Wonderla Free Ticket | ವಂಡರ್ ಲಾ ಫ್ರೀ ಟಿಕೆಟ್ ಬೇಕಾ ಹೀಗೆ ಮಾಡಿ ಪಕ್ಕಾ ಸಿಗುತ್ತೆ..!

ಬೆಂಗಳೂರು,(www.thenewzmirror.com) ;

ವೀಕೆಂಡ್ ನಲ್ಲಿ ಮಸ್ತ್ ಮಜಾ ಮಾಡೋರಿಗೆ ವಂಡರ್ ಲಾ ಭರ್ಜಿರ ಗಿಫ್ಟ್ ವೊಂದನ್ನ ಕೊಡ್ತಿದೆ. ಆಗಸ್ಟ್ 4 ಸ್ನೇಹಿತರ ದಿನಾಚರಣೆ ಇದರ ಅಂಗವಾಗಿಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತ ಕೊಡುಗೆಯನ್ನ ಘೋಷಣೆ ಮಾಡಿದೆ.

RELATED POSTS

ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್, ಸ್ನೇಹಿತರ ದಿನಾಚರಣೆ ಪ್ರಯುಕ್ತ ಆಗಸ್ಟ್ 4 ರಂದು ವಿಶೇಷ ಕೊಡುಗೆ ಘೋಷಿಸಿದೆ. ಆಗಸ್ಟ್‌ 4 ಸ್ನೇಹಿತರ ದಿನದಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿರಲಿದೆ. ಈ ಕೊಡುಗೆಯು ಆನ್‌ಲೈನ್‌ನಲ್ಲಿ ಬುಕ್‌ ಮಾಡುವವರಿಗೆ ಮಾತ್ರ ಅನ್ವಯವಾಗಲಿದೆ.

ಉಚಿತ ಟಿಕೆಟ್ ಕುರಿತಂತೆ ಮಾಹಿತಿ ನೀಡಿರುವ ವಂಡರ್ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಸ್ನೇಹಿತರ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು ವಂಡರ್‌ಲಾ ಟಿಕೆಟ್‌ ಖರೀದಿಯ ಮೇಲೆ ಕೊಡುಗೆ ನೀಡಿದೆ. ಪ್ರತಿಯೊಬ್ಬರು ಹೆಚ್ಚು ಮನರಂಜನೆ ಅನುಭವಿಸುವುದು ಸ್ನೇಹಿತರು ಜೊತೆಗಿದ್ದ ಸಂದರ್ಭದಲ್ಲಿ. ಈ ಮನರಂಜನೆಗೆ ವೇದಿಕೆಯಾಗಿ ವಂಡರ್‌ಲಾ ಈ ಕೊಡುಗೆ ನೀಡಿರುವುದು, ತಮ್ಮ ಸ್ನೇಹಿತರೊಂದಿಗೆ ವಂಡರ್‌ಲಾಗೆ ಆಗಮಿಸಿ ಇಲ್ಲಿನ ಇನ್ನಷ್ಟು ಮೋಜು ಮಸ್ತಿ ಮಾಡಲು ಪ್ರೇರೇಪಿಸುತ್ತದೆ ಎಂದಿದ್ದಾರೆ.

ಈ ವಿಶೇಷ ಕೊಡುಗೆಗಳಲ್ಲಿ ಲೈವ್ ಡಿಜೆ, ವಿಶೇಷ ಸಂಜೆ ಜುಂಬಾ ಸೆಷನ್‌ಗಳು, ಮೋಜಿನ ಆಟಗಳು ಮತ್ತು ಬಹುಮಾನಗಳು, ಎಲ್ಲಾ ರೋಮಾಂಚಕ ಪಾರ್ಕ್ ರೈಡ್‌ಗಳು ಮತ್ತು ಸೌಕರ್ಯಗಳನ್ನು ಒದಗಿಸುತ್ತಿದ್ದು, ನಿಮ್ಮ ಸ್ನೇಹಿತರೊಂದಿಗೆ ಮೋಜುಮಸ್ತಿ ಮಾಡಲು ವಂಡರ್‌ಲಾ ಉತ್ತಮ ತಾಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಉದ್ಯಾನವನಗಳು ವಿಸ್ತೃತ ಅವಧಿಯವರೆಗೆ ತೆರೆದಿರಲಿವೆ. ಹೀಗಾಗಿ ಸಂಜೆಯ ಹೆಚ್ಚುವರಿ ಸಮಯವನ್ನು ವಂಡರ್‌ಲಾದಲ್ಲಿ ಕಳೆಯಬಹುದು.

ಆನ್‌ಲೈನ್ ಪೋರ್ಟಲ್ https://bookings.wonderla.com/ ನಲ್ಲಿ ಮುಂಗಡವಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ +91 80372 30333 ಅಥವಾ +91 80350 73966 ಬೆಂಗಳೂರು ಪಾರ್ಕ್ ಅನ್ನು ಸಂಪರ್ಕಿಸಬಹುದು

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist