ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ ಮಾಡಿದ ಕನ್ನಡಿಗ. !

ಬೆಂಗಳೂರು, (www.thenewzmirror.com);

ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ  ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ.

RELATED POSTS

ಸ್ವಾಮಿ ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಸ್ವಾಮಿ ಅವರು ಕಾರ್ಪೊರೇಟ್ ಜಗತ್ತಿನಲ್ಲಿ 27 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಅನುಭವಿ ಮ್ಯಾನೇಜ್‍ಮೆಂಟ್ ವೃತ್ತಿಪರರಾಗಿದ್ದು, ಕಲೆಯ ಬಗ್ಗೆ ಅತ್ಯುತ್ಸಾಹ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಈ ಸೃಜನಶೀಲ ಪ್ರಯಾಣವನ್ನು ಅವರು 2018 ರಲ್ಲಿ ಪ್ರಾರಂಭಿಸಿ ಫೆಬ್ರವರಿ 2023 ರವರೆಗೆ 5 ವರ್ಷಗಳ ಅವಧಿಯಲ್ಲಿ 178ಕ್ಕೂ ಅಧಿಕ ಮಹಾಭಾರತದ ಕಲಾಕೃತಿಗಳನ್ನು ರಚಿಸುವ ಮೂಲಕ ಮಹಾಭಾರತ ಕಲಾರಸಿಕರಿಗೆ ಕೊಡುಗೆಯನ್ನು ನೀಡಿದ್ದಾರೆ.

ಮಹಾಭಾರದ ಸರಣಿಯನ್ನು ಅನಾವರಣಗೊಳಿಸಿದ ಬಳಿಕ ಸ್ವಾಮಿ ಮಾತನಾಡಿ, ನಿಜಕ್ಕೂ ನಾನು ರೋಮಾಂಚಿತನಾಗಿದ್ದೇನೆ. ಐದು ವರ್ಷಗಳ ಅವಧಿಯನ್ನು ಮೀಸಲಿಟ್ಟು 24’’ BY 30’’ ಅಳತೆಯ ಕ್ಯಾನ್ವಾಸ್‍ಗಳಲ್ಲಿ ರಚಿಸಿರುವ ಮಹಾಭಾರತದ ಸರಣಿಯ 178 ತೈಲವರ್ಣ ಫ್ರೇಮ್-ಟು-ಫ್ರೇಮ್ ತೈಲವರ್ಣ ಕಲಾಕೃತಿಗಳನ್ನು ಚಿತ್ರಕಲಾ ರಸಿಕರಿಗೆ ಹಾಗು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಭಾಗ್ಯ ನನ್ನದಾಗಿದೆ. ಈ ಸರಣಿಗಾಗಿ ತೆಗೆದುಕೊಂಡಿರುವ ಸಮಯವು ಇಟಲಿಯ ಕಲಾವಿದ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರ ಟೈಮ್‍ಲೈನ್ ಅನ್ನು ಮೀರಿಸಿದೆ ಎಂದರು.

ಭಾರತೀಯ ಸಂಸ್ಕøತಿ ಮತ್ತು ಮಹಾಭಾರತದ ಅಧ್ಯಯನಕ್ಕಾಗಿ ಹೋಲಿಸಬಹುದಾದ ಅವಧಿಯನ್ನು ಮೀಸಲಿಟ್ಟರೂ, ಇಟಾಲಿಯನ್ ಕಲಾವಿದ ದೊಡ್ಡ ಕ್ಯಾನ್ವಾಸ್‍ಗಳಲ್ಲಿ ಮಹಾಭಾರತದ 25 ವರ್ಣಚಿತ್ರಗಳನ್ನು ರಚಿಸಲು 12 ವರ್ಷಗಳನ್ನು (ಅಧ್ಯಯನಕ್ಕಾಗಿ 5 ವರ್ಷ ಮತ್ತು ಕಲಾಕೃತಿ ರಚಿಸಲು 7 ವರ್ಷ) ತೆಗೆದುಕೊಂಡರು. ವಾಸ್ತವವಾಗಿ ಈ ಮಟ್ಟದ ಯಶಸ್ಸು ಸಾಧಿಸಲು ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರೇ ನನಗೆ ಸ್ಫೂರ್ತಿ ಎಂದು ತಿಳಿಸಿದರು.

178 ಸುಂದರ ತೈಲ ವರ್ಣ ಚಿತ್ರಗಳು: ಪ್ರತಿ ಕಲಾಕೃತಿಯೂ 24’’ By 30’’ ವಿಶಿಷ್ಟ ಅಳತೆಯಲ್ಲಿದ್ದು, ಮಹಾಭಾರತದ ನಿರೂಪಣೆಯ ವಿಭಿನ್ನ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಈ ಕಲಾಕೃತಿಗಳ ಸೌಂದರ್ಯ ಎಂದರೆ ಮಹಾಭಾರತದ ಕಥೆಯನ್ನು ತಿಳಿದುಕೊಳ್ಳಲು ಬಯಸುವ ಪಯಣಿಗರಿಗೆ ಒಂದೇ ಕಲಾ ಗ್ಯಾಲರಿಯಲ್ಲಿ ಇಡೀ ಮಹಾಕಾವ್ಯವನ್ನು ತಿಳಿಸಿಕೊಡುವ ಮೂಲಕ ವಿಭಿನ್ನ ಅನುಭವ ನೀಡುತ್ತದೆ.

ಭಾರತೀಯ ಸಂಸ್ಕೃತಿ ಮತ್ತು ಮಹಾಭಾರತದ ಅಧ್ಯಯನ ಮಾಡಲು ಇಟಲಿಯ ಕಲಾವಿದ ಜಿಯಂಪಾವ್ಲ್ವ್ ಥೋಮಸೆಟ್ಟಿ ಅವರು ವ್ಯಯಿಸಿದ್ದ ಅವಧಿಗೆ ಹೋಲಿಸಿದರೆ ಸ್ವಾಮಿ ಅವರು ಈ ಕಲಾಕೃತಿಗಳಿಗಾಗಿ ಐದು ವರ್ಷಗಳ ಸಮಯವನ್ನು ವಿನಿಯೋಗಿಸಿದ್ದಾರೆ. ಇಟಲಿ ಕಲಾವಿದ ದೊಡ್ಡ ಕ್ಯಾನ್ವಾಸ್‍ನಲ್ಲಿ ಮಹಾಭಾರತದ 25 ಚಿತ್ರಗಳನ್ನು ರಚಿಸಿಲು 7 ವರ್ಷ ತೆಗೆದುಕೊಂಡರೆ, ಸ್ವಾಮಿ ಅವರು ವಿಶಿಷ್ಟ ಅಳತೆಯ ಕ್ಯಾನ್ವಾಸ್‍ಗಳಲ್ಲಿ ವಿಭಿನ್ನ ಶೈಲಿಯ  178 ಕಲಾಕೃತಿಗಳನ್ನು ಐದು ವರ್ಷಗಳಲ್ಲಿ ರಚಿಸುವ ಮೂಲಕ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist