ಬೆಂಗಳೂರು, (www.thenewzmirror.com) ;
KSRTC ನೌಕರರು ಮತ್ತು ಅವರ ಅವಲಂಬಿತ ಕುಟಂಬದ ಸದಸ್ಯರುಗಳಿಗೆ ಅನುಕೂಲವಾಗುವ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಎಸ್ಸಾರ್ಟಿಸಿ ನೌಕರರಿಗೆ ನಗದು ರಹಿತ ಯೋಜನೆಗೆ ಚಾಲನೆ ನೀಡಿದರು.
ನೌಕರರ ಬಹುದಿನದ ಬೇಡಿಕೆಯನ್ನ ಈಡೇರಿಸುವಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪಾತ್ರ ಬಹುಮುಖ್ಯವಾಗಿದ್ದು, ನೌಕರರು ಮತ್ತವರ ಕುಟುಂಬದ ಸದಸ್ಯರು ನಿಗಧಿ ಪಡಿಸಿದ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಟ್ರೀಟ್ ಮೆಂಟ್ ಪಡೆಯಬಹುದಾಗಿದೆ.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಒಳ್ಳೆಯ ಕಾರ್ಯ ಮಾಡುತ್ತಿದೆ. ಶಕ್ತಿ ಯೋಜನೆಯು ಜಾರಿಯಾದ ನಂತರ ಲಿಂಗ ತಾರತಮ್ಮ ಹೋಗಲಾಡಿಸಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ ಎಂದರಲ್ಲದೇ ಈ ಯೋಜನೆಯ ಫಲನಾಭವಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮನೋಭಾವದಿಂದ ನೋಡಬಾರದು, ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಂತೆ ಪರಿಗಣಿಸುವಂತೆ ವೈದ್ಯರಿಗೆ ಸಲಹೆ ಕೊಟ್ಟರು.
ಇದೇ ಸಂದರ್ಭದಲ್ಲಿ ಕೆ.ಎಸ್. ಆರ್. ಟಿ.ಸಿ ಟ್ರಸ್ಟ್‌ಗೆ ರೂ.20 ಕೋಟಿಗಳ ಚಕ್‌ನ್ನು ಹಸ್ತಾಂತರಿಸಿದರು ಹಾಗೂ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ ಸಂಚಿಕೆಯನ್ನು ಹಾಗೂ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ಯೋಜನೆಗೆ ಸುಮಾರು 34,000 ಸಿಬ್ಬಂದಿಗಳು ಮತ್ತು ಅವರ ಅವಲಂಬಿತರು (ಅಂದಾಜು 1.50 ಲಕ್ಷ) ಅರ್ಹರಾಗಿರುತ್ತಾರೆ. ರಾಜ್ಯದ ಸುಮಾರು 275 ಕ್ಕೂ ಹೆಚ್ಚಿನ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ರು. ಕಾರ್ಮಿಕ ಸಂಘಟನೆಗಳ ಹಲವು ವರ್ಷಗಳ ಬೇಡಿಕೆಯನ್ನು ಇದೀಗ ಈಡೇರಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಈ ಯೋಜನೆಯನ್ನು ಬೆಂ.ಮ.ಸಾ.ಸಂಸ್ಥೆ/ ವಾ.ಕ.ರ.ಸಾ. ಸಂಸ್ಥೆ/ ಕ.ಕ.ರ.ಸಾ.ಸಂಸ್ಥೆಗಳಲ್ಲೂ ಜಾರಿ ಮಾಡುವ ಭರವಸೆ ಕೊಟ್ರು.
ಕೆಎಸ್ಆರ್ಟಿಸಿ ಆರೋಗ್ಯ ನಗದು ರಹಿತ ಚಿಕಿತ್ಸಾ ಯೋಜನೆಯ ರೂಪುರೇಷೆಗಳು
– ನಿಗಮದ ಎಲ್ಲಾ 34000 ನೌಕರರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
– ನೌಕರ, ಪತ್ನಿ/ಪತಿ ಅವಲಂಬಿತ ಮಕ್ಕಳು ಮತ್ತು ಅವಲಂಬಿತ ತಂದೆ ಮತ್ತು ತಾಯಿ ಯೋಜನೆಯಲ್ಲಿ ಒಳಗೊಳ್ಳುತ್ತಾರೆ.
– ಕಣ್ಣಿನ ಹಾಗೂ ದಂತ ಚಿಕಿತ್ಸಾ ವೆಚ್ಚವೂ ಸಹ ಯೋಜನೆಯಲ್ಲಿ ಒಳಗೊಂಡಿರುತ್ತದೆ.
– ಒಳರೋಗಿ ಚಿಕಿತ್ಸಾ ವೆಚ್ಚಕ್ಕೆ ಯಾವುದೇ ಗರಿಷ್ಠ ಮೊತ್ತ ನಿಗದಿಯಿಲ್ಲ.
– ಆಯುರ್ವೇದ, ಪ್ರಕೃತಿ, ಯುನಾನಿ & ಹೋಮಿಯೋಪತಿ ಚಿಕಿತ್ಸೆಗಳು.
ಪ್ರಾರಂಭದಲ್ಲಿ 275 ಆಸ್ಪತ್ರೆಗಳಲ್ಲಿ ಹಾಗೂ 4 Diagnostics Center ಗಳಲ್ಲಿ CGHS-2014ರ ದರಪಟ್ಟಿಯಂತೆ IP/OPD ನಗದು ರಹಿತ ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಆಯ್ಕೆ ಮಾಡಿಕೊಂಡ ಆಸ್ಪತ್ರೆಗಳೊಂದಿಗೆ 3+1+1 ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.
ತಂದೆ ಮತ್ತು ತಾಯಿಯ ಒಟ್ಟು ಮಾಸಿಕ ಆದಾಯ ಚಾಲ್ತಿಯಲ್ಲಿರುವ ಕನಿಷ್ಠ ಪಿಂಚಣಿ ರೂ.13500 + ತುಟ್ಟಿ ಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಿರಬಾರದು. ನೂತನ “KSRTC Arogya” ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಗಮದ ವತಿಯಿಂದ ಪ್ರಾರಂಭಿಕ ರೂ.20.00 ಕೋಟಿಗಳನ್ನು Corpus fund ನಿಂದ ಪಾವತಿಸಲಾಗುವುದು. ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನದಿಂದ ಮಾಸಿಕ ರೂ.650/- ಗಳನ್ನು ವಂತಿಕೆ ರೂಪದಲ್ಲಿ ಕಡಿತಗೊಳಿಸಲು ಉದ್ದೇಶಿಸಲಾಗಿದೆ.
ಈ ಸಂಬAಧ “KSRTC Arogya” ನ್ಯಾಸ ಮಂಡಳಿಯನ್ನು, ನ್ಯಾಸ ಮಂಡಳಿಯ ಮುಖ್ಯ ಸಮಿತಿಯ ಧರ್ಮದರ್ಶಿಗಳು ಹಾಗೂ ಇಬ್ಬರು ಮಹಿಳಾ ಹಾಗೂ ಇಬ್ಬರು ಪುರುಷ ನೌಕರರನ್ನೊಳಗೊಂಡಂತೆ ರಚಿಸಲಾಗಿದೆ. ನಿಗಮದ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನದಿಂದ ಮಾಸಿಕ ರೂ.650/- ಗಳನ್ನು ವಂತಿಕೆ ರೂಪದಲ್ಲಿ ಕಡಿತಗೊಳಿಸಲಾಗಿದೆ. ನಂತರದ ವರ್ಷದಲ್ಲಿ ಪ್ರತಿ ನೌಕರರ ವಂತಿಕೆಯನ್ನು ರೂ.50/- ರಂತೆ ಪ್ರತಿ ವರ್ಷ ಹೆಚ್ಚಿಸಲಾಗುವುದು ಹಾಗೂ ಈ ಸೌಲಭ್ಯವನ್ನು ತರಬೇತಿ ನೌಕರರಿಗೂ ನೀಡುತ್ತಿದ್ದು, ಇವರಿಂದ ಯಾವುದೇ ವಂತಿಕೆ ಕಡಿತಗೊಳಿಸುವುದಿಲ್ಲ.