ಬೆಂಗಳೂರು,(www.thenewzmirror.com);
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿನ್ನೆ ವಿಧಿವಶರಾಗಿದ್ದಾರೆ. ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಸೊಸೆ ಮೊಮ್ಮಗ ಅಂತಿಮ ದರ್ಶನ ಪಡೆದಿದ್ದಾರೆ.
ಚೆನ್ನೈನಲ್ಲಿ ಇದ್ದಂತ ನಟ ವಿನೋದ್ ರಾಜ್ ಪತ್ನಿ ಹಾಗೂ ಪುತ್ರ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅತ್ತೆ, ಅಜ್ಜಿಯ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದರು.
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಟ ವಿನೋದ್ ರಾಜ್ ಕುಮಾರ್ ಜೊತೆಗೆ ಪತ್ನಿ, ಪುತ್ರ ಲೀಲಾವತಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ನಟ ವಿನೋದ್ ರಾಜ್ ಮದುವೆ ವಿಚಾರದಲ್ಲಿ ಎದ್ದಿದ್ದ ಊಹಾಪೋಗಳಿಗೆ ತೆರೆ ಎಳೆದಿದ್ದ ನಟಿ ಲೀಲಾವತಿ, ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಬಡತನ ಇದ್ದಿದ್ದರಿಂದ ಸಿಂಪಲ್ ಆಗಿ ಮದುವೆ ಮಾಡಿ ಮುಗಿಸಿದ್ದೆ. ತಿರುಪತಿ ಬೆಟ್ಟದಲ್ಲಿ ಸಿಂಪಲ್ ಆಗಿ ಮದುವೆ ಮಾಡಿ ಮುಗಿಸಿದ್ದೇನೆ ಎಂದು ತಿಳಿಸಿದ್ದರು.