ಬೆಂಗಳೂರು, (www.thenewzmirror.com);
ರಣಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅನಿಮಲ್. ಬಿಡುಗಡೆ ಆದ ದಿನದಿಂದಲೇ ಸಾಕಷ್ಟು ಕಮಾಲ್ ಮಾಡ್ತಿರೋ ಸಿನೆಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಿರೀಕ್ಷೆಗೂ ಮೀರಿ ಆಗ್ತಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶಿಸಿರುವ ಅನಿಮಲ್ ಚಿತ್ರ ಎರಡನೇ ಶುಕ್ರವಾರ ₹350 ಕೋಟಿ ಕಲೆಕ್ಷನ್ ಮಾಡಿದೆ. sacnilk.com ನ ಆರಂಭಿಕ ಅಂದಾಜಿನ ಪ್ರಕಾರ, ಅನಿಮಲ್ 8ನೇ ದಿನದಂದು ₹23.5 ಕೋಟಿ ಕಲೆಕ್ಷನ್ ಮಾಡಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಮಗ ಮತ್ತು ತಂದೆಯಾಗಿ ನಟಿಸಿದ್ದಾರೆ. ಚಿತ್ರದ ಒಟ್ಟು ಗಳಿಕೆ ಈಗ ₹361.08 ಕೋಟಿ ಆಗಿದೆ.
ಹಿಂದಿಯಿಂದ ₹300.81 ಕೋಟಿ, ತೆಲುಗಿನಿಂದ ₹33.45 ಕೋಟಿ, ತಮಿಳಿನಿಂದ ₹2.73 ಕೋಟಿ, ಕನ್ನಡದಿಂದ ₹0.52 ಕೋಟಿ ಮತ್ತು ಮಲಯಾಳಂನಿಂದ ₹0.07 ಕೋಟಿ ಸೇರಿದಂತೆ ಮೊದಲ ವಾರದಲ್ಲಿ ಎಲ್ಲಾ ಭಾಷೆಗಳಿಂದ ₹338 ಕೋಟಿ ಕಲೆಕ್ಷನ್ ಮಾಡಿದೆ.