ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಲು ಬೆಂಗಳೂರು ಪ್ರೆಸ್‌ಕ್ಲಬ್ ಆಗ್ರಹ
ಬೆಂಗಳೂರು, (www.thenewzmirror.com) : ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆಂದು ತೆರಳಿದ್ದ ಚಾನೆಲ್‌ವೊಂದರ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಖಂಡನೀಯ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ. ವಾಸ್ತವದ ಚಿತ್ರಣವನ್ನು ಸಮಾಜಕ್ಕೆ ತೋರಿಸಲು ಪತ್ರಕರ್ತರು ಕಾರ್ಯನಿರತರಾಗಿ ಕೆಲಸ ಮಾಡುವ ಭಯದ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿಯ ಘಟನೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನನು ಬುಡಬೇಮಲು ಮಾಡುವ ಆತಂಕವಿದೆ ಎಂದು ಪತ್ರಿಕಾ ಹೇಳಿಕಯಲ್ಲಿ ತಿಳಿಸಿದ್ದಾರೆ. ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಪ್ರೆಸ್‌ಕ್ಲಬ್ ಆಗ್ರಹಿಸುತ್ತದೆ. ಜತೆಗೆ ಈ ರೀತಿಯ ಘಟನೆಗಳನ್ನು ಬೆಂಗಳೂರು ಪ್ರೆಸ್‌ಕ್ಲಬ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.