ಬೆಂಗಳೂರು, (www.thenewzmirror.com) ;
ನಿಮಗೆ ಅಚ್ಚರಿ ಅನಿಸಿದರೂ ಇದು ನಿಜ.., ಮನೆಯಲ್ಲಿ ಸಾಕಿದ್ದ ನಾಯಿ ಮನೆಯನ್ನ ಕಾಯೋದು ಬಿಟ್ಟು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನ ನುಂಗಿ ನೀರು ಕುಡಿದಿದೆ..,
ಕೇಲೋಕೆ ಅಚ್ಚರಿ ಅನ್ನಿಸ್ತಾ ಇದೆ ಅಲ್ವಾ..? ಇಂಥ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಪೆನ್ಸಲ್ವೇನಿಯಾ ನಗರ. ಈ ನಗರದಲ್ಲಿ ನಾಯಿಯೊಂದು ಮನೆಯಲ್ಲಿ ಇಟ್ಟಿದ್ದ4,000 ಡಾಲರ್ ಅಂದರೆ 3.32 ಲಕ್ಷ ರೂ. ಹಣವನ್ನ ತಿಂದುಬಿಟ್ಟಿದೆ. ಆ ಮೂಲಕ ಮನೆಯ ಮಾಲೀಕರಿಗೆ ಶಾಕ್ ಕೊಟ್ಟಿದೆ ಏಳು ವರ್ಷದ ಸೆಸಿಲ್..,
BBC ವರದಿಯ ಪ್ರಕಾರ ಏಳು ವರ್ಷದ ಸೆಸಿಲ್ ತನ್ನ ಮನೆಯ ಮಾಲೀಕರಾದ ಗೋಲ್ಡೂಡಲ್ ಕಳೆದ ತಿಂಗಳು ಯಾವುದೋ ಕೆಲಸಕ್ಕಾಗಿ 4,000 ಡಾಲರ್ ಹಣವನ್ನ ಮನೆಗೆ ತಂದು ಇಟ್ಟಿದ್ದರಂತೆ.., ಇದು ಹಣ ಅಂತ ತಿಳಿಯದ ಸೆಸಿಲ್ ಹಣ ಇದ್ದ ಲಕೋಟೆ ಸಮೇತ ತಿಂದು ಬಿಟ್ಟಿದ್ದಾಳಂತೆ. ಮೊದ ಮೊದಲು $450 ಮಾತ್ರ ಕಾಣೆಯಾಗಿದೆ ಎಂದು ಅಂದುಕೊಂಡಿದ್ದರು ಆದರೆ ಅಡುಗೆ ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಎಲ್ಲಿ ಹೋಯ್ತು ಅಂತ ಚಿಂತೆಗೀಡಾಗಿದ್ದರು. ಇದೇ ವೇಳೆ ತನ್ನ ಸಾಕು ನಾಯಿಯ ಚಲನಾವಲನ ಕಂಡ ಮಾಲೀಕರು ತಕ್ಷಣವೇ ಪಶುವೈದ್ಯರ ಬಳಿಗೆ ಕರೆದೊಯ್ದಪರೀಕ್ಷೆ ನಡೆಸುವಂತೆ ಮನವಿ ಮಾಡಿದರು.
ಇದ್ದ ಇಬ್ಬರಲ್ಲಿ ಕದ್ದವರು ಯಾರು ಎಂದು ಗಂಡ ಹೆಂಡತಿ ತಮ್ಮೊಳಗೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು. ಸುಮಾರು 30 ನಿಮಿಷಗಳ ನಂತರ, ದಂಪತಿಗೆ ಸಾಕು ನಾಯಿ ಸೆಸಿಲ್ ಆನಂದ ಪಡ್ತಿರೋದನ್ನ ಕಂಡರು. ಅದೇ ವೇಳೆಗೆ ಅಲ್ಲಲ್ಲಿ ಹಣ ತುಂಡು ತುಂಡಾಗಿ ಬಿದ್ದಿರೋದನ್ನೂ ಗಮನಿಸಿದರು. ಇಡೀ ಮನೆ ತುಂಬ ತಾವು ತಂದಿದ್ದ ಹಣ ಚೆಲ್ಲಾ ಪಿಲ್ಲಿಯಾಗಿ ಬಿದ್ದಿತ್ತು.
ಈ ವೇಳೆಗೆ ದಂಪತಿಗೆ ಇದ್ದ ಅನುಮಾನ ಕ್ಲಿಯರ್ ಆಗಿತ್ತು. ಮನೆಯಲ್ಲಿಟ್ಟಿದ್ದ ಹಣವನ್ನ ನಮ್ಮ ಸೆಸಿಲ್ ತಿಂದಿದ್ದಾಳೆ ಅನ್ನೋದು ಖಚಿತವಾಯ್ತು. ಹಣ ತಿಂದಿದ್ದು ಖಚಿತವಾಯ್ತು ಆದರೆ ಅದನ್ನ ಆಚೆ ತೆಗೆಯೋದು ಹೇಗೆ ಎಂದು ಯೋಚನೆ ಮಾಡತೊಡಗಿದರು. ತಕ್ಷಣವೇ ದಂಪತಿ ಬ್ಯಾಂಕ್ ಅನ್ನು ಸಂಪರ್ಕಿಸಿದರು. ಆಗ ಬ್ಯಾಂಕ್ ಸಿಬ್ಬಂದಿ ಇಂಥ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ನಿಮ್ಮ ಹಣ ನಿಮಗೆ ವಾಪಾಸ್ ಸಿಗಬೇಕೆಂದರೆ ನಿಮ್ಮ ನೋಟಿನ ಕರೆಸ್ಸಿ ಹಾಗೂ ಕ್ರಮಸಂಖ್ಯೆ ಗೋಚರಿಸುವ ನೋಟನ್ನ ವಾಪಾಸ್ ತಂದುಕೊಡಿ ಅಂತ ತಿಳಿಸಿದರು.
ತನ್ನ ಸಾಕು ನಾಯಿ ಹಣ ತಿನ್ನುತಿದ್ದನ್ನೂ ನೋಡಿದ್ದ ದಂಪತಿ ಅದು ಮಲ ಮಾಡುವವವರೆಗೂ ಹಗಲು ರಾತ್ರಿ ಕಾದರು.., ಸತತ ತಾಳ್ಮೆಯಿಂದಾಗಿ ಸೆಸಿಲ್ ಮನೆಯೊಳಗೆ ಮಲ ಮಾಡಿಸಿ ನುಂಗಿದ್ದ ನೋಟುಗಳನ್ನ ಅದರಲ್ಲಿ ಕಂಡರು. ಹಿಂದೆಂದೂ ಮಾಡಿದರ ಕಾರ್ಯವನ್ನ ಮಾಡಿದ ದಂಪತಿ ಮಲದಲ್ಲಿ ಇದ್ದ ನೋಟನ್ನ ಸ್ವಚ್ಚಗೊಳಿಸುವ ಕೆಲ್ಸವನ್ನ ಮಾಡಿದರು. ಅದರಲ್ಲಿ ಒಂದಿಷ್ಟು ನೋಟುಗಳು ಹರಿದು ಹೋಗಿದ್ದರು ಸುಮಾರು ನಾಲ್ಕು ನೂರ ಐವತ್ತು ಡಾಲರ್ ಮೌಲ್ಯದ ನೋಟುಗಳು ಹರಿದು ಹೋಗಿದ್ದವು. ಹರಿದ ನೋಟುಗಳನ್ನ ಬ್ಯಾಂಕ್ ಗೆ ಹಿಂದಿರುಗಿಸಿದ ದಂಪತಿ ಕೊನೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.