ಬೆಂಗಳೂರು/ನವದೆಹಲಿ, (www.thenewzmirror.com) ;
ಕೇಂದ್ರ ಸರ್ಕಾರ ಗುರುವಾರ (ಫೆ. 1) ರಂದು ಮಧ್ಯಂತರ ಬಜೆಟ್ (Interim Budget ) ಮಂಡಿಸುತ್ತಿದೆ. ಇದು ಚುನಾವಣಾ ವರ್ಷವಾದ ಕಾರಣ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅವಕಾಶ ಇರುವುದಿಲ್ಲ. ಕೇವಲ ಲೇಖಾನುದಾನ ಮಾತ್ರ ಮಂಡಿಸಲಾಗುತ್ತದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.
ಹೊಸದಾಗಿ ಲೋಕಾರ್ಪಣೆಯಾದ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಆಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಆರನೇ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಮೋದಿ ಸರ್ಕಾರ ಬಜೆಟ್‌ನಲ್ಲಿ ಜನಾಕರ್ಷಕ ನಿರ್ಣಯಗಳನ್ನೇನಾದ್ರೂ ಪ್ರಕಟಿಸುತ್ತಾ? ಇಲ್ಲವೇ, ಮೂಲಧನ ವ್ಯಯವನ್ನು ಹೆಚ್ಚಿಸುವ ಮೂಲಕ ಆರ್ಥಿಕ ವ್ಯವಸ್ಥೆಗೆ ಬೂಸ್ಟ್ ನೀಡುತ್ತಾ? ಇಲ್ಲವೇ, ಜನ ಕಲ್ಯಾಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಮತೋಲನ ಸಾಧಿಸುತ್ತಾ?..ಜನಪ್ರಿಯತೆಯ ಹಳಿ ಮೇಲೆ ಸಾಗುತ್ತಾ? ಇಂತಹ ಹಲವು ಪ್ರಶ್ನೆಗಳ ಬಗ್ಗೆ ಇದೀಗ ವಿಸ್ತೃತ ಚರ್ಚೆಗಳು ನಡೆಯುತ್ತಿವೆ.
ಹಾಗಿದ್ದರೆ ಬಜೆಟ್ ಕುರಿತಾದ ಲೈವ್ ಕವರೇಜ್ ಇಲ್ಲಿದೆ 👇🏻👇🏻