ಬೆಂಗಳೂರು, (www.thenewzmirror.com) ;
ಒಂದ್ಕಡೆ ಚುನಾವಣೆ ಬಿಸಿ ರಾಜ್ಯದಲ್ಲಿ ಕಾವು ಪಡೆಯುತ್ತಿದ್ದರೆ ಮತ್ತೊಂದು ಕಡೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡುವ SSLC ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಮಾರ್ಚ್ – ಏಪ್ರಿಲ್‍ನಲ್ಲಿ ನಡೆದಿದ್ದ SSLC ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ.83.89ರಷ್ಟು ಫಲಿತಾಂಶ ಬಂದಿದೆ.
ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶ ಕುಸಿತ ಕಂಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಆರ್., ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್, SSLC ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಇಂದು ಫಲಿತಾಂಶ ಪ್ರಕಟಿಸಿದರು.
ಈ ಬಾರಿ 1.24ರಷ್ಟು ಇಳಿಕೆ ಕಂಡಿದ್ದರೂ ಚಿತ್ರದುರ್ಗ (96.8%) ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಬೀದರ್ (ಶೇ.78.23%) ಫಲಿತಾಂಶ ಕಂಡು ಕೊನೆಯ ಸ್ಥಾನ ಪಡೆದುಕೊಂಡಿದೆ.
ಪ್ರತಿ ಬಾತಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 4,83,710 ವಿದ್ಯಾರ್ಥಿಗಳ ಪೈಕಿ 4,20,846 (87%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 3,51,392 ವಿದ್ಯಾರ್ಥಿಗಳ ಪೈಕಿ 2,79,773 (79.62%) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
5833 ಸರ್ಕಾರಿ ಶಾಲೆಗಳಲ್ಲಿನ ಒಟ್ಟು 3,33,223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,89,035 (86.74%) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
3622 ಅನುದಾನಿತ ಶಾಲೆಗಳಿಂದ ಒಟ್ಟು 2,05,491 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 1,75,974 (85.64%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು 14,983 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ದ್ವಿತೀಯ ಭಾಷೆಯಲ್ಲಿ 100ಕ್ಕೆ 100ರಷ್ಟು 9754, ತೃತೀಯ ಭಾಷೆಯಲ್ಲಿ 100ಕ್ಕೆ ನೂರರಷ್ಟು 16,170, ಗಣಿತದಲ್ಲಿ 100ಕ್ಕೆ 100ರಷ್ಟು 2132, ವಿಜ್ಞಾನದಲ್ಲಿ 100ಕ್ಕೆ 100ರಷ್ಟು 983, ಸಮಾಜ ವಿಜ್ಞಾನದಲ್ಲಿ 100ಕ್ಕೆ 100ರಷ್ಟು 8311 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಈ ಬಾರಿ ಎ+ ಶ್ರೇಣಿಯಲ್ಲಿ (90 ರಿಂದ 100) 61,003, ಎ ಶ್ರೇಣಿಯಲ್ಲಿ (82-89) 1,47,634, ಬಿ+ ಶ್ರೇಣಿಯಲ್ಲಿ (70 ರಿಂದ 79) 1,75,489, ಬಿ ಶ್ರೇಣಿಯಲ್ಲಿ (60 ರಿಂದ 69) 1,70,296, ಸಿ+ ಶ್ರೇಣಿಯಲ್ಲಿ (50 ರಿಂದ 59) 1,16,819, ಸಿ ಶ್ರೇಣಿಯಲ್ಲಿ (35-49) 19,311 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಬಾರಿ ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ.
www.karresults.nic.in ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದಾಗಿದೆ.