ಬೆಂಗಳೂರು, (www.thenewzmirror.com) ;
ಗ್ಯಾರಂಟಿ ಯೋಜನೆ ಮುಂದುವರೆಸೋ ನಿಟ್ಟಿನಲ್ಲಿ ಪೆಟ್ರೋಲ್, ಡಿಸೇಲ್ ಸೆಸ್ ಜಾಸ್ತಿ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಜಲಮಂಡಳಿ(BWSSB) ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ.ಆ ಮೂಲಕ ಬೆಂಗಳೂರಿನ ಮಂದಿಗೆ ಬಿಗ್ ಶಾಕ್ ನೀಡೋಕೆ ಮುಂದಾಗಿದೆ.
ಚುನಾವಣೆಯ ಬಳಿಕ ನೀರಿನ ಮೇಲಿನ ದರ ಏರಿಕೆ ಸುಳಿವು ನೀಡಿದ್ದ ಸರ್ಕಾರ, ಇದೀಗ 10 ವರ್ಷಗಳ ಬಳಿಕ ನೀರಿನ ದರ ಏರಿಕೆಗೆ ಪ್ಲಾನ್ ನಡೆಸಿದ್ದು, ದರ ಏರಿಕೆ ಮಾಡುವಂತೆ ಪ್ರಸ್ತಾವನೆಯನ್ನ ಜಲಮಂಡಳಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

2014 ರಲ್ಲಿ ದರ ಪರಿಷ್ಕರಿಸಿದ್ದ ಜಲಮಂಡಳಿ, ಇದೀಗ ನೀರಿನ ದರ ಹೆಚ್ಚಳಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ಗೆ ಕಾದುಕುಳಿತಿದೆ. ಆ ಮೂಲಕ 10 ವರ್ಷಗಳ ಬಳಿಕ ನೀರಿನ ದರ ಏರಿಕೆಗೆ ಮುಂದಾಗಿದೆ.
ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದ ಸಮಯದಲ್ಲೇ ಜಲಮಂಡಳಿಯ ನೀರಿನ ದರ ಏರಿಕೆ ಸುಳಿವು ಸರ್ಕಾರ ನೀಡಿತ್ತು. ಹಾಗೆನೇ ಸಿಬ್ಬಂದಿಗರ ವೇತನ ನೀಡಲು ಕಷ್ಟವಾಗುತ್ತಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಅಂತ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ರು.
ಲೋಕಸಭಾ ಚುನಾವಣೆ ಬಳಿಕ ನೀರಿನ ದರ ಪರಿಷ್ಕರಣೆ ಬಗ್ಗೆ ಚಿಂತಿಸೋಣ ಎಂದಿದ್ದ ಸರ್ಕಾರ, ಇದೀಗ ತೆರೆಮರೆಯಲ್ಲಿ ನೀರಿನ ದರ ಪರಿಷ್ಕರಣೆಗೆ ಸಜ್ಜಾಗುತ್ತಿದೆ. ಗೃಹಬಳಕೆ, ವಾಣಿಜ್ಯ ಸೇರಿ ಎಲ್ಲ ರೀತಿಯ ನೀರು ಪೂರೈಕೆ ಮೇಲೆ ಶೇ40 ರಷ್ಟು ದರ ಏರಿಕೆಗೆ ಚರ್ಚೆ ನಡೆಯುತಿದ್ದು, ಸರ್ಕಾರ ಒಪ್ಪಿಗೆ ಸೂಚಿಸೂವುದೆ ತಡ, ದರ ಪರಿಷ್ಕರಿಸಲು ಜಲಮಂಡಳಿ ಕೂಡ ಸಜ್ಜಾಗಿ ಕುಳಿತಿದೆ.