ಬೆಂಗಳೂರು, (www.thenewzmirror.com) ;
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಸೆಂಟ್ರಲ್ ಜೈಲು ಸೇರುತ್ತಿದ್ದಂತೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋದು ಕಷ್ಟವಾಗುತ್ತಿದೆಯಂತೆ.

ನಟನಿಗೆ ಎಲ್ಲರಿಗೂ ಸಿಗುತ್ತಿರೋ ವ್ಯವಸ್ಥೆ ಸೌಲಭ್ಯ ಸಿಗುತ್ತಿದೆಮ ಜೈಲಿನ ಊಟ ಸೇರದೆ ಹಂತ ಹಂತವಾಗಿ ದೇಹದ ತೂಕ ಇಳಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಟ ಜೈಲಿನಲ್ಲಿ ರಾತ್ರಿ ದರ್ಶನ್ ಬೇಗನೇ ಮಲಗುತ್ತಾರಂತೆ ಹಾಗೆನೇ ಬೆಳಿಗ್ಗೆ 5.30ರ ಸುಮಾರಿಗೆ ಎದ್ದು ಕೆಲ ಹೊತ್ತು ಬ್ಯಾರಾಕ್ನಲ್ಲಿಯೇ ನಟ ದರ್ಶನ್ ವಾಕಿಂಗ್ ಮಾಡುತ್ತಾರಂತೆ. ಬಳಿಕ ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ಕುಡಿಯುತ್ತಾರಂತೆ.