ಬೆಂಗಳೂರು, (www.thenewzmirror.com) ;
ಕಾಂಗ್ರೆಸ್ ಸದಾಕಾಲ ಅಲ್ಪಸಂಖ್ಯಾತರ ತುಣ್ಟೀಕರಣದ ರಾಜಕಾರಣದಲ್ಲಿ ಮುಳುಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು ಅಷ್ಟೇ ಅಲ್ದೆ ಇದೀ ತುಷ್ಟೀಕರಣದಿಂದ ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ ಎಂದು ಕಿಡಿಕಾರಿದರು.
ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಇದೆ ಎಂದು ಹೇಳಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದಾಗ ತಮ್ಮ ಸಿದ್ಧಾಂತವನ್ನು ಬದಲಾಯಿಸಿ ದಲಿತರು, ಆದಿವಾಸಿಗಳು, ಬಡವರು ಮತ್ತು ವಂಚಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಎಂದರು ಅಂತ ಅಭಿಪ್ರಾಯಪಟ್ಟರು.
ಆದಿವಾಸಿಗಳು, ಹಿಂದುಳಿದವರು, ದಲಿತರು ಮತ್ತು ಬಡವರ ನೆರವಿಗೆ ಮೋದಿ ಸರಕಾರ ಸದಾ ಕೆಲಸ ಮಾಡುತ್ತದೆ ಎಂಬುದು ಕಳೆದ 9 ವರ್ಷಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಹೆಮ್ಮೆಯ ದಿನವೆಂದು ಘೋಷಸಿದ್ದು ಅಥವಾ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು. ಮೋದಿಯವರ ದೂರದೃಷ್ಟಿ ಮತ್ತು ಅಮಿತ್ ಶಾ ಅವರ ದಕ್ಷ ನಿರ್ವಹಣೆಯ ಅಡಿಯಲ್ಲಿ, ಬಿಜೆಪಿ ಸರ್ಕಾರವು ಯಾವಾಗಲೂ ಬುಡಕಟ್ಟು ಸಮಾಜದ ಕಲ್ಯಾಣ ಮಾಡಿ ಗೌರವವನ್ನು ಹೆಚ್ಚಿಸಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಮಧ್ಯಪ್ರದೇಶದ ಬಿಮಾರು ಎಂಬ ಅನಾರೋಗ್ಯದ ರಾಜ್ಯದಂತಾಗಿತ್ತು ಎಂಬುದು ಅಲ್ಲಿನ ಜನತೆಗೆ ಗೊತ್ತಿದೆ. ಭ್ರಷ್ಟಾಚಾರ, ಹಗರಣಗಳು, ಲೂಟಿ, ವಿದ್ಯುತ್ ಇಲ್ಲದ ಬಡ ಮನೆಗಳು, ನೀರಾವರಿ ಇಲ್ಲದ ಕೃಷಿ ಮಧ್ಯಪ್ರದೇಶದ ಗುರುತಾಗಿದ್ದವು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರದ 51 ಯೋಜನೆಗಳನ್ನು ನಿಲ್ಲಿಸಿದ್ದನ್ನು ಮಧ್ಯಪ್ರದೇಶದ ಜನರು ನೋಡಿದ್ದಾರೆ. ಆದರೆ ಬಿಜೆಪಿ ಸರ್ಕಾರವು ರಚನೆಯಾದಾಗಿನಿಂದ ರಾಜ್ಯವು ಅಭಿವೃದ್ಧಿಯ ಪಥದ ಮೇಲೆ ಸಾಗುತ್ತಾ ಮುಂಚೂಣಿಯಲ್ಲಿದೆ. ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಮಧ್ಯಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವತ್ತ ಸಾಗುತ್ತಿದೆ ಎಂದರು.
ಮೋದಿ ನಾಯಕತ್ವ ಮತ್ತು ಶಾ ಅವರ ಅವಿರತ ಪ್ರಯತ್ನದಿಂದಾಗಿ PESA ಕಾನೂನನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ. ಕಾಂಗ್ರೆಸ್ ತಮ್ಮ ಆಡಳಿತದ ಅವಧಿಯಲ್ಲಿ, ಬುಡಕಟ್ಟು ಸಮಾಜಕ್ಕಾಗಿ ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸುವ ಘೋಷಣೆಗಳಲ್ಲಿ ತೊಡಗಿತ್ತು, ಆದರೆ ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಟೀಕಿಸಿದರು.
ಮೋದಿಯವರ ದೂರದೃಷ್ಟಿಯ ಚಿಂತನೆ ಮತ್ತು ಅಮಿತ್ ಶಾ ಮಾರ್ಗದರ್ಶನದಲ್ಲಿ, ಬುಡಕಟ್ಟು ಕಲ್ಯಾಣಕ್ಕಾಗಿ ನೀರು, ಅರಣ್ಯ ಮತ್ತು ಭೂಮಿಯ ರಕ್ಷಣೆ ಜೊತೆಗೆ ಭದ್ರತೆ, ಗೌರವ ಮತ್ತು ಅಂತರ್ಗತ ಅಭಿವೃದ್ಧಿಯ ಮೂಲಕ ಕೆಲಸ ಮಾಡಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಕೆಲವು ತಿಂಗಳ ನಂತರ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಲು ಮತ್ತು ಮುಂಬರುವ ರಾಜಕೀಯ ಸ್ಪರ್ಧೆಯಲ್ಲಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಅಖಾಡಕ್ಕೆ ಇಳಿದಿದ್ದಾರೆ.
‘ಜನಾಶೀರ್ವಾದ ಯಾತ್ರೆ’ ಎಂಬುದು ಎಲ್ಲರ ಆಶೀರ್ವಾದ ಪಡೆಯುವ ಯಾತ್ರೆಯಾಗಿದೆ. ಇಂತಹ ಐದು ಯಾತ್ರೆಗಳು ಮಧ್ಯ ಪ್ರದೇಶದ 210 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಭೋಪಾಲ್ ತಲುಪಲಿವೆ. ಇದೇ ವೇಳೆ, ಕಾಂಗ್ರೆಸ್‌ಅನ್ನು ಗುರಿಯಾಗಿಸಿಕೊಂಡು ಟೀಕಿಸಿದ ಅಮಿತ್ ಶಾ, ಕಮಲ್ ನಾಥ್ ಅವರಿಗೆ ‘ಕರಪ್ಷನ್ ನಾಥ್ ’ ಎಂಬ ಬಿರುದು ನೀಡಿದರೆ, ದಿಗ್ವಿಜಯ್ ಸಿಂಗ್ ಅವರನ್ನು ‘ಮಿ. ಬಂಟಧರ್’ ಎಂದು ಟೀಕಿಸಿದರು.
ಭಾರತೀಯ ರಾಜಕಾರಣದ ಚಾಣಕ್ಯ ಅಮಿತ್ ಶಾ ಅವರ ನೀತಿಗಳು, ಕಾರ್ಯಕರ್ತರ ಉತ್ಸಾಹ ಮತ್ತು ‘ಜನ ಆಶೀರ್ವಾದ ಯಾತ್ರೆ’ಯಿಂದ 2023ರಲ್ಲಿ ಮಧ್ಯಪ್ರದೇಶ ಮತ್ತು 2024ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬಹುಮತದೊಂದಿಗೆ ಗೆಲ್ಲಲ್ಲಿದ್ದು , ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.