ಬೆಂಗಳೂರು:(www.thenewzmirror.com):ಈ ಕಾಂಗ್ರೇಸ್ ಸರ್ಕಾರ ಕಸವನ್ನು ಸಹ ಬಿಡದೆ ಜನರ ಮೇಲೆ ತೆರಿಗೆ ಹಾಕಿತ್ತಿರುವುದು ವಿಪರ್ಯಾಸ. ಈ ಸರ್ಕಾರದ ಸಿಎಂ, ಡಿಸಿಎಂ ಸೇರಿ ಎಲ್ಲ ಸಚಿವರ ತಲೆಯಲ್ಲೇ ಸಂಪೂರ್ಣ ಕಸ ತುಂಬಿಕೊಂಡಿದೆ.ಹೀಗಾಗಿ ಎಲ್ಲ ಮನೆಗಳ ಅಳತೆಯ ಮೇಲೆ ಕಸದ ತೆರಿಗೆ ವಿಧಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಈ ರಾಜ್ಯ ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ನಂದಿನಿ ಹಾಲಿನ ದರ, ಮೊಸರಿನ ದರ, ತುಪ್ಪದ ದರ, ತರಕಾರಿ ದರ, ಅಡಿಗೆ ಎಣ್ಣೆ ದರ, ವಿದ್ಯುತ್ ದರ, ಪೆಟ್ರೋಲ್ -ಡೀಸೆಲ್ ದರ, ಬಸ್- ಮೆಟ್ರೋ ಪ್ರಯಾಣ ದರ, ಜನನ -ಮರಣ ಪ್ರಮಾಣ ಪತ್ರ ದರ ಏರಿಕೆ, ಟೋಲ್ ದರ, ಮದ್ಯದ ದರ, ಮುದ್ರಾ0ಕ ಶುಲ್ಕ ದರ, ಕುಡಿಯುವ ನೀರಿನ ದರ, ವಾಹನ ಖರೀದಿ ದರ ಹೀಗೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.
ಈಗ ಹೊಸದಾಗಿ ನಮ್ಮ ಮನೆಯಿಂದ ಹೊರಹಾಕುವ ಕಸಕ್ಕೂ ಸಹ ದರ ನಿಗದಿ ಪಡಿಸಿರುವುದು ಸರಿಯಲ್ಲ. ದಿನನಿತ್ಯ ಅಗತ್ಯ ವಸ್ತುಗಳ ಮೇಲೆ ದರ ಏರಿಕೆ ಮಾಡಿರುವುದೇ ಈ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹಾನ್ ಸಾಧನೆಯಾಗಿದೆ. ಗ್ಯಾರೆಂಟಿಗಳ ಮೂಲಕ ರಾಜ್ಯದ ಬಡ, ಮಧ್ಯಮ ವರ್ಗದ ಜನರ ರಕ್ತವನ್ನು ಈ ಕಾಂಗ್ರೇಸ್ ಸರ್ಕಾರ ಹಿರುತ್ತಿದೆ.ಕನಿಷ್ಟ ಮಾನವೀಯತೆಯಿಲ್ಲದೆ ಈ ಸರ್ಕಾರ ಆಡಳಿತ ನಡೆಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ನಾಳೆಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದಿದ್ದಾರೆ.