ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಶ್ಲಾಘಿಸಿದ ಅಮಿತ್ ಶಾ

ಬೆಂಗಳೂರು, (www.thenewzmirror.com) ;

ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.

RELATED POSTS

ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡಿರುವುದು ಮಾತ್ರವಲ್ಲದೆ, ಅವರ ಗೌರವವನ್ನು ಹೆಚ್ಚಿಸುವ ಕಾರ್ಯವನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಈ ಮಸೂದೆಗೆ ನಾರಿ ಶಕ್ತಿ ವಂದನ್ ಮಸೂದೆ ಎಂದು ಹೆಸರಿಡಲಾಗಿದೆ.  ಶಾಸ್ತ್ರದಲ್ಲಿ ಹೇಳಿರುವಂತೆಯೇ ‘ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ’ ತತ್ವವನ್ನು ಅನುಷ್ಠಾನಗೊಳಿಸುವ ಮೂಲಕ ಭಾರತೀಯ ಸಂಸ್ಕೃತಿಯ ಮೌಲ್ಯ ಮತ್ತು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ ಎಂದು ಅಮಿತ್ ಶಾ ಉಲ್ಲೇಖಿಸಿದರು.

ಸೆಪ್ಟೆಂಬರ್ 19 ರಂದು, ಹೊಸ ಸಂಸತ್ ಭವನದ ಲೋಕಸಭೆಯ ಸಭಾಂಗಣದಲ್ಲಿ ನಾರಿ ಶಕ್ತಿ ವಂದನ್ ಮಸೂದೆಯ ಮಂಡನೆಯಾಗಿದ್ದು ವಿಷೇಶವಾಗಿದ್ದನ್ನ ಇಲ್ಲಿ ಸ್ಮರಿಸಬಹುದು



NDA ಸರ್ಕಾರಕ್ಕೆ ಮಹಿಳಾ ಸಬಲೀಕರಣ ಕೇವಲ ಘೋಷಣೆಯಲ್ಲ ,ಬದಲಿಗೆ, ಇದು ಸರ್ಕಾರದ ಅಚಲ ನಿರ್ಣಯ ಎಂಬುದನ್ನು ಮೋದಿಯವರು ತೋರಿಸಿಕೊಟ್ಟಿದ್ದಾರೆ ಎಂದು ಅಮಿತ್ ಶಾ ಪ್ರತಿಪಾದಿಸಿದರು. “ಕೋಟ್ಯಂತರ ದೇಶವಾಸಿಗಳು ಪರವಾಗಿ, ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಪ್ರಧಾನಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದ ಅಮಿತ್ ಶಾ, ಈ ಸಂದರ್ಭದಲ್ಲಿ ಎಲ್ಲಾ ಸಹೋದರಿಯರು ಮತ್ತು ತಾಯಂದಿರ ಪರವಾಗಿ ಅವರಿಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದರು.

ಒಮ್ಮೆ ಈ ಮಸೂದೆ ಕಾನೂನಾಗಿ ಜಾರಿಯಾದರೆ, ಮಹಿಳೆಯರಿಗೆ ಮೀಸಲಾತಿಯ ಹಕ್ಕು ದೊರಕಿ, ಅವರು ಸ್ವಾವಲಂಬನೆ ಮತ್ತು ಅಭಿವೃದ್ಧಿಯತ್ತ ಭಾರತವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ತಮ್ಮ ಭಾವನೆಗಳನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುತ್ತಾ ಅಮಿತ್ ಶಾ – ಭಾರತದಾದ್ಯಂತ ಜನರು ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ಕಾಯಿದೆಯ ಮಂಡನೆಯ ಖುಷಿಯಲ್ಲಿ ಹರ್ಷಿಸುತ್ತಿದೆ. ಇದು  ಮಹಿಳೆಯರ ಸಬಲೀಕರಣಕ್ಕಾಗಿ ಮೋದಿ ಸರ್ಕಾರದ ದೃಢವಾದ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ವಿರೋಧಿ ಬಣ ಈ ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದು ವಿಷಾದನೀಯ.  ಕೇವಲ ಸಾಂಕೇತಿಕತೆ ಹೊರತುಪಡಿಸಿ, ಮಹಿಳಾ ಮೀಸಲಾತಿಯೆಡೆಗೆ ಕಾಂಗ್ರೆಸ್ ಎಂದಿಗೂ ನಿಜವಾದ ಬದ್ಧತೆಯನ್ನು ಪ್ರದರ್ಶಿಸಿಲ್ಲ ಎಂಬುದು ಇನ್ನೂ ಹೆಚ್ಚು ನಿರಾಶಾದಾಯಕ. ಅವರು ಕಾನೂನುಗಳನ್ನು ಪಾಲನೆಯಾಗದಂತೆ ನೋಡಿಕೊಳ್ಳುತ್ತಿದ್ದರು ಅಥವಾ ಅವರ ಮಿತ್ರರು ಮಸೂದೆಯ ಮಂಡನೆಯನ್ನು ತಡೆಯುತ್ತಿದ್ದರು. ಕುಶಲತೆಯಿಂದ ಈ ಬಿಲ್ ಗೆ ಕ್ರೆಡಿಟ್ ಪಡೆಯಲು ಅವರೆಷ್ಟೇ ಪ್ರಯತ್ನ ಪಟ್ಟರೂ, ಅವರ ದ್ವಂದ ನೀತಿಯನ್ನು ಮರೆಮಾಚಲು ಆಗುವುದಿಲ್ಲ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist