ಬೆಂಗಳೂರು, (www.thenewzmirror.com) ;
ರಾಜ್ಯದಲ್ಲೇ ಅತ್ಯಂತ ಹೆಚ್ಚು ತೆರಿಗೆ ಸಂಗ್ರಹವಾಗುವ ಇಲಾಖೆ ಅಂದರೆ ಅದರು ಸಾರಿಗೆ ಇಲಾಖೆ(RTO). ಯಾವಾಗಲೂ ಭ್ರಷ್ಟಾಚಾರದ ಆರೋಪ ಹಾಗೆನೇ ಸಾರ್ವಜನಿಕರಿಗೆ ಸಮರ್ಪಕ ಸ್ಪಂದನೆ ಸಿಗ್ತಿಲ್ಲ ಅನ್ನೋದೂ ಇಲಾಖೆಗೆ ಅಂಟಿಕೊಂಡಿರೋ ಕಳಂಕ.
ಇಂಥ ಕಳಂಕಗಳನ್ನೆಲ್ಲಾ ದೂರ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆದಾಯಕ್ಕೆ ತಂದುಕೊಡುತ್ತಿರೋ ಖಡಕ್ ಅಧಿಕಾರಿ ರಾಜಾಜಿನಗರ(ಬೆಂಗಳೂರು ಪಶ್ಚಿಮ) ಸಾರಿಗೆ ಇಲಾಖೆ ಕಚೇರಿಗೆ ಅಧಿಕಾರಿಯಾಗಿ ಬಂದಿದ್ದಾರೆ
ವಯೋ ನಿವೃತ್ತಿ ಹೊಂದಿದ್ದ ಎಂ. ಪ್ರಭುಸ್ವಾಮಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಹೆಚ್ಚುವರಿ ಹೊಣೆ ವಹಿಸಿಕೊಂಡಿರುವ ಬಿ. ಶ್ರೀನಿವಾಸ್ ಪ್ರಸಾದ್ ಇದೀಗ ಬೆಂಗಳೂರು ಪಶ್ಚಿಮ ಸಾರಿಗೆ ಕಚೇರಿಯ ಜವಾಬ್ದಾರಿ ಹೊತ್ತಿದ್ದಾರೆ.
ಎಲೆಕ್ಟ್ತಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ ಬಿ. ಶ್ರೀನಿವಾಸ್ ಪ್ರಸಾದ್ ಇದೀಗ ಬೆಂಗಳೂರು ಪಶ್ಚಿಮ ಸಾರಿಗೆ ಕಚೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.