BSNL News | BSNLನಿಂದ ಗ್ರಾಹಕರಿಗೆ ಗುಡ್‌ ನ್ಯೂಸ್;‌ ಒಂದು ವರ್ಷದ ಪ್ಲಾನ್‌ ಪರಿಚಯಿಸಿದ ನಿಗಮ.!

BSNL New Plan

ಬೆಂಗಳೂರು, (www.thenewzmirror.com);

ಖಾಸಗಿ ಮೊಬೈಲ್‌ ಕಂಪನಿಗಳಿಗೆ ಠಕ್ಕರ್‌ ನೀಡುವ ನಿಟ್ಟಿನಲ್ಲಿ BSNL ಇದೀಗ ಪ್ಲಾನ್‌ ಒಂದನ್ನ ಪರಿಚಯಿಸಿದೆ. ಆ ಮೂಲಕ ಇನ್ನಷ್ಟು ಬಳಕೆದಾರರನ್ನ ತನ್ನತ್ತ ಸೆಳೆಯೋಕೆ ಸಿದ್ದವಾಗಿದೆ. ಇತ್ತೀಚೆಗೆ ಕೆಲ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ಪ್ಲಾನ್‌ ಅನ್ನ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಶಾಕ್‌ ನೀಡಿತ್ತು. ಇದರ ನಡುವೆಯೂ BSNL ಅಗ್ಗದ ಪ್ಲಾನ್‌ ಒಂದನ್ನ ಪರಿಚಯಿಸಿದ್ದು, ಬೇರೆ ಯಾವ ಟೆಲಿಕಾಂ ಕಂಪನಿಗಳು ನೀಡದ ಆಫರ್‌ ಅನ್ನ ಇದೀಗ ನೀಡಲು ಮುಂದಾಗಿದೆ.

RELATED POSTS

ಕಳೆದ ಕೆಲ ತಿಂಗಳಿನಿಂದ BSNL ತನ್ನ ಬಳಕೆದಾರರ ಸಂಖ್ಯೆಯನ್ನ ನಿರೀಕ್ಷೆಗೂ ಮೀರಿ ಹೆಚ್ಚಿಸಿಕೊಂಡಿದೆ. ಇದಕ್ಕೆ ಕಾರಣ ಅಲ್ಪಾವಧಿ ಹಾಗೂ ದೀರ್ಘಾವದಿ ಮೊಬೈಲ್‌ ರಿಚಾರ್ಜ್‌ ಯೋಜನೆ ನೀಡಿದ್ದು ಇದಕ್ಕೆ ಪ್ರಮುಖ ಕಾರಣ. ಇದರ ನಡುವೆನೇ ಇದೀಗ ಮತ್ತೊಂದು ಗ್ರಾಹಕರ ಸ್ನೇಹಿ ಪ್ಲಾನ್‌ ಒಂದನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ.
BSNL 797 ರೂಪಾಯಿ ಪ್ರಿಪೇಯ್ಡ್‌ ಯೋಜನೆ ಇದೀಗ ಪರಿಚಯಿಸಿದ್ದು, ಇದರ ವ್ಯಾಲಿಟಿಡಿ ಬರೋಬ್ಬರಿ 300 ದಿನಗಳು ಇರಲಿದೆ. ಆ ಮೂಲಕ BSNL ಇದೇ ಮೊದಲ ಬಾರಿಗೆ ಇಂಥ ಪ್ಲಾನ್‌ ಗ್ರಾಹಕರಿಗೆ ನೀಡಿದೆ.

ನೀವು ಬಳಸುವ BSNL ಸಿಮ್ ಸುಮಾರು ಒಂದು ವರ್ಷದವರೆಗೆ ಸಕ್ರಿಯವಾಗಿಡಲು ಇದು ಅತ್ಯುತ್ತಮ ಆಯ್ಕೆ ಆಗಿದೆ. BSNL 797 ರೂಪಾಯಿಗೆ ಪ್ರಿಪೇಯ್ಡ್ ಯೋಜನೆ ಜಾರಿಗೆ ತಂದಿದೆ. ಇದು ಬರೋಬ್ಬರಿ 300 ದಿನಗಳ ಕಾಲ ದೀರ್ಘ ಅವಧಿಗೆ ಪ್ರಯೋಜನೆ ನೀಡಿದೆ. ಹೆಚ್ಚುವರಿ ಹಣಕ್ಕೆ ಮತ್ತಷ್ಟು ದಿನ ಪ್ರಯೋಜನ ಪಡೆಯಲು ಇಲ್ಲಿ ಅವಕಾಶ ಇದೆ ಎಂದು BSNL ಮಾಹಿತಿ ನೀಡಿದೆ. ಗ್ರಾಹಕರು ಚಿಂತೆ ಬಿಡಿ 300 ದಿನದ ಸೇವೆ ಪಡೆಯಿರಿ!

ಕೆಲ ಖಾಸಗಿ ಟೆಲಿಕಾಂ ಕಂಪನಿಗಳು 28, 54 ಇಲ್ಲ 84 ದಿನಗಳ ರಿಚಾರ್ಜ್‌ ಪ್ಲಾನ್‌ ಅನ್ನ ನೀಡುತ್ತಿದ್ದಿದ್ದನ್ನ ನೋಡ್ತಾ ಇದ್ವಿ. ಇದೆಲ್ಲದಕ್ಕೂ ಸೆಡ್ಡು ಹೊಡೆಯೋ ನಿಟ್ಟಿನಲ್ಲಿ BSNL 797ರೂಪಾಯಿ ಪ್ರಿಪೇಯ್ಡ್‌ ರಿಚಾರ್ಜ್‌ ಪ್ಲಾನ್‌ ಪರಿಚಯಿಸಿದೆ. ಪದೇ ಪದೆ ರಿಜಾರ್ಚ್ ಕಿರಿಕಿರಿ ಇಲ್ಲದೇ ಬರೀ 797 ರೂಪಾಯಿ ಕೊಟ್ಟು 300 ದಿನಗಳವರೆಗೆ ರಿಚಾರ್ಜ್ ಪಡೆಯಬಹುದು.

BSNL 797 ಪ್ಲಾನ್‌ ನ ಅನುಕೂಲಗಳು

  • ಒಂದು ವರ್ಷದ ಪ್ಲಾನ್
  • ಅನಿಯಮಿತ ಉಚಿತ ಕರೆ
  • 4ಜಿ ಡೇಟಾ ಪ್ರಯೋಜನ
  • ಮೊದಲ 60 ದಿನ ಯಾವುದೇ ನೆಟ್‌ವರ್ಕ್‌ ಅಡಿ ಅನಿಯಮಿತ ಉಚಿತ ಕರೆ
  • ಮೊದಲ 60 ದಿನಗಳವರೆಗೆ ದಿನಕ್ಕೆ 2GB ಡೇಟಾ (ಒಟ್ಟು 120GB ಡೇಟಾ)
  • ಎರಡು ತಿಂಗಳಲ್ಲಿ ನೀವು ನಿತ್ಯ 100 ಉಚಿತ ಎಸ್‌ಎಂಎಸ್
  • ಮೊದಲ 60 ದಿನಗಳ ನಂತರ ಉಚಿತ ಕರೆ ಹಾಗೂ ಡೇಟಾ ಪ್ರಯೋಜನ
  • ಸಿಮ್ ಬರೋಬ್ಬರಿ 300 ದಿನಗಳ ಸಕ್ರಿಯ
  • 797 ರೂಪಾಯಿ 10 ತಿಂಗಳವರೆಗೆ ಲಾಭ
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist