ಬೆಂಗಳೂರು, (www.thenewzmirror.com) ;
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆ ವೇಳೆ ಪಕ್ಷದ ವಿಪ್‌ಉಲ್ಲಂಘನೆ ಮಾಡಿದ ವಿಚಾರದಲ್ಲಿ ಪುರಸಭೆ ಅಧ್ಯಕ್ಷೆ ಸೇರಿ ಇಬ್ಬರನ್ನ ಅಮಾನತು ಮಾಡಿರುವ ಘಟನೆ ಆನೇಕಲ್ ಪುರಸಭೆಯಲ್ಲಿ ನಡೆದಿದೆ.
ಆಗಸ್ಟ್ 31 ರಂದು ಆನೇಕಲ್ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಿಗಧಿಯಾಗಿತ್ತು. ಈ ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಹಾಗೂ ಜಯನಗರ ಕ್ಷೇತೃದ ಬಿಜೆಪಿ ಶಾಸಕರೂ ಆಗಿರುವ ಸಿ.ಕೆ. ರಾಮಮೂರ್ತಿ ವಿಪ್ ಜಾರಿ ಮಾಡಿದ್ದರು.
ಚುನಾವಣೆ ವೇಳೆ ಆನೇಕಲ್ ಪುರಸಭೆ ಅಧ್ಯಕ್ಷೆ ಸುಧಾ ವಿ. ನಿರಂಜನ್ ಹಾಗೂ ಸದಸ್ಯರಾದ ಸುರೇಶ್ ಬಾಬು ಪಕ್ಷದ ವಿಪ್ ಉಲಂಘನೆ ಮಾಡಿ, ಬಂಡಾಯವಾಗಿ ಸ್ಪರ್ಧೆ ಮಾಡಿದ್ದರು ಈ ಹಿನ್ನಲೆಯಲ್ಲಿ ಪಕ್ಷ ವಿರೋಧಿ ಆರೋಪದಡಿಯಲ್ಲಿ ಇಬ್ಬರನ್ನೂ ಬಿಜೆಪಿಯಿಂದ 6 ವರ್ಷ ಉಚ್ಛಾಟಿಸಿ ಸಿ.ಕೆ. ರಾಮಮೂರ್ತಿ ಆದೇಶ ಹೊರಡಿಸಿದ್ದಾರೆ.