ಬೆಂಗಳೂರು,(www.thenewzmirror.com);
ಅದು ಸಾರಿಗೆ ಇಲಾಖೆಯಲ್ಲೇ ನಡೆದಿದ್ದ ಅತಿ ದೊಡ್ಡ ಹಗರಣ.., ಆ ಹಗರಣ ಬೆಳಕಿಗೆ ಬರ್ತಾ ಇದ್ದಂತೆ ಇಡೀ ಇಲಾಖೆನೇ ನಲುಗಿ ಹೋಗಿತ್ತು. ತೆರಿಗೆ ಕಟ್ಟಿಸಿಕೊಳ್ಳದೆ ವಾಹನ ನೋಂದಣಿ ಮಾಡಿದ್ದಾರೆ ಎನ್ನಲಾಗಿದ್ದ ಹಗರಣ ಇದೀಗ ಹಳ್ಳ ಹಿಡಿತಾ ಅನ್ನೋ ಅನುಮಾನ ಮೂಡುತ್ತಿದೆ.
ಈ ಹಗರಣ ಬೆಳಕಿಗೆ ಬರುತಿದ್ದಂತೆ ಸಾರಿಗೆ ಇಲಾಖೆ ತರಾತುರಿಯಲ್ಲಿ ತನಿಖೆ ವರದಿಯನ್ನೂ ನೀಡಿತ್ತು.ಅಷ್ಟೇ ಅಲ್ಲದೆ ಸಾರಿಗೆ ಸಚಿವ ಶ್ರೀರಾಮುಲು ಅವರ ಬಳಿ ಅಧಿವೇಶನದಲ್ಲಿ 226 ಐಷರಾಮಿ ವಾಹನಗಳೂ ಸೇರಿದಂತೆ ತೆರಿಗೆ ವಂಚನೆ ಮಾಡಿದ್ದಾವೆ ಅನ್ನೋದನ್ನ ಮಾಹಿತಿ ಕೊಡಿಸಿದ್ದರು RTO ಅಧಿಕಾರಿಗಳು. ಹಾಗೆನೇ ಸಿಐಡಿ ತನಿಖೆಯನ್ನೂ ನಡೆಸುತ್ತೀವಿ ಅಂತ ಹೇಳಿದ್ದರು. ಇದಾಗಿ ಹಲವು ತಿಂಗಳು ಕಳೆದರೂ ತನಿಖೆಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.
ಹೀಗೆ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸಾರಿಗೆ ಇಲಾಖೆಯಲ್ಲಿ ಇರುವ ಕೆಲ ಅಧಿಕಾರಿಗಳ ಕೃಪಾ ಕಟಾಕ್ಷನೂ ಇದೆ ಎಂದು ಹೇಳಲಾಗುತ್ತಿದೆ. ಹಾಗೆನೆ ಇಲಾಖೆಯಲ್ಲಿ ಜಂಟಿ ಆಯುಕ್ತ ದರ್ಜೆಯ ಅಧಿಕಾರಿ ತಮ್ಮ ಪ್ರಭಾವ ಬಳಸಿ ತನಿಖೆಯನ್ನ ಹಳ್ಳ ಹಿಡಿಯುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ತೆರಿಗೆ ವಂಚನೆಯ ಪ್ರಕರಣದ ತನಿಖೆ ವಿಳಂಬದ ಕುರಿತು ಅದರ ಆಳ ಅರಿಯೋ ಕೆಲಸವನ್ನ thenewzmirror ಅರಿಯ ಹೊರಟಾಗ ಸಿಕ್ಕಿದ್ದು ನಿಜಕ್ಕೂ ಆತಂಕ ಹಾಗೂ ಅಘಾತಕಾರಿ ವಿಚಾರ..!
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಬೆಂಗಳೂರಿನ 10 ಆರ್ ಟಿಓ ಗಳಲ್ಲಿ ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ತೆರಿಗೆ ವಂಚನೆ ಆಗಿರೋದು ಕಂಡುಬಂದಿದೆ. ಆದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಅಧಿಕಾರಿಗಳು ತನಿಖೆ ವಿಳಂಬದಿಂದ ನೆಮ್ಮದಿಯ ನಿಟ್ಡುಸಿರು ಬಿಡುತ್ತಿದ್ದಾರೆ. ಇದಕ್ಕೆ ಅವರ ಮೇಲಾಧಿಕಾರಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ತಿಳಿದು ಬಂದಿದೆ.
ಹಾಗಿದ್ದರೆ ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಂತಿರೋರು ಯಾರು ಅನ್ನೋದನ್ನೂ ಒಳ ಹೊಕ್ಕಿ ನೋಡಿದಾಗ ಅವರು ಜಂಟಿ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರು ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅನ್ನೋದು ಗೊತ್ತಾಗಿದೆ.
ಈ ಮೂರು ಸಾರಿಗೆ ಕಚೇರಿಗಳ ಪೈಕಿ ತನಿಖೆ ಆರಂಭವಾದಾಗಿನಿಂದ ಇಲ್ಲಿವರೆಗೂ ನೋಡುವುದಾದರೆ ಎರಡು ಕಚೇರಿಯ ಅಧಿಕಾರಿ(RTO) ಬದಲಾಗಿದ್ದಾರೆ. ಉಳಿದಂತೆ ಇಂದಿರಾನಗರದಲ್ಲಿ ಮಾತ್ರ ನೇಫಾನಂದ ಎನ್ನುವ ಅಧಿಕಾರಿ ಅಲ್ಲೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ತೆರಿಗೆ ವಂಚನೆ ಮಾಡಿ ನೋಂದಣಿ ಮಾಡಿರೋ ಪೈಕಿ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಕಚೇರಿಯಲ್ಲಿಯೇ ಅತಿ ಹೆಚ್ಚಿನ ಪಾಲು ಪಡೆದಿವೆ. ಸದ್ಯ ತನಿಖೆ ನಡೆಸುತ್ತಿರುವ ವರ್ಷವನ್ನ ಗಮನಿಸಿದಾಗ ಕೋರಮಂಗಲದಲ್ಲಿ ಸಾರಿಗೆ ಅಧಿಕಾರಿಯಾಗಿದ್ದ ಅಧಿಕಾರಿಯೊಬ್ಬರು ಉನ್ನತ ಹುದ್ದೆಯಲ್ಲಿ ತಳವೂರಿದ್ದಾರೆ.
thenewzmirror ನಡೆಸಿದ ಇನ್ವೆಸ್ಟಿಗೇಷನ್ ನಲ್ಲಿ ಕೇಳಿಬಂದಿರುವ ಆರೋಪವೇನೆಂದರೆ ಆರ್ ಟಿಓ ಆಗಿದ್ದ ಅಧಿಕಾರಯೊಬ್ಬರು ಇದೀಗ ಜಂಟಿ ಆಯುಕ್ತರಾಗಿದ್ದಾರೆ. ಅವರ ಕಾಲದಲ್ಲೂ ತೆರಿಗೆ ವಂಚನೆ ಆಗಿರುವ ಬಗ್ಗೆ ಆರೋಪವಿದೆ. ಹೀಗಿರುವಾಗ ಅವರನ್ನ ಜಂಟಿ ಆಯುಕ್ತರ ಹುದ್ದೆಯಲ್ಲಿ ಕೂರಿಸಿರುವುದರಿಂದ ತನಿಖೆ ಪಾರದರರ್ಶಕವಾಗಿ ನಡೆಯುವುದು ಕಷ್ಟ ಎನ್ನುವುದು ತಿಳಿದುಬಂದಿದೆ.
ಸದ್ಯ ತನಿಖೆ ನಡೆಸಿ ವರದಿ ಕೊಟ್ಟಿರುವ ಅಧಿಕಾರಿ ಆರ್ ಟಿಓ. ಅವರು ತನಿಖೆ ಆರಂಭಿಸಿದ್ದಾಗ ಜಂಟಿ ಆಯುಕ್ತರಾಗಿರುವ ಹಾಲಸ್ವಾಮಿ ಕೋರಮಂಗಲ ಸಾರಿಗೆ ಇಲಾಖೆಯಲ್ಲಿ ಆರ್ ಟಿಓ ಆಗಿದ್ದರು. ಇದರ ಜತೆಗೆ ಜಂಟಿ ಆಯುಕ್ತರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಒಬ್ಬ ಅಧಿಕಾರಿಗೆ ಎರಡು ಹುದ್ದೆ ಬಗ್ಗೆ ಆಗಿನ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಆಕ್ಷೇಪ ವ್ಯಕ್ತಪಡಿಸಿ RTO ಹುದ್ದೆಯನ್ನ ಬೇರೆಯವರಿಗೆ ಕೊಡಿಸಿ ಜಂಟಿ ಆಯುಕ್ತರ ಹುದ್ದೆಯಲ್ಲಿ ಮಾತ್ರ ಮುಂದುವರೆಯುವಂತೆ ಮಾಡಿದ್ದರು.
ಹಾಲಸ್ವಾಮಿಯನ್ನ ವರ್ಗಾವಣೆ ಮಾಡಿ ತನಿಖೆ ಪೂರ್ಣಗೊಳಿಸಿ’
ಸದ್ಯ ಜಂಟಿ ಆಯುಕ್ತರಾಗಿರುವ ಹಾಲಸ್ವಾಮಿ ಅವರು ಆ ಹುದ್ದೆಯಲ್ಲಿ ಇರುವ ವರೆಗೂ ಪಾರದರ್ಶಕ ತನಿಖೆ ಸಾಧ್ಯವಾಗುವುದಿಲ್ಲ. ಒಂದು ಹಂತದ ತನಿಖೆ ಮುಗಿದು 226 ಐಷರಾಮಿ ವಾಹನಗಳು ತೆರಿಗೆ ಕಟ್ಟದೆ ನೋಂದಣಿ ಆಗಿರೋದು ಗೊತ್ತಾಗಿದೆ. ಅದ್ಯ ತೆರಿಹೆ ವಚಕರ ಜಾಡನ್ನ ಹಿಡಿಯುವ ಕೆಲಸವೂ ನೆಇಒತಿದೆ. ಹೀಗಿರುವಾಗ ಪಾರದರ್ಶಕ ತನಿಖೆ ನಡೆಸಬೇಕು ಎಂದರೆ ಬೆಂಗಳೂರು ವಲಯದ ಜಂಟಿ ಆಯುಕ್ತರಾಗಿರುವ ಹಾಲಸ್ವಾಮಿ ಅವರನ್ನ ಬೇರೆಡೆ ವರ್ಗಾಯಿಸಿ ತನಿಖೆ ನಡೆಸಿ. ತನಿಖೆ ಪೂರ್ಣಗೊಂಡ ನಂತರ ಮತ್ತೆ ಅದೇ ಹುದ್ದೆಗೆ ನಿಯುಕ್ತಿ ಮಾಡಿ ಎನ್ನುವ ಒತ್ತಾಯ ಹೆಸರು ಹೇಳದ ಇಚ್ಚಿಸದ ಅಧಿಕಾರಿಗಳು thenewzmirror ಜತೆ ಹಂಚಿಕೊಂಡಿದ್ದಾರೆ.
ಹೀಗೆ ಅಧಿಕಾರಿಗಳು ಹೇಳುವುದಕ್ಕೂ ಒಂದು ಕಾರಣವಿದೆ. ಆರ್ಟಿಒ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ತನಿಖೆ ನಡೆಸುವಾಗ ಅದಕ್ಕಿಂತ ಉನ್ನತ ಹುದ್ದೆಯಲ್ಲಿರೋ ಜಂಟಿ ಆಯುಕ್ತರು ತನಿಖಾಧಿಕಾರಿಗೆ ಪ್ರಭಾವ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಗತ್ಯವಿದ್ದರೆ ತನಿಖೆಗೆ ನಾನು ಅಡ್ಡ ಆಗೋದಿಲ್ಲ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ ಎಂದು ಹೇಳುತ್ತಿದ್ದರೂ ಮೇಲ್ನೋಟಕ್ಕೆ ಪಾರದರ್ಶಕತೆ ಅನ್ನೋದು ಮರಿಚಿಕೆ.
‘ಸಾರಿಗೆ ಸಚಿವರ ಕೃಪಾ ಕಟಾಕ್ಷ ಇದೆಯಂತೆ.’
ಇನ್ನೊಂದು ಆತಂಕದ ವಿಚಾರ ಅಂದರೆ ಜಂಟಿ ಆಯುಕ್ತರಾಗಿರುವ ಹಾಲಸ್ವಾಮಿ ಅವರಿಗೆ ಸಾರಿಗೆ ಸಚಿವರ ಕೃಪಾ ಕಟಾಕ್ಷ ಇದೆಯಂತೆ. ಹೀಗಾಗಿನೇ ಈ ಹಿಂದೆ ಅವರ ಮೇಲೆ ಸಾಕಷ್ಟು ಆರೋಪ, ಅಪಾದನೆಗಳು ಬಂದಾಗ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ ಎನ್ನುವ ಮಾತುಗಳೂ ಇಲಾಖೆಯಲ್ಲಿ ಹರಿದಾಡುತ್ತಿವೆ.
ಹಾಗಂತ ಜಂಟಿ ಆಯುಕ್ತ ಹಾಲಸ್ವಾಮಿ ಕೆಲಸಗಾರ ಅಲ್ಲ ಅಂಥ ಏನಿಲ್ಲ. ಅವರೂ ಉತ್ತಮ ಅಧಿಕಾರಿನೇ ಸಾರಿಗೆ ನೌಕರರ ಮುಷ್ಕರ ನಡೆಸಿದಾಗ ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದರಲ್ಲಿ ಇವರೂ ಒಬ್ಬರು.
ಇಂಥ ಅಧಿಕಾರಿ ಇಲಾಖೆಗೆ ಅನ್ಯಾಯ ಆಗೋದನ್ನ ಯಾವತ್ತೂ ಸಹಿಸೋದಿಲ್ಲ ಹಾಗಂತ ಅಕ್ರಮ, ಭ್ರಷ್ಟಚಾರ ನಡೆದಿದೆ ಎಂದರೆ ಅದರ ಪರವಾಗಿಯೂ ನಿಲ್ಲುವುದಿಲ್ಲ. ಕೆಲಸದಲ್ಲಿ ಅವರಿಗೆ ಇರುವ ಬದ್ದತೆ ಇತರ ಎಲ್ಲ ಅಧಿಕಾರಿಗಳಿಗೂ ಮಾದರಿ. ಹೀಗಿರುವಾಗ ಅವರೇ ಪಾರದರ್ಶಕ ತನಿಖೆ ನಡೆಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಂಡರೂ ಅಚ್ಚರಿ ಪಡಬೇಕಿಲ್ಲ.
ಅಂತಿಮವಾಗ ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರೋ ಒಳಚರ್ಚೆಗಳ ವಿಚಾರವನ್ನ thenewzmirror ಬಯಲು ಮಾಡೋ ಕೆಲ್ಸವನ್ನ ಮಾಡಿದೆ. ಆದರೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳಗಳಬೇಕಾದ ಸಾರಿಗೆ ಆಯುಕ್ತರು, ಪ್ರಧಾನ ಕಾರ್ಯದರ್ಶಿ, ಸಚಿವರು ಏನು ಮಾಡುತ್ತಾರೋ ಕಾದುನೋಡಬೇಕು.
ನಿಮ್ಮ ಅಭಿಪ್ರಾಯಗಳೆನೇ ಇದ್ದರೂ ಈ ನಂಬರ್ ಗೆ(+918217885799) ವಾಟ್ಸ್ ಅಫ್ ಮಾಡಿ, ಅಭಿಪ್ರಾಯ ತಿಳಿಸಿ, ನಿಮ್ಮ ಸುತ್ತಮುತ್ತಲಿನ ವಿಚಾರದ ಬಗ್ಗೆ ನಮಗೆ ಮಾಹಿತಿ ನೀಡಿ.