ಬೆಂಗಳೂರು,(www.thenewzmirror.com);
ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆ ತನ್ನ ಅತ್ಯಾಧುನಿಕವಾದ ಕೇಂದ್ರವನ್ನ ಬೆಂಗಳೂರಿನಲ್ಲಿ ಆರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಈ ಕೇಂದ್ರವು ಫಲವಂತಿಕೆ ಆರೈಕೆಯಲ್ಲಿ ಪ್ರಗತಿಯನ್ನ ಸಾಧಿಸಿದಂತಾಗಿದೆ.
ಕುಟುಂವನ್ನುಆರಂಭವಿಸುವ ದಂಪತಿಯ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂಬತ್ತು ವರ್ಷಗಳ ಅನುಭವ ಹೊಂದಿರುವ `ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆಯು, ಈ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರು ಗಳಿಸಿಕೊಂಡಿದೆ. ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಫಲವಂತಿಕ ತಜ್ಞರು, ನುರಿತ ದಾದಿಯರು ಮತ್ತು ಸಹಾನುಭೂತಿಯನ್ನು ಹೊಂದಿರುವ ಬೆಂಬಲ ಸಿಬ್ಬಂದಿಯ ತಂಡವು ಪ್ರತಿ ರೋಗಿಗೂ ವೈಯಕ್ತಿಕ ಆರೈಕೆ ಮತ್ತು ಕಾಳಜಿ ನೀಡಲು ಈ ಸೆಂಟರ್ ಬದ್ಧವಾಗಿದೆ.
ಸಂತಾನ ಫರ್ಟಿಲಿಟಿ ಸೆಂಟರ್ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಮತ್ತು ಅದರ ಆಚೆಗೆ ಮಹಿಳೆಯರ ಆರೋಗ್ಯ ಮತ್ತು ಫಲವಂತಿಕೆ ಆರೈಕೆಯಲ್ಲಿ ಪರಿವರ್ತನೆಯ ಪ್ರಯಾಣವನ್ನ ಆರಂಭಿಸಲು ಉತ್ಸುಕವಾಗಿದೆ. ನಾವೆಲ್ಲರೂ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ದಂಪತಿ ಕುಟುಂಬವನ್ನು ಪ್ರಾರಂಭಿಸುವ ಕನಸನ್ನು ನನಸಾಗಿಸಬಹುದು ಎಂದು ಸಹ-ಸಂಸ್ಥಾಪಕರು ಮತ್ತು ಸಿಇಒ ಆದ ರಾಘಬ್ ಪ್ರಸಾದ್ ಪಾಂಡಾ, ಅವರು ಹೇಳಿದರು.
ಕೇಂದ್ರವನ್ನ ಮುಖ್ಯ ಅತಿಥಿಗಳಾದ ರಿಜ್ವಾನ್ ಅರ್ಷಾದ್, ವಿಧಾನಸಭೆ ಸದಸ್ಯರು, ಶಿವಾಜಿನಗರ, ಕರ್ನಾಟಕ ಅವರು ನಾವೀದ್ ಅಹಮದ್ ಖಾನ್, ಕಾರ್ಯದರ್ಶಿ, ಮುಸ್ಲಿಂ ಆರ್ಫನೇಜ್, ಶ್ರೀ ರಾಘಬ್ ಪ್ರಸಾದ್ ಪಾಂಡಾ, ಸಹ-ಸ್ಥಾಪಕರು ಮತ್ತು ಸಿಇಒ, ಸಂತಾನ ಮತ್ತು ಡಾ.ಸತೀಶ್ ಪ್ರಸಾದ್ ರಾಥ್, ಸ್ಥಾಪಕರು, ಸಂತಾನ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.