ಬೆಂಗಳೂರು, (www.thenezmirror.com) ;
ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ(Stadium) ಎನ್ನುವ ಖ್ಯಾತಿಗೆ ಅಹಮದಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ. ಅತ್ಯಂತ ಹೈಟೆಕ್ ಆಗಿ ನಿರ್ಮಾಣ ಮಾಡಿರುವ ಮೈದಾನ ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಯಾಕಂದ್ರೆ ಈ ದೊಡ್ಡ ಮೈದಾನ ಮಳೆಗೆ ಸೋರುತಿದೆಯಂತೆ.
ಗುಜರಾತ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ IPL 2023 ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಭಾರೀ ಮಳೆಯಿಂದಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಫೈನಲ್ ಪಂದ್ಯ ಭಾನುವಾರದ ಬದಲು ಸೋಮವಾರದ ದಿನಕ್ಕೆ ಶಿಫ್ಟ್ ಆಗಿತ್ತು.
ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಮೈದಾನ ಬಿಟ್ಟು ತೆರಳಲು ಸಾಧ್ಯವಾಗದ ಅಭಿಮಾನಿಗಳು ಮೈದಾನದಲ್ಲೇ ಉಳಿಯುವಂತಾಗಿತ್ತು. ಇಂಥ ಸಮಯದಲ್ಲಿ ಮೈದಾನ ಸೋರುತ್ತಿರೋದನ್ನ ಒಂದಷ್ಟು ಅಭಿಮಾನಿಗಳು ಗಮನಿಸಿ ಅದನ್ನ ವೀಡಿಯೋ ಮಾಡಿದ್ದಾರೆ.
ಕೇವಲ ವೀಡಿಯೋ ಮಾಡಿದಷ್ಟೇ ಅಲ್ಲ ಅದನ್ನ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ.
https://twitter.com/CSKian716/status/1662887133408018432?s=20
ಕ್ರೀಡಾಂಗಣದ ಮೇಲ್ಛಾವಣಿಯಿಂದ ಸೋರಿದ ನೀರನ್ನು ಕ್ರೀಡಾಭಿಮಾನಿ ಹೊರಹಾಕುತ್ತಿರೋದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಶ್ರೀಮಂತ ಕ್ರಿಕೆಟ್ ಮಂಡಳಿಯು ಸೋರಿಕೆಯಾಗುತ್ತಿದೆ ಎಂಬ ಪೋಸ್ಟ್ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ಕೆಲವರು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಳಪೆ ಮೂಲಸೌಕರ್ಯಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ.