Mobile News | ರಿಯಲ್‌ಮಿ ಇಂದ 14T 5G ಬಿಡುಗಡೆ, ಸೆಗ್ಮೆಂಟ್‌ನಲ್ಲೇ ಉತ್ತಮ ಡಿಸ್‌ಪ್ಲೇ ಮತ್ತು ಬ್ಯಾಟರಿ !

Realme launches 14T 5G, best display and battery in the segment!

ಬೆಂಗಳೂರು, (www.thenewzmirror.com) ;

ಭಾರತದ ಅತ್ಯಂತ ವಿಶ್ವಾಸಾರ್ಹ ಯುವ ಕೇಂದ್ರಿತ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ರಿಯಲ್‌ಮಿ ಹೊಚ್ಚ ಹೊಸ ರಿಯಲ್‌ಮಿ 14T 5G ಅನಾವರಣಗೊಳಿಸಿದೆ. ವಿಶಿಷ್ಟ ಸ್ಟೈಲ್‌ನ ಸ್ಮಾರ್ಟ್‌ಫೋನ್ ಆಗಿದ್ದು, ಸೆಗ್ಮೆಂಟ್‌ನಲ್ಲೇ ಮುಂಚೂಣಿಯಲ್ಲಿರುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟ್ರೆಂಡ್‌ಸೆಟ್ ಮಾಡುವವರಿಗೆ ಮತ್ತು ಪರ್ಫಾರ್ಮೆನ್ಸ್ ಬಯಸುವವರಿಗೆಂದೇ ವಿನ್ಯಾಸ ಮಾಡಲಾಗಿರುವ ರಿಯಲ್‌ಮಿ 14T 5G, ಬಾಳಿಕೆ ಹಾಗೂ ಅದ್ಭುತ ಡಿಸ್ ಪ್ಲೇಯ ಜತೆಗೆ ದೀರ್ಘ ಬಾಳಿಕೆಯ ಬ್ಯಾಟರಿ ಪವರ್‌ನಂತಹ ಹೋಲಿಕೆ ಇಲ್ಲದ ಸಂಯೋಜನೆಯನ್ನು ಒದಗಿಸುತ್ತದೆ.

RELATED POSTS

ರಿಯಲ್‌ಮಿ 14T 5G ಮೂಲಕ ಈ ಸೆಗ್ಮೆಂಟ್‌ನಲ್ಲಿ ಬಳಕೆದಾರರ ನಿರೀಕ್ಷೆಯನ್ನು ನಾವು ಮೀರಿದ್ದೇವೆ. ಉತ್ತಮ ವಿನ್ಯಾಸ, ಡಿಸ್‌ಪ್ಲೇ ತಂತ್ರಜ್ಞಾನ ಮತ್ತು ಬ್ಯಾಟರಿ ಬಾಳಿಕೆಯನ್ನು ಇನ್ನಷ್ಟು ಉತ್ತಮವಾಗಿಸಿದ್ದೇವೆ. ಇದರಲ್ಲಿ ಅಲ್ಟ್ರಾ ಬ್ರೈಟ್ 120 ಹರ್ಟ್ಸ್ ಅಮೊಲೆಡ್ ಸ್ಕ್ರೀನ್ 2100 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಇದ್ದು, ಈ ವರ್ಗದಲ್ಲೇ ಪ್ರಮುಖವಾದ ಟ್ರಿಪಲ್ IP66, IP68 ಮತ್ತು IP69 ವಾಟರ್ ಮತ್ತು ಡಸ್ಟ್‌ ರೆಸಿಸ್ಟೆನ್ಸ್ ಇದೆ” ಎಂದು ರಿಯಲ್‌ಮಿ ವಕ್ತಾರರು ಹೇಳಿದ್ದಾರೆ.

“ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಇನ್ನಷ್ಟು ಹೆಚ್ಚು ಬೇಡಿಕೆಯನ್ನು ಹೊಂದಿರುವ, ಹೆಚ್ಚು ಬಾಳಿಕೆ, ಹೆಚ್ಚು ಶಕ್ತಿ, ಹೆಚ್ಚು ಸ್ಟೈಲ್ ಬಳಸುವವರಿಗೆ ಇದು ಸೂಕ್ತವಾಗಿದೆ. ದೈನಂದಿನ ಬಳಕೆದಾರರಿಗೆ ಫ್ಲಾಗ್‌ಶಿಪ್‌ ಅನುಭವವನ್ನು ಒದಗಿಸುವುದಕ್ಕಾಗಿ ಅನ್ವೇಷಣೆಯನ್ನು ಎಲ್ಲರಿಗೂ ಒದಗಿಸುವುದು ನಮ್ಮ ಗುರಿಯಾಗಿದೆ. ನೀವು ಕಂಟೆಂಟ್ ಕ್ರಿಯೇಟರ್ ಆಗಿರಲಿ, ಹೆಚ್ಚು ಬಳಕೆ ಮಾಡುವವರಾಗಿರಲಿ ಅಥವಾ ಸುಂದರ ವಿನ್ಯಾಸ ಮತ್ತು ವಿಶ್ವಾಸಾರ್ಹ ಪರ್ಫಾರ್ಮೆನ್ಸ್ ಅನ್ನು ಬಯಸುವವರೇ ಆಗಿರಲಿ, ಈ ಸಾಧನವು ಎಲ್ಲರಿಗೂ ಸೂಕ್ತವಾಗಿದೆ” ಎಂದು ಅವರು ಹೇಳಿದ್ದಾರೆ.

ರಿಯಲ್‌ಮಿ 14T 5G ನಲ್ಲಿ ಸೆಗ್ಮೆಂಟ್‌ನಲ್ಲೇ ಬ್ರೈಟ್ ಆಗಿರುವ ಅಮೊಲೆಡ್ ಡಿಸ್‌ಪ್ಲೇ ಇದ್ದು, 2100 ನಿಟ್ಸ್ ಇದೆ. ಇದರಿಂದ ಕ್ರಿಸ್ಟಲ್ ಕ್ಲಿಯರ್ ಗೋಚರತೆಯು ಅತ್ಯಂತ ಬಿಸಿಲಿನ ಝಳದಲ್ಲೂ ಸಿಗುತ್ತದೆ. 120Hz ಅಮೊಲೆಡ್ ಸ್ಕ್ರೀನ್ 111% DCI-P3 ಅಗಲದ ಕಲರ್ ಗ್ಯಾಮಟ್ ಅನ್ನು ಬೆಂಬಲಿಸುತ್ತದೆ. ಇದರಿಂದ ಅತ್ಯಂತ ವೈವಿಧ್ಯಮಯ ವಿಶುವಲ್ ಸಿಗುತ್ತದೆ. ಅಲ್ಲದೆ, ಇದು ಟಿಯುವ ರೀನ್‌ಲ್ಯಾಂಡ್‌ ಪ್ರಮಾಣಿತವಾಗಿದ್ದು, ದೀರ್ಘ ಸಮಯದವರೆಗೆ ನೋಡುವಾಗ ಕಣ್ಣಿಗೆ ಆರಾಮವಾಗಿರುತ್ತದೆ.

ಈ ವರ್ಗದಲ್ಲೇ ಮೊದಲ ಬಾರಿಗೆ ರಿಯಲ್‌ಮಿ 14T 5G ನಲ್ಲಿ IP66, IP68 & IP69 ವಾಟರ್ ಮತ್ತು ಡಸ್ಟ್‌ ರೆಸಿಸ್ಟೆನ್ಸ್ ಇದೆ. ಇದು ಮಿಲಿಟರಿ ಗ್ರೇಡ್‌ನ ರಕ್ಷಣೆಯನ್ನು ಒದಗಿಸುತ್ತದೆ. ಹೀಗಾಗಿ ಇದು ದೈನಂದಿನ ಬಳಕೆಗೆ ಸೂಕ್ತವಾಗಿದೆ ಮತ್ತು ಮನಃಶಾಂತಿ ನೀಡುತ್ತದೆ. ಪವರ್ ವಿಷಯದಲ್ಲಿ ಇದರಲ್ಲಿ 6000mAh ಬ್ಯಾಟರಿ ಸೆಟ್‌ಗಳಿವೆ. ಇದು ಬಾಳಿಕೆಯಲ್ಲಿ ಹೊಸ ಮಾನದಂಡವಾಗಿದ್ದು, 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಇದರಲ್ಲಿ ಬ್ಯಾಟರಿ ಅತ್ಯುತ್ತಮವಾಗಿದ್ದರೂ ಕೂಡಾ ಅತ್ಯಂತ ತೆಳ್ಳನೆಯ 7.97mm ಪ್ರೊಫೈಲ್ ಅನ್ನು ಇದು ಹೊಂದಿದೆ ಮತ್ತು ಪರ್ಫಾರ್ಮೆನ್ಸ್ ಮತ್ತು ಪೋರ್ಟಬಿಲಿಟಿಯನ್ನು ಇದು ಒದಗಿಸುತ್ತದೆ.
50MP AI ರಿಯರ್ ಕ್ಯಾಮೆರಾ ಮತ್ತು 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ರಿಯಲ್‌ಮಿ 14T 5G ನಲ್ಲಿ ಫ್ಲಾಗ್‌ಶಿಪ್‌ ಗ್ರೇಡ್‌ನ ಫೋಟೋಗ್ರಫಿ ಲಭ್ಯವಿದೆ. ಲ್ಯಾಂಡ್‌ಸ್ಕೇಪ್‌, ಪೋರ್ಟ್ರೇಟ್ ಹಾಗೂ ಸೆಲ್ಫಿಗಳಲ್ಲೂ ಕೂಡಾ ಅತ್ಯುತ್ತಮ ಫೋಟೋಗ್ರಫಿ ಮಾಡಬಹುದು. ಆಕರ್ಷಕ, ಹರಿತವಾದ ಚಿತ್ರಗಳನ್ನು ಎಲ್ಲ ಲೈಟಿಂಗ್ ಸ್ಥಿತಿಯಲ್ಲೂ ಆನಂದಿಸಬಹುದು.

ಮನರಂಜನೆಯನ್ನು ಇನ್ನಷ್ಟು ವೃದ್ಧಿಸಲು, ಸ್ಮಾರ್ಟ್‌ಫೋನ್‌ನಲ್ಲಿ ಡ್ಯೂಯಲ್‌ ಸ್ಟೀರಿಯೋ ಸ್ಪೀಕರ್‌ಗಳಿವೆ ಮತ್ತು 300% ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ. ಇದರಿಂದ ರಿಚ್‌, ದೊಡ್ಡ ಮತ್ತು ಸ್ಪಷ್ಟ ಆಡಿಯೋವನ್ನು ಇಮ್ಮರ್ಸಿವ್ ಮೀಡಿಯಾ ಸ್ಟ್ರೀಮಿಂಗ್ ಮತ್ತು ಹ್ಯಾಂಡ್ಸ್ ಫ್ರೀ ಬಳಕೆಯನ್ನು ಮಾಡಬಹುದಾಗಿದೆ. ಸ್ಪಷ್ಟವಾದ ಸಂವಾದವನ್ನು ಅನುವು ಮಾಡಲು ಡ್ಯೂಯೆಲ್ ಮೈಕ್ ನಾಯ್ಸ್ ಕ್ಯಾನ್ಸಲೇಶನ್‌ ಅನ್ನೂ ಇದು ಹೊಂದಿದೆ. 300% ಅಲ್ಟ್ರಾ ವಾಲ್ಯೂಮ್ ಮೋಡ್ ಸ್ಪೀಕರ್‌ಗೆ ಅನ್ವಯವಾಗುತ್ತಿದ್ದು, ವಾಯ್ಸ್ ಕರೆಗಳಲ್ಲಿ ಈ ಸೌಲಭ್ಯ ಬೆಂಬಲಿಸುವುದಿಲ್ಲ.

ಪ್ರತಿದಿನದ ತಂತ್ರಜ್ಞಾನ ಬಳಕೆಗೆ ಹೊಸ ಸೌಂದರ್ಯವನ್ನೂ ಒದಗಿಸಿದ ರಿಯಲ್‌ಮಿ 14T 5G ಸ್ಯಾಟಿನ್ ಆಧರಿತ ಲಕ್ಷುರಿ ಫಿನಿಶ್ ಅನ್ನು ಒದಗಿಸಿದೆ. ಇದರಲ್ಲಿ ಮೂರು ಆಕರ್ಷಕ ಬಣ್ಣಗಳಾದ ಹಸಿರು, ಕಪ್ಪು ಮತ್ತು ನೇರಳೆ ಬಣ್ಣಗಳಿವೆ. ವಿನ್ಯಾಸವು ಸರಾಗವಾದ, ಹರಿಯುವಂತಹ ಟೆಕ್ಷ್‌ಚರ್‌ ಅನ್ನು ಹೊಂದಿದ್ದು, ಅತ್ಯುತ್ತಮ ಸೌಂದರ್ಯ ಮತ್ತು ಪ್ರೀಮಿಯಂ ಭಾವವನ್ನು ಒದಗಿಸುತ್ತದೆ.

– ರಿಯಲ್‌ಮಿ 14T 5G ಸೆಗ್ಮೆಂಟ್‌ನಲ್ಲೇ ಪ್ರಕಾಶಮಾನ ಅಮೊಲೆಡ್‌ ಡಿಸ್‌ಪ್ಲೇ
– IP69, IP68 & IP66 ರೇಟಡ್‌ ವಾಟರ್ ಮತ್ತು ಡಸ್ಟ್‌ ರೆಸಿಸ್ಟೆನ್ಸ್
– 6000mAh ಬ್ಯಾಟರಿ ಹಾಗೂ 45W ಫಾಸ್ಟ್ ಚಾರ್ಜಿಂಗ್
– 50MP AI ಕ್ಯಾಮೆರಾ
– ಮೂರು ಆಕರ್ಷಕ ಕಲರ್ ವೇರಿಯಂಟ್‌ಗಳಾದ ಹಸಿರು, ಕಪ್ಪು ಮತ್ತು ನೇರಳೆಯಲ್ಲಿ ಲಭ್ಯ
–  ಆರಂಭಿಕ ದರ ರೂ. 16,999

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist