ನಾವು ಭರವಸೆ ಈಡೇರಿಸಿದ್ದೇವೆ,ಮೋದಿ ಕಪ್ಪುಹಣ ತಂದರಾ ಮಲ್ಲಿಕಾರ್ಜುನ ಖರ್ಗೆ

RELATED POSTS

ಹೊಸಪೇಟೆ(www.thenewzmirror.com):ಗ್ಯಾರಂಟಿಗಳನ್ನು ನೀಡಬೇಕು ಜೊತೆಗೆ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಮುಂದಿದ್ದ ಸವಾಲು. ಇದನ್ನು ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ನೆರವೇರಿಸಿದೆ ಆದರೆ

ದೇಶದ ಪ್ರಧಾನಿ ಮೋದಿಯವರು ಸಹ 20 ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿದರು. ಅವರು ಎಂತಹ ಗ್ಯಾರಂಟಿಗಳನ್ನು ನೀಡಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿದೆ‌ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಸಮರ್ಪಣಾ ಸಂಕಲ್ಪ ‌ಸಮಾವೇಶದಲ್ಲಿ ಮಾತನಾಡಿದ ಅವರು, ಎರಡು ವರ್ಷದ ಆಡಳಿತ ಅವಧಿಯಲ್ಲಿ ಚುನಾವಣೆಗೆ ಮೊದಲು ಕೊಟ್ಟಂತಹ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿ ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಕೋಟಿ‌ ಅಭಿನಂದನೆಗಳು. ಗ್ಯಾರಂಟಿಗಳನ್ನು ನೀಡಬೇಕು ಜೊತೆಗೆ ರಾಜ್ಯದ ಅಭಿವೃದ್ಧಿಯನ್ನೂ ಮಾಡಬೇಕು ಎನ್ನವು ಸವಾಲನ್ನು ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ನೆರವೇರಿಸಿದೆ ಆದರೆ

ದೇಶದ ಪ್ರಧಾನಿ ಮೋದಿಯವರು ವಿದೇಶದಲ್ಲಿ ಇರುವ ಕಪ್ಪುಹಣ ತರುತ್ತೇವೆ ಎಂದರು ಅದನ್ನು ತಂದರೇ? ಯವ ಜನರಿಗೆ ನೌಕರಿ ಕೊಡುತ್ತೇವೆ ಎಂದರು ಇದು ಸಾಧ್ಯವಾಯಿತೇ? ನೋಟ್ ಬ್ಯಾನ್ ಮಾಡಿ ಬಡವರ ಸಂಸಾರಗಳನ್ನು ಹಾಳು ಮಾಡಿದರು. ಆದರೆ ನಾವು ಮಾತು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.

ಮೋದಿ ಸರ್ಕಾರ ಭದ್ರತೆ ನೀಡದೇ ಇರುವ ಕಾರಣಕ್ಕೆ ಪೆಹಲ್ಗಾಮ್ ನಲ್ಲಿ ಭಾರತದ 26 ಅಮಾಯಕ ನಾಗರೀಕರ ಹತ್ಯೆಯಾಯಿತು. ಪ್ರವಾಸಿಗರಿಗೆ ಪೊಲೀಸ್, ಗಡಿ ಭದ್ರತಾ ಪಡೆಯ ರಕ್ಷಣೆ ನೀಡದೆ ಜೀವ ತೆಗೆದಿದ್ದು ಮೋದಿ ಸರ್ಕಾರ. ಆದರೂ ಮೋದಿ ಇದರ ಬಗ್ಗೆ ಒಂದು ಮಾತು ಆಡಲಿಲ್ಲ. ಕೇವಲ ತಮಗೆ ತೋಚಿದ್ದನ್ನು ಹೇಳಿಕೊಂಡು ಹೋದರು. ನಾನು ಕೇಳಿದ ಒಂದೇ ಒಂದು ಪ್ರಶ್ನೆಗೆ ಇದುವರೆಗೂ ಉತ್ತರ ನೀಡಿಲ್ಲ ಎಂದರು.

ಏ. 17 ರಂದು ಕಾಶ್ಮೀರಕ್ಕೆ ಮೋದಿಯವರು ಹೋಗಬೇಕಿತ್ತು. ಆದರೆ ಅಲ್ಲಿನ ಗುಪ್ತಚರ‌ ಇಲಾಖೆ ನೀವು ಬರುವ ಸಮಯದಲ್ಲಿ ಇಲ್ಲಿ ಗಲಾಟೆಯಾಗುತ್ತದೆ ಎಂದು ತಿಳಿಸಿದರು‌. ಈ ಕಾರಣಕ್ಕೆ ಅವರು ಅಲ್ಲಿಗೆ ಹೋಗುವುದನ್ನು ರದ್ದು ಮಾಡಿದರು. ಇದೇ ಮಾತನ್ನು ನೀವು ಏಕೆ ಪ್ರವಾಸಿಗರಿಗೆ ಹೇಳಲಿಲ್ಲ. ಇದಕ್ಕೆ ಮೋದಿಯವರು ಉತ್ತರ ನೀಡಬೇಕು. ಅಂದು ಎಚ್ಚರಿಕೆ ನೀಡಿದ್ದರೆ ಜನರು ಸಾಯುತ್ತಿರಲಿಲ್ಲ.‌ ಗಡಿಯಲ್ಲಿ ಘರ್ಷಣೆ ಉಂಟಾಗುತ್ತಿರಲಿಲ್ಲ ಎಂದರು.

ಈ ಪಾಕಿಸ್ತಾನದ ಕೆಲಸ ಸದಾ ಭಾರತದ ಮೇಲೆ ಗೂಬೆ ಕೂರಿಸುವುದೇ ಆಗಿದೆ. ಅವರಿಗೆ ಶಕ್ತಿಯಿಲ್ಲ ಎಂದರೂ ಚೀನಾದವರಿಂದ ಬೆಂಬಲ ಪಡೆದು ನಮ್ಮ ಮೇಲೆ ದಾಳಿ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ಎಂದಿಗೂ ಸಹ ನಮ್ಮ ದೇಶ ಸಹಿಸುವುದಿಲ್ಲ. ‌ನಾವು ಒಗ್ಗಟ್ಟಿನಿಂದ ಇದ್ದೇವೆ ಎಂದರು.

ಇಂತಹ ಹೊತ್ತಿನಲ್ಲಿ ದೇಶ ಮುಖ್ಯವಾಗಬೇಕಿತ್ತು ಆದರೆ ಮೋದಿ ಮುಖ್ಯವಾಗಿದ್ದಾರೆ. ದೇಶಕ್ಕಾಗಿ ಹೋರಾಡುವ ಗುತ್ತಿಗೆಯನ್ನು ಬಿಜೆಪಿಯವರು ಮಾತ್ರ ತೆಗೆದುಕೊಂಡಿಲ್ಲ. ನಾವು ಸಹ ದೇಶಕ್ಕಾಗಿ ಹೋರಾಟ ಮಾಡಿದವರೇ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ‌ರಾಜೀವ್ ಗಾಂಧಿ ಅವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇಂತಹ ದೊಡ್ಡ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ನೀವು ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದರು.

ಇಡಿ‌ ಛೂ ಬಿಟ್ಟಿದ್ದೀರಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ದಾಳಿ ಮಾಡಿಸಿದ್ದೀರಿ. ನಮ್ಮ‌ ಮೇಲೆ ದಾಳಿ ಮಾಡಿಸಿ ಮಣಿಸಬೇಕು ಎನ್ನುವ ಉದ್ದೇಶ ಬಿಜೆಪಿಯವರಿಗೆ ಇದ್ದರೆ ಅದು ಅವರ ಹುಂಬತನ. ಕಾಂಗ್ರೆಸ್ ಪಕ್ಷ ಎಂದಿಗೂ ಯಾರಿಗೂ ಮಣಿಯುವುದಿಲ್ಲ, ಬಗ್ಗುವುದಿಲ್ಲ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ನಡೆಸದೇ ನಮ್ಮ ದೇಶದ ನಿಯೋಗವನ್ನು ಭಯೋತ್ಪಾದಕ ದಾಳಿಯ ಬಗ್ಗೆ ಒಂದಷ್ಟು ದೇಶಗಳಿಗೆ ತಿಳಿಸಲು ಕಳುಹಿಸುತ್ತಿದ್ದಾರೆ‌.‌ ನಮಗೆ ದೇಶ ಮುಖ್ಯ. ಈ ದೇಶಕ್ಕೆ ಸಂವಿಧಾನ ನೀಡಿದ ಪಕ್ಷ ನಮ್ಮದು ಎಂದರು.

ಬಿಜೆಪಿಯದ್ದು ಬರೀ ಸುಳ್ಳು ‌ಹೇಳುವುದೇ ಕೆಲಸ. ನಾವು ದೇಶದ ಬಗ್ಗೆ ಮಾತನಾಡೋಕೆ ಸಭೆ ಸೇರಿದರೆ ಅವರು ಬಿಹಾರದಲ್ಲಿ ಚುನಾವಣೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದರು. ಎರಡು ಸಲ ಸರ್ವ ಪಕ್ಷ‌‌ ಸಭೆ ಕರೆದರೂ ಮೋದಿಯವರು ಬರಲಿಲ್ಲ. ಅವರಿಗೆ ದೇಶಪ್ರೇಮ ಇದ್ದಿದ್ದರೆ ಏಕೆ ಸರ್ವ ಪಕ್ಷ ಸಭೆಗೆ ಬರಲಿಲ್ಲ. ನಾವುಗಳು ಏನಾದರೂ ಒಂದೇ ಒಂದು ಸಭೆಗೆ ಬರದೇ ಇದ್ದರೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದರು.

ಕೇವಲ ಭಾಷಣ ಮಾಡುವವರಿಂದ, ಬೊಗಳೆ ಮಾತುಗಳಿಂದ ದೇಶ ಉದ್ದಾರವಾಗುವುದಿಲ್ಲ. ಸೊಫಿಯಾ ಖುರೇಶಿ ಎನ್ನುವ ಮಿಲಿಟರಿಯ ವಕ್ತಾರೆ ಮಾತನಾಡಿದ‌ ಮೇಲೆ ಬಿಜೆಪಿಯ ಶಾಸಕನೊಬ್ಬ ಆಕೆಗೆ ಪಾಕಿಸ್ತಾನದ ನಂಟಿದೆ ಎಂದು ಹೇಳುತ್ತಾನೆ. ಇಂತಹ ಜನರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ಜನರೇ ಹೇಳಬೇಕು. ಸೈನ್ಯದ ವಿರುದ್ಧ ಮಾತನಾಡಿದ ಆತನನ್ನು ಪಕ್ಷದಿಂದ ಕಿತ್ತು ಹಾಕಿ ಮೋದಿಯವರೇ ಏಕೆ ಇನ್ನೂ ಇಟ್ಟುಕೊಂಡು ಕುಳಿತಿದ್ದೀರಿ? ಬಿಜೆಪಿಯಲ್ಲಿ‌ ಇರುವ ದೇಶದ್ರೋಹಿಗಳನ್ನು ಮೊದಲು ಪಕ್ಷದಿಂದ ತೆಗೆದುಹಾಕಿ. ಆಕೆಯ ಹೆಸರು ಖುರೇಶಿ ಎಂದು ಇರುವ ಕಾರಣಕ್ಕೆ ಸೈನ್ಯದಲ್ಲಿ ಇರುವವರಿಗೆ ಹೀಯಾಳಿಸುವಿರಾ ಬಿಜೆಪಿಯವರೇ? ಎಂದರು.

ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿ ಅವರು ಮೊದಲು ಮಾತನಾಡಿದಾಗ ಟೀಕೆ ಮಾಡಿದರು. ಆದರೆ ಈಗ ಅವರೇ ಜಾತಿ ಗಣತಿ ಪರವಾಗಿದ್ದಾರೆ. ರಾಹುಲ್ ಗಾಂಧಿ ಅವರ ಮಾತಿಗೆ ಮಣಿದ ಮೋದಿಯವರು ಕ್ಯಾಬಿನೆಟ್ ಸಭೆ ಮಾಡಿ ಜಾತಿ ಗಣತಿಗೆ ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ಅನುಷ್ಠಾನ ಅಚ್ಚುಕಟ್ಟಾಗಿ ನಡೆಯಬೇಕು.‌ ಜಾತಿ ಗಣತಿ ಅನುಷ್ಠಾನದಿಂದ ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ಅವರಿಗೆ ಕೆಟ್ಟ ಹೆಸರು ಬರುವಂತೆ ಕೆಲಸ ಮಾಡಬಾರದು. ಒಳಮೀಸಲಾತಿಯ ವಿರೋಧಿ ನಾನು ಎಂದಿಗೂ ಅಲ್ಲ. ಆದರೆ ಬೇಡ ಜಂಗಮ‌ಜಾತಿಗೆ ಏಕೆ ಒಳ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಬಡ ಲಿಂಗಾಯತರಿಗೆ ಸರ್ಕಾರ ಅನುಕೂಲ ಮಾಡಿಕೊಡಲಿ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೇವಲ 500 ಜನ ಇದ್ದ ಜನಸಂಖ್ಯೆ ಹೇಗೆ 4- 5 ಲಕ್ಷಕ್ಕೆ ಏರಿಕೆಯಾಗಿದೆ. ಅವರನ್ನು ಏಕೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಪರಿಶಿಷ್ಟರಿಗೆ ಸಹಾಯ ಮಾಡಬೇಕು ಎಂಬುದು ನಿಮ್ಮ ಉದ್ದೇಶವೋ ಅಥವಾ ಅವಕಾಶಗಳನ್ನು ಕಿತ್ತುಕೊಳ್ಳಬೇಕು ಎಂಬುದೋ? ಬೇಡ ಜಂಗಮ ಎಂದು ಯಾರು ನಕಲಿ ಪತ್ರ ನೀಡುವವರಿಗೆ ಶಿಕ್ಷೆ ನೀಡಬೇಕು.‌ ಈ ಅನ್ಯಾಯ ತಡೆಯಬೇಕು ಎಂದು ಸರ್ಕಾರದ ಬಳಿ ಕೈ ಮುಗಿದು ಕೇಳುತ್ತೇನೆ ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist