ಕೆಜಿಎಫ್ , (www.thenewzmirror.com) ;
ದೇಶದ ಸಮಸ್ತ ಮಹಿಳಾ ಕುಲ ಶಿಕ್ಷಣ ಮಾತೆ ಸಾವಿತ್ರಿಬಾಯಿ ಪುಲೆ ಯವರನ್ನು ಸ್ಮರಿಸುವಂತಾಗಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಜಿಎಫ್ ಪಟ್ಟಣದ ಶಿಕ್ಷಕರ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ದೇಶದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಪುಲೆ194ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅಂದಿನ ಕಾಲದಲ್ಲಿ ಮಹಿಳೆಯರು ಮತ್ತು ಅಸ್ಪೃಶ್ಯರು ಶಿಕ್ಷಣದಿಂದ ನಿರಾಕರಿಸಲ್ಪಟ್ಟ ಕಾಲಘಟ್ಟದಲ್ಲಿ ತನ್ನ ಪತಿಯಿಂದಲೇ ಅಕ್ಷರ ಕಲಿತು ನಂತರ ದೇಶದ ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ದೇಶದ ಪ್ರತಿಯೊಬ್ಬ ಮಹಿಳೆಯರು ಮರೆಯುವಂತಿಲ್ಲ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೈದಾಬಿ ಮಾತನಾಡಿ ಪ್ರತಿಯೊಬ್ಬ ಮಹಿಳಾ ಶಿಕ್ಷಕರಿಗೂ ಸಾವಿತ್ರಿಬಾಯಿ ಪುಲೆ ಮಾದರಿಯಾಗಿದ್ದಾರೆ . ಅವರ ಹುಟ್ಟುಹಬ್ಬ ಚೆನ್ನಾಗಿ ಮಾಡುವುದು ಮುಖ್ಯವಲ್ಲ ಪ್ರತಿಯೊಬ್ಬ ಮಹಿಳಾ ಶಿಕ್ಷಕರು ತಮ್ಮ ಸೇವೆಯನ್ನು ಮಕ್ಕಳಿಗೆ ಯಾವ ರೀತಿ ನೀಡಬೇಕು ಎನ್ನುವುದು ಬಹು ಮುಖ್ಯ ಸರ್ಕಾರ ವೇತನ ನೀಡುತ್ತೆ ನಮಗೇನು ಎನ್ನುವ ಉದ್ದೇಶ ಬಿಟ್ಟು ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು ಮಕ್ಕಳು ಶಿಕ್ಷಣವನ್ನು ಪಡೆದ ಶಿಕ್ಷಕರನ್ನು ನೆನೆಯಬೇಕು ಆಗ ಮಾತ್ರ ನೀವು ನಿಜವಾದ ಶಿಕ್ಷಕರಾಗಲು ಅರ್ಹರು ಎಂದು ಕಿವಿ ಮಾತು ಹೇಳಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಎಲ್. ಎನ್. ನರಸಿಂಹಮೂರ್ತಿ ಮಾತನಾಡಿ ಮಾತೆ ಸಾವಿತ್ರಿಬಾಯಿ ಫುಲೆ ಅವರು ಬೆಳಗಿಸಿದ ದೀಪವನ್ನು ನಾವು ಬೆಳಗಿಸುವುದು. ಇದು ನಮ್ಮ ಕರ್ತವ್ಯ. ವಿಶೇಷವಾಗಿ ನಮ್ಮ ಕೆಜಿಎಫ್ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರು ಹೆಚ್ಚಾಗಿದ್ದು. ಸಂತೋಷದ ಸಂಗತಿ ಮಹಿಳೆ ತಾಯಿಯ ರೂಪಿಯಾಗಿದ್ದು, ಮನೆಯ ಸಂಸಾರ ನಿಭಾಯಿಸುವುದಾಗಲಿ ತರಗತಿಗಳಲ್ಲಿ ಮಕ್ಕಳೊಂದಿಗೆ ಬೆರೆಯುವದಾಗಲಿ ತಾಯಿ ಇದ್ದಂಗೆ. ನಮ್ಮ ಕೆಜಿಎಫ್ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಪುಣ್ಯವಂತರು ಕಾರಣ ಎಲ್ಲಾ ಶಾಲೆಗಳಲ್ಲಿ ಮಹಿಳಾ ಶಿಕ್ಷಕರ ಹೆಚ್ಚಾಗಿದ್ದು. ಮಕ್ಕಳನ್ನು ಪ್ರೀತಿಯಿಂದ ಸಹಬಾಳ್ವೆಯಿಂದ ತಾಯಿಯ ಸ್ಥಾನದಲ್ಲಿ ನೋಡಿಕೊಳ್ಳುತ್ತಾರೆ ಎಂದರು.
ಮಹಿಳಾ ಶಿಕ್ಷಕರಿಗೆ ಯಾವುದೇ ಒಂದು ಕಷ್ಟ ಬಂದಾಗ ನಮ್ಮ ಸಂಘಟನೆ ಮತ್ತು ಎಲ್ಲಾ ವೃಂದ ಸಂಘಗಳು ಸಹಕಾರ ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಅಧ್ಯಕ್ಷರು. ಮಲ್ಲಿಕಾ. ಪ್ರಧಾನ ಕಾರ್ಯದರ್ಶಿ. ಮೇನಕ. ಪದಾಧಿಕಾರಿಗಳು ನಾಗವೇಣಿ. ಗೀತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಪಿ.ವಿ. ಶ್ರೀನಿವಾಸ್. ಕಾರ್ಯದರ್ಶಿ. ರವಿಚಂದ್ರನ್ ನಾಯ್ಡು. ಗೌರವಾಧ್ಯಕ್ಷರು. ಉಮಾದೇವಿ. ಖಜಂಚಿ. ಭಾರತಿ. ಬಡ್ತಿ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷರು. ಎಂ. ಶ್ರೀನಿವಾಸ್. ಆರ್ ಸೋಮಶೇಖರ್. ತಾಲೂಕು ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರು. ಕೃಷ್ಣಮೂರ್ತಿ. ಎಸ್ಸಿ ಎಸ್ಟಿ ಶಿಕ್ಷಕರ ನೌಕರ ಸಂಘದ ಅಧ್ಯಕ್ಷರು. ಗಂಗಾಧರ್. ಅಶ್ವಥ್. ಸುರೇಶ್. ನರಸಿಂಹಮೂರ್ತಿ. ಸಮಾಜ ಸೇವಕರು. ಉಮೇಶ್ ಹಲವಾರು ಮುಖಂಡರು ಭಾಗವಹಿಸಿದ್ದರು.