ಬೆಂಗಳೂರು,(www.thenewzmirroe.com) ;
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪರಿಸರ ಸ್ನೇಹಿ ಗಣಪತಿ ಉತ್ಸವ ಆಚರಿಸಲಾಯಿತು. ಬಿಬಿಎಂಪಿ ಕೇಂದ್ರ ಕಛೇರಿ ನೌಕರರ ಭವನದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗೌರಿ-ಗಣಪತಿ ಉತ್ಸವ ಆಚರಣೆ ಹಾಗೂ ಮಹಿಳಾ ಅಧಿಕಾರಿ, ನೌಕರರಿಗೆ ರಂಗೋಲೆ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿ ವಿಶೇಷ ಪೂಜೆ ಕಾರ್ಯಕ್ರಮವೂ ಇದೇ ನೇರವೆರಿಸಲಾಯಿತು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಹರೀಶ್ ಹಾಗೂ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ರವರು ಹಾಗೂ ಅಧಿಕಾರಿ ಮತ್ತು ನೌಕರರು ಆಗಮಿಸಿ ಗಣಪತಿ ದರ್ಶನ ಪಡೆದು ಪುನೀತರಾದ್ರು.
ಈ ವೇಳೆ ಮಾತನಾಡಿದ ಎ.ಅಮೃತ್ ರಾಜ್, ನಮ್ಮ ಸಂಘ ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಜೊತೆಯಲ್ಲಿ ನಾಡಿನ ನಾಡುನುಡಿ ಮತ್ತು ಕಲೆ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ನೀಡುತ್ತಿದೆ. ಎಂದು ತಿಳಿಸಿದರು. ಅಷ್ಟೇ ಅಲ್ದೆ ಅಧಿಕಾರಿ, ನೌಕರರ ವೃತ್ತಿಯಲ್ಲಿರುವ ಸಮಸ್ಯೆಗಳ ನಿವಾರಣೆ ಹಾಗೂ ಸಾರ್ವಜನಿಕರ ಪರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಲು ಜನಜಾಗೃತಿ ಅಭಿಯಾನ ಮತ್ತು ಬೀದಿನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ಕಾಶಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ರಾಜ್ಯದಲ್ಲಿ ನೀರಿನ ಸಮಸ್ಯೆಯಾದಾಗ ಶ್ರೀ ಕ್ಷೇತ್ರ ಧರ್ಮಸ್ಥಳ 1ಲಕ್ಷ ಲೀಟರ್ ಕುಡಿಯುವ ನೀರು ರವಾನಿಸಲಾಯಿತು.
ಆಸಿಡ್ ದಾಳಿಗೆ ತುತ್ತಾದ ಯುವತಿಗೆ ಹೆಚ್ಚಿನ ಚಿಕಿತ್ಯೆ ಧನಸಹಾಯ ಮತ್ತು ಮರದ ಕೊಂಬೆ ಬಿದ್ದು ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ಕೊವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘವು ಅಧಿಕಾರಿ, ನೌಕರರ ಹಾಗೂ ಸಾರ್ವಜನಿಕರ ನಡುವೆ ಜನಸ್ನೇಹಿ ಆಡಳಿತಕ್ಕೆ ಸಹಕಾರ ನೀಡುತ್ತಿಉವುದನ್ನ ನೆನಪಿಸಿಕೊಂಡ ಅಮೃತ್ ರಾಜ್, ಬಿಬಿಎಂಪಿ ಆಡಳಿತ ಸುಗಮವಾಗಿ ನಡೆಯಲಿ ಮತ್ತು ನಗರದ ಜನತೆ ಸುಖ,ಶಾಂತಿ ನೆಮ್ಮದ್ದಿ ಸಿಗಲಿ ವಿಘ್ನ ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದರು.
ನವಂಬರ್ ತಿಂಗಳಲ್ಲಿ ನಮ್ಮ ಸಂಘದ ವತಿಯಿಂದ ಅಂತರಾಷ್ಟ್ರಿಯ ಕನ್ನಡ ರಾಜ್ಯೋತ್ಸವ ಅಚರಣೆಯನ್ನು ನೇಪಾಳ ದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದು, ನಾಡಿನ ಕಲೆ, ಸಾಹಿತ್ಯ ಸಾಂಸ್ಕೃತಿಕ ಉತ್ಸವ ಅಂತರಾಷ್ಟಿಯ ಮಟ್ಟದಲ್ಲಿ ಕನ್ನಡದ ಕಹಳೆ ಮೊಳಗಲಿದೆ ಎಂದು ಹೇಳಿದರು.
ಸಾಯಿಶಂಕರ್, ಎ.ಜಿ.ಬಾಬಣ್ಣ, ಉಪಾಧ್ಯಕ್ಷರಾದ ಡಾ.ಶೋಭಾ, ಡಿ.ರಾಮಚಂದ್ರ , ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿ, ಕಾರ್ಯಾಧ್ಯಕ್ಷರಾದ ಬಿ.ರುದ್ರೇಶ್, ಖಜಾಂಚಿ ಸೋಮಶೇಖರ್, ಜಂಟಿ ಕಾರ್ಯದರ್ಶಿ ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ಸಂಘಟನಾ ಕಾರ್ಯದರ್ಶಿಗಳಾದ ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಸಂಚಾಲಕಿ ಆರ್.ರೇಣುಕಾಂಬ ಹಾಗೂ ನಿರ್ದೇಶಕರುಗಳಾದ ಮಂಜುನಾಥ್ ಎನ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಶ್ರೀಧರ್, ಸಂತೋಷ್ ಕುಮಾರ್ ಎಂ, ಹೆಚ್.ಜಿ.ಹರೀಶ್ ರವರು ಭಾಗವಹಿಸಿದ್ದರು.