ.
ಮೆಟ್ರೋ ಪ್ರಯಾಣ ದರವನ್ನ ಸಮರ್ಥಿಸಿಕೊಂಡ ಬಿಎಂಆರ್ಸಿಎಲ್
ಇನ್ನು ದರ ಏರಿಕೆಯನ್ನು BMRCL ಸಮರ್ಥಿಸಿಕೊಂಡಿದೆ. ದರ ಏರಿಕೆಯಿಂದ ಅರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳಲಾಗಿದೆ ಹಾಗೆನೇ ಕೈಗೆಟಕುವ ರೀತಿಯಲ್ಲಿ ದರ ಪರಿಷ್ಕರಿಸಲಾಗಿದೆ ಅಂತಾನೂ ತಿಳಿಸಿದೆ. ಕಳೆದ 7 ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ನಿರ್ವಹಣಾ ವೆಚ್ಚಹಾಗೂ ಸಿಬ್ಬಂದಿ ವೇತನ ವೆಚ್ಚ ಹೆಚ್ಚಾಗಿರೋದ್ರಿಂದ ದರ ಏರಿಕೆ ಅನಿವಾರ್ಯವಾಗಿತ್ತು ಅಂತ ಹೇಳ್ತಿದ್ದಾರೆ ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್.