ಬೆಂಗಳೂರು, (www.thenewzmirror.com);
ಪ್ರಧಾನ ಮಂತ್ರಿ ನರೇಂದ್ರ ಮೋದಿ ( Modi ) ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಎಚ್‌ಎಎಲ್ ಘಟಕಕ್ಕೆ ಭೇಟಿ ನೀಡಿ,HAL ನಿರ್ಮಿತ ಲಘು ಸಮರ ವಿಮಾನ ತೇಜಸ್ ಫೈಟರ್ ಜೆಟ್ ಏರಿದ್ದಾರೆ.
ತೇಜಸ್‌ನಲ್ಲಿ ಕಿರು ಹಾರಾಟ ಯಶಸ್ವಿಯಾಗಿ ಪೂರ್ಣಗೊಳಿಸಿದ ಮೋದಿ ತಮ್ಮ ಅನುಭವವನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.






ಈ ಅನುಭವ ಮುದ ನೀಡಿದೆ. ನಮ್ಮ ದೇಶದ ಸ್ಥಳೀಯ ಶಕ್ತಿ ಸಾಮರ್ಥ್ಯಗಳ ಮೇಲೆ ನನ್ನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೊಸ ಹೆಮ್ಮೆ ಮತ್ತು ಆಶಾವಾದ ಹುಟ್ಟುವಂತೆ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ ಮೋದಿ.