ಬೆಂಗಳೂರು, (www.thenewzmirror.com);
ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.., ಇದೇ ಡಿಸೆಂಬರ್ 2 ರಿಂದ 4 ರ ವರೆಗೂ ಕಡಲೇಕಾಯಿ ಪರೀಕ್ಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳಯರ ಬಳಗ ಮುಜಾರಾಯಿ ಇಲಾಖೆ ಸಹಕಾರದಲ್ಲಿ ಬೆಂಗಳೂರುನಗರ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಶುಭಾ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜರುಗಲಿದೆ.
ಕಾಡುಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ, ಮಲ್ಲೇಶ್ವರ ಕಾಡುಮಲ್ಲೇಶ್ವರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಜರುಗಲಿದೆ ಎಂದರು.
800ಕೆಜಿ ಕಡಲೆಕಾಯಿಗಳಿಂದ ಶೃಂಗಾರಿಸಿದ 20 ಎತ್ತರ 20 ಉದ್ದದ ನಂದಿಯನ್ನು ಇಡಲಾಗುತ್ತದೆ. ಹಾಗೆನೇ ಡಿಸೆಂಬರ್ 2ರಂದು ಬೆಳಗ್ಗೆ 11ಗಂಟೆಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರೀಷೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನಾ ದಿನ ಸಂಜೆ ಜಿತ್ವಾವನ ಮಹಿಳಾ ಯಕ್ಷಗಾನ ಮಂಡಳಿ ಶ್ರೀಮತಿ ಶೈಲಜಾ ಜೋಶಿ ಮತ್ತು ತಂಡದವರಿಂದ ಯಕ್ಷಗಾನ ಇರಲಿದೆ. ಡಿಸೆಂಬರ್ 3ನೇ ತಾರೀಖು ಬೆಳಗ್ಗೆ 11-30ಕ್ಕೆ ಪಂಚಮ ಸಂಗೀತ ತಂಡ ಎಲ್.ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಗಾನ ಗಂಧರ್ವ ಕರ್ನಾಟಕ ರತ್ನ ಡಾ||ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ ಇರಲಿದೆ ಎಂದರು.
ಪರೀಷೆಯ ಕೊನೆ ದಿನ ಬೆಳಗ್ಗೆ 9-30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6-30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್ ಮತ್ತು ತಂಡದವರಿಂದ ಶಿವ ವೀಣಾ ಗಾನ ಸಂಗಮ ಇರಲಿದೆ.
ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯಲ್ಲಿ ಪರಿಸರ ಉಳಿಸಿ, ಬೆಳಸಲು ಹಸಿರು ಚೈತನ್ಯೋತ್ಸವ ಮೂಲಕ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ತಮಿಳುನಾಡು, ಆಂಧ್ರ, ತೆಲಂಗಾಣ ನಮ್ಮ ರಾಜ್ಯದಿಂದ ನೂರಾರು ರೈತರು ಕಡಲೆಕಾಯಿ ಪರಿಷೆ ಭಾಗವಹಿಸಲಿದ್ದಾರೆ.
200ಮಳಿಗೆಗಳಲ್ಲಿರೈತರ ಬೆಳದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತಕ್ಕೆ ಜನರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಂದ ಜನರಿಗೆ ಪ್ರಸಾದ ರೂಪದಲ್ಲಿ ಕಡಲೆಕಾಯಿ ವಿತರಿಸಲಾಗುವುದು ಸರಿಸುಮಾರು 8ಲಕ್ಷ ಜನರು ಪರಿಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.