ಬೆಂಗಳೂರು, (www.thenewzmirror.com) ;
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡುವ ಸ್ಥಿತಿ ಇಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಇದಕ್ಕೆ ಸಾಕ್ಷಿ.
ಕಬ್ಬನ್ ಪಾರ್ಕ್ ನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ ಮಾಡ್ತಿದ್ದ ವೃದ್ಧ..! ನನ್ನು ಮಹಿಳೆಯೊಬ್ಬರು ಹಿಂಬಾಲಿಸುತ್ತಿದ್ದಾರೆ. ಹುಡುಗಿ ಹತ್ತಿರ ಬರ್ತಿರೋದನ್ನು ನೋಡಿದ ವೃದ್ಧ ಅಲ್ಲಿಂದ ಹೋಗ್ತಿದ್ದಾನೆ.
37 ಸಕೆಂಡ್ ಇರುವ ವೀಡಿಯೋದ ಆರಂಭದಲ್ಲಿ ಆತನ ಮುಖವನ್ನು ತೋರಿಸಲಾಗಿದೆ. ಆನಂತರ ಮುಖವನ್ನ ಬ್ಲರ್ ಮಾಡಲಾಗಿದೆ. ಸುಮಾರು 70 ರಿದ 75 ವರ್ಷ ವಯಸ್ಸಿನ ವೃದ್ಧನೊಬ್ಬ ಕಬ್ಬನ್ ಪಾರ್ಕ್ ನಲ್ಲಿ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕೆ ಬಂದು ಹಸ್ತಮೈಥುನ ಮಾಡ್ತಾನೆ. ಹೀಗಂತ ಮಹಿಳೆಯರು ಆರೋಪ ಮಾಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ.
ಹಾಗೆನೇ ವಿಡಿಯೋದಲ್ಲಿ ಏನು ಮಾಡ್ತಿದ್ದೀ ಎಂದು ಮಹಿಳೆ ಆತನನ್ನು ಪ್ರಶ್ನೆ ಮಾಡ್ತಿದ್ದಾರೆ. ಅದಕ್ಕೆ ಆತ ಏನು ಎನ್ನುತ್ತಾನೆ. ಸೆಕ್ಯುರಿಟಿ ಕರೆಯಬೇಕಾ ಎಂದು ಮಹಿಳೆ ಕೇಳ್ತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಬಳಿಕ ಅಲ್ಲಿಂದ ಆ ವೃದ್ಧ ಕಾಲ್ಕಿತ್ತಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆಯೊಬ್ಬರು ಆತನನ್ನ ಬೆನ್ನಟ್ಟಿ ಹಿಡಿಯಲು ಮುಂದಾಗುತ್ತಾರೆ ಆದರೂ ಆವೃದ್ಧ ಕೈಗೆ ಅಇಗದೆ ಪರಾರಿಯಗುತ್ತಾನೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಆಗ್ತಿದ್ದಂತೆ ಬೆಂಗಳೂರು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಕ್ರಮತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ಮುಖ ಬ್ಲರ್ ಆಗಿದ್ದು, ಅದನ್ನು ತೆಗೆಯುವಂತೆ ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ.