ಬೆಂಗಳೂರು(thenewzmirror.com):ಮಹಿಳೆ ಸ್ವಾಭಿಮಾನದ ಪ್ರತೀಕ. ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದ್ದು, ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟ ನಡೆಸಬೇಕಾಗುವುದು ಅನಿವಾರ್ಯ ಎಂದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳೆಯರು ಕುಟುಂಬ ಸಮಾಜ ಅಥವಾ ಯಾವುದೇ ಕ್ಷೇತ್ರದಲ್ಲೂ, ಸಮರ್ಥವಾಗಿ ನಿಭಾಯಿಸದೆ ಹಿಂದೆ ಸರಿದ ಉದಾಹರಣೆಗಳಿಲ್ಲ. ಮಹಿಳೆಗೆ ತನ್ನದೇ ಆದ ಜವಾಬ್ದಾರಿ ಇದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ ಎಂದರು.
ಹೆಣ್ಣುಮಕ್ಕಳಿಗೆ ಜವಾಬ್ದಾರಿ ಜಾಸ್ತಿ. ಪುರುಷರಿಗಿಂತ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು. ಮನೆಯ ಒಳಗೆ ಮತ್ತು ಹೊರಗೂ ತನ್ನದೇ ಆದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುವ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಚಿವರು ಹೇಳಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಇಂದು ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿ ಹೆಣ್ಣು ಮಗಳ ಜೀವನದ ಹಿಂದೆ ತನ್ನದೇ ಆದ ಕಥೆಗಳಿವೆ. ತಳಮಟ್ಟದಿಂದ ಮೇಲೆ ಬಂದು ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯರು ಬೆಳೆದಿದ್ದಾರೆ. ಗುರಿ ಇಲ್ಲದ ಜೀವನ ಮಹಿಳೆಗೆ ಸಾಧುವಲ್ಲ. ಗುರಿ ಮುಂದಿಟ್ಟುಕೊಂಡೆ ಮುಂದೆ ಸಾಗಬೇಕು ಎಂದು ಸಚಿವರು ಕರೆ ನೀಡಿದರು.
ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಿಳೆಯರ ಪ್ರತೀಕವಾಗಿ ನಮ್ಮ ಮುಂದಿದ್ದಾರೆ. ಒಂದೆಡೆ ಅಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರೂ ಜೀವನದುದ್ದಕ್ಕೂ ಸಮಾಜಕ್ಕಾಗಿ ಕಳೆದರು. ಅವರು ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಹಾಗೆಯೇ ಕಿತ್ತೂರು ರಾಣಿ ಚನ್ನಮ್ಮ ನಮ್ಮ ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವಾರು ಯೋಜನೆಗಳನ್ನು ತಂದಿದೆ. ರಾಜ್ಯದ 37 ಲಕ್ಷ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, 15 ಲಕ್ಷ ಬಾಣಂತಿಯರ ಆರೈಕೆ ಮಾಡುತ್ತಿದೆ, ದುರ್ಬಲ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನವನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವ ಇರಾದೆ ಹೊಂದಲಾಗಿದೆ ಎಂದರು.
6 ಸಂಸ್ಥೆಗಳಿಗೆ, 20 ಮಹಿಳಾ ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ
ಇದೇ ವೇಳೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 6 ಸಂಸ್ಥೆಗಳಿಗೆ, 20 ಮಹಿಳಾ ಸಾಧಕರು ಸೇರಿದಂತೆ ಒಟ್ಟು 26 ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಪ್ರದಾನ ಮಾಡಿದರು.
ಈ ವೇಳೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ಹಾಗೂ ಅಂತರಾಳ ಹಾಗೂ ಮಾದರಿ ಪೋಷಕತ್ವ ಮಾರ್ಗ ಸೂಚಿಗಳು -2024 ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
2024-25ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ” ಗಾಗಿ ಆಯ್ಕೆಯಾದವರ ವಿವರ
ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು
1. ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿಕ್ಕಮಗಳೂರು.
2. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬೆಂಗಳೂರು.
3. ಶ್ರೀದಾನೇಶ್ವರಿ ಮಹಿಳಾ ವಿದ್ಯುತ್ ಮಗ್ಗಗಳ ಸಹಕಾರಿ ಸಂಘ, ಮಂಗಳವಾರ ಪೇಟೆ, ವೀರಬದ್ರೇಶ್ವರ ಗುಡಿ ಹತ್ತಿರ, ಬನಹಟ್ಟಿ, ಬಾಗಲಕೋಟೆ.
4. ಚೇತನಾ ಸೇವಾ ಸಂಸ್ಥೆ(ರಿ), ದೀವಗಿ, ಕುಮಟಾ, ಉತ್ತರಕನ್ನಡ, ಶ್ರೀ ರಾಮಚಂದ್ರ ಕನ್ನಾ ಅಂಬಿಗ ಪೋ-ದೀವರ್ಗಿ, ಉತ್ತರಕನ್ನಡ ಜಿಲ್ಲೆ.
5. ರುಚಿ ಟ್ರಸ್ಟ್ (ಶಿಕ್ಷಣ, ಸಾಹಿತ್ಯ ಸಮಾಜಿಕ, ಸಂಸ್ಕೃತಿಕ ಕಲೆಗಳ ಅನಾವರಣ) ಮುದ್ದಾಳ ಕ್ರಾಸ್ ಸಮೀಪ, ಯಾದಗಿರಿ.
6. ನವಶ್ರೀ ಕಲಾಚೇತನ ಸಂಸ್ಥೆ ಅಧ್ಯಕ್ಷರು, ಕೇಶ್ವಾಪುರ, ಹುಬ್ಬಳಿ-ಧಾರವಾಡ ಜಿಲ್ಲೆ
ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲಿ ಸುತ್ತಿರುವ ವ್ಯಕ್ತಿಗಾಗಿ:
1. ಡಾ|| ವೀಣಾ ಎಸ್. ಭಟ್, ಭದ್ರಾವತಿ
2. ಡಾ|| ಪೂಜಾ ಮಲ್ಲಪ್ಪ ಬೇವೂರ ಗದಗ
3. ಶ್ರೀಮತಿ ಪ್ರೇಮಾ ಹೆಚ್ ಉಡುಪಿ
4. ಕುಮಾರಿ ರಶ್ಮಿ ಎಸ್ ಆರ್. ಹಾಸನ ಜಿಲ್ಲೆ
5. ಶ್ರೀಮತಿ ನಾಜೀಮಾ ಎಸ್. ಶಿವಮೊಗ್ಗ,
6. ಶ್ರೀಮತಿ ಸುವರ್ಣ, ಬೆಂಗಳೂರು
7. ಶ್ರೀಮತಿ ಮಂಜುಳ, ಮಂಡ್ಯ
8. ಕುಮಾರಿ ಅದಿತಿ ಪರಪ್ಪ ಕ್ಷಾತ್ರತೇಜ, ಧಾರವಾಡ
ಕಲೆ ಕ್ಷೇತ್ರ:
1. ಡಾ. ವೇದಾರಾಣಿ ದಾಸನೂರ, ಧಾರವಾಡ
2. ಶ್ರೀಮತಿ ಉಷಾ ಬಸಪ್ಪ ಬೆಂಗಳೂರು
3. ವಿದುಷಿ: ರಜನಿ ಎಲ್ ಕರಿಗಾರ ರಾಣೇಬೆನ್ನೂರು
4. ಶ್ರೀಮತಿ ಎ. ಎಸ್. ಪದ್ಮಾವತಿ ಭದ್ರಾವತಿ
5. ಶ್ರೀಮತಿ ಪೂಜಾ ರಘುನಂದನ್, ಹಾಸನ
ಸಾಹಿತ್ಯ ಕ್ಷೇತ್ರ:
1. ರಿಶಲ್ ಬ್ರಿಟ್ಟಿ ಫೆರ್ನಾಂಡೀಸ್, ಮಂಗಳೂರು
2. ಡಾ. ಸಂಗೀತಾ ಎಂ. ಹೀರೇಮಠ, ಕಲಬುರಗಿ
3. ಕಸ್ತೂರಿ.ಡಿ.ಪತ್ತಾರ್, ಕೊಪ್ಪಳ ಜಿಲ್ಲೆ
ಕ್ರೀಡಾ ಕ್ಷೇತ್ರ:
1. ಶ್ರೀಮತಿ ಗಾಯತ್ರಿ, ಉತ್ತರ ಕನ್ನಡ
2. ಶ್ರೀಮತಿ ಅಮೂಲ್ಯಾ, ಹಾವೇರಿ
ಶಿಕ್ಷಣ ಕ್ಷೇತ್ರ:
1. ಶ್ರೀಮತಿ ಲಲಿತಾ ಸಿ.ಕರಿಮನಿ, ಗದಗ ಜಿಲ್ಲೆ
ವೀರ ಮಹಿಳೆ ಕ್ಷೇತ್ರ:
ಡಾ. ವಿಶಾಲಾಕ್ಷಿ. ಕರಡ್ಡಿ, ಕಲಬುರಗಿ
2024-25ನೇ ಸಾಲಿನಲ್ಲಿ ಸ್ತ್ರೀಶಕ್ತಿ ಯೋಜನೆಯಡಿ ಅತ್ಯುತ್ತಮವಾಗಿ ರಾಜ್ಯಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳು:
1. ಆದಿಶಕ್ತಿ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಗದಗ
2. ಐಶ್ವರ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಳಗಾವಿ
3. ಶ್ರೀ ಶಾರದಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬೆಂಗಳೂರು ಗ್ರಾಮಾಂತರ
2024-25ನೇ ಸಾಲಿನಲ್ಲಿ ಶ್ರೀಮತಿ ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳು:
1. ಶ್ರೀ ಪಾರ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಚಿತ್ರದುರ್ಗ
2. ಶ್ರೀ ಗೌತಮ ಬುದ್ಧ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಮೈಸೂರು
3. ನೀಲಾಂಬಿಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಬಾಗಲಕೋಟೆ
4. ಶ್ರೀ ಶಕ್ತಿ ಮಲ್ಲಿಕಾರ್ಜುನ ಮಹಿಳಾ ಸ್ವಸಹಾಯ ಸಂಘ, ಕಲಬುರಗಿ
2024-25ನೇ ಸಾಲಿನಲ್ಲಿ ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿಗೆ ಆಯ್ಕೆ ಮಾಡಿರುವ ತಾಲ್ಲೂಕು ಒಕ್ಕೂಟಗಳು:
1. ಸ್ತ್ರೀಶಕ್ತಿ ಮಹಿಳಾ ಬ್ಲಾಕ್ ಸೊಸೈಟಿ, ಬೆಂಗಳೂರು ನಗರ
2. ಸಹನ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಚಿಕ್ಕಬಳ್ಳಾಪುರ
3. ಶ್ರೀ ಬನಶಂಕರಿ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಬಾಗಲಕೋಟೆ