ಬೆಂಗಳೂರು(www.thenewzmirror.com):ಹನುಮಂತನಗರ ಪೊಲೀಸರು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ಅವಧಿಯಲ್ಲಿ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ರೂ 4,100 ನಗದು ಮತ್ತು “ಡೆಫಾ ಬೆಟ್” ವೆಬ್ ಸೈಟ್ ನಲ್ಲಿ ಜೂಜಿಗೆ ಬಳಸಿದ್ದ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಅಥವಾ ಪ್ರಚಾರ ಮಾಡದಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ. ಯಾವುದೇ ಸಂಶಯಾಸ್ಪದ ಜೂಜಿನ ಚಟುವಟಿಕೆಗಳನ್ನು ನೀವು ಗಮನಿಸಿದಲ್ಲಿ, ಕೂಡಲೇ ನಿಮ್ಮ ಸಮೀಪದ ಪೊಲೀಸ್ ಸ್ಟೇಷನ್ ಗೆ ವರದಿ ಮಾಡಿ ಅಥವಾ 112 ಸಂಖ್ಯೆಗೆ ಡಯಲ್ ಮಾಡಿ ವರದಿ ಮಾಡಿ. ನಿಮ್ಮ ಜಾಗರೂಕತೆ, ನಮ್ಮ ನಗರವನ್ನು ಸುರಕ್ಷಿತವಾಗಿಡಲು ನೆರವಾಗುತ್ತದೆ ಎಂದು ಮನವಿ ಮಾಡಿದ್ದಾರೆ.