ದಯವಿಟ್ಟು ನನ್ನ ಮಗನಿಗೆ ಸಹಾಯ ಮಾಡಿ..! ಸಾರಿಗೆ ನೌಕರನ ಗೋಳು ಕೇಳೂರು ಇಲ್ವಾ..?

ಬೆಂಗಳೂರು, ( www.thenewzmirror.com ) ;

ದೇಶದಲ್ಲೇ ನಂಬರ್ ಸಾರಿಗೆ ಸಂಸ್ಥೆ ಅಂದ್ರೆ ಅದು ಬಿಎಂಟಿಸಿ.., ಕೆಎಸ್ಸಾರ್ಟಿಸಿಯಿಂದ ಹೊರ ಬಂದು ಒಂದು ವಿಭಾಗವಾಗಿ ಬೆಂಗಳೂರಿನ ಜನರ ಜೀವನಾಡಿ ಆಗಿರೋ ಇಂಥ ಸಂಸ್ಥೆಯಲ್ಲಿ ಸಾವಿರಾರು ನೌಕರರು, ಶ್ರಮಿಕರು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.., ಹಗಲು ರಾತ್ರಿ ಎನ್ನದೇ, ಬಿಸಿಲು ಮಳೆ ಎನ್ನದೇ ಯಾವುದೇ ಸೌಲಭ್ಯಗಳನ್ನ ಕೊಡದೇ ಇದ್ದರೂ ನಮ್ಮದು ಸಂಸ್ಥೆ ಅಂತ ದುಡಿಯುತ್ತಿರೋರ ಸಮಸ್ಯೆಗಳನ್ನ ಕೇಳೋರೇ ಇಲ್ಲ ಎನ್ನುವಂತಾಗಿದೆ.

RELATED POSTS

ನೌಕರರು ಇರಲಿ ಅವರನ್ನ ನಂಬಿರೋ ಕುಟುಂಬಗಳ ಪಾಡು ನಿಜಕ್ಕೂ ಹೇಳ ತೀರದು. ಒಬ್ಬೊಬ್ಬ ನೌಕರನ ಕುಟುಂಬಗಳ ಕಥೆ ಕಣ್ಣೀರು ತರಿಸುವ ರೀತಿ ಇದೆ. ಹೀಗಾಗಿ ನಮ್ಮ ಕಷ್ಟಕ್ಕೆ ನಿಗಮನೂ ಸ್ಪಂದನೆ ಮಾಡುತ್ತಿಲ್ಲ.., ನೀವಾದರೂ ಸ್ಪಂದನೆ ಮಾಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಹೀಗೆ ಇಂಥದ್ದೇ ಸಹಾಯ ಕೇಳುತ್ತಿರುವ ನೌಕರರ ಕುಟುಂಬದ ಕಣ್ಣೀರ ಕಥೆಯನ್ನ ಹೊತ್ತು ನಿಮ್ಮ ನ್ಯೂಝ್ ಮಿರರ್ ಹೊತ್ತು ತಂದಿದೆ.,.,

ಆ ನೌಕರನದ್ದು ಸುಂದರ ಕುಟುಂಬ.., ನೆಮ್ಮದಿಯ ಕುಟುಂಬ.., ಕಳೆದ ಕೆಲ ವರ್ಷ ಅತ್ಯಂತ ನೆಮ್ಮದಿಯಿಂದಲೇ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಕಳೆದ ಕೆಲ ವರ್ಷಗಳ ಹಿಂದೆ ಯಾರೂ ಊಹೆ ಮಾಡೋಕೆ ಇರದಷ್ಟು ದೊಡ್ಡ ಸಂಕಷ್ಟ ಬಂದೊರಗಿದೆ.., ಇನ್ನೂ ಬಾಳಿ ಬದುಕಬೇಕಿದ್ದ ಮುಗ್ದ ಜೀವವೊಂದು ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಹಾಗೆನೇ ಆ ಪುಟ್ಟ ಜೀವವನ್ನ ಪ್ರತಿನಿತ್ಯ ನೋಡುತ್ತಾ ಜೀವನವೇ ಸಾಕಪ್ಪ ಸಾಕು ಎನ್ನುವ ಸ್ಥಿತಿಯಲ್ಲಿ ಆ ಕುಟುಂಬ ಕಾಲ ಕಳೆಯುತ್ತಿದೆ.

ಬಿಎಂಟಿಸಿ ಡಿಪೋ 36 ರಲ್ಲಿ ಕೆಲಸ ಮಾಡುತ್ತಿರುವ ಚಾಲಕ ರಮೇಶ್ ಕುರಿತಾದ ಕಣ್ಣೀರಿನ ಕಥೆಯನ್ನ ಇವತ್ತು ಹೇಳುತ್ತಾ ಇದ್ದೀವಿ.., ( ಇದು ವಾಟ್ಸ್ ಅಫ್ ನಲ್ಲಿ ಬಂದಿದ್ದ ವರದಿ. ಇದನ್ನ ಆಧರಿಸಿ ವರದಿ ಮಾಡುತ್ತಿರುವುದು. ಇದರ ಸತ್ಯಾಸತ್ಯತೆ ಅರಿತು ಆನಂತರ ಸಹಾಯ ಮಾಡಿ ಎನ್ನುವುದು ಸಂಪಾದಕೀಯ ಕೋರಿಕೆ).

ಡಿಪೋದಲ್ಲಿ ಕೆಲಸ ಮಾಡುತ್ತಿರುವ ರಮೇಶ್ ರಿಗೆ ಕಳೆದ ನಾಲ್ಕು ವರ್ಷದ ಹಿಂದೆ ಸುಂದರವಾದ ಗಂಡು ಮಗುವಿನ ಆಗಮನವಾಯ್ತು. ಎರಡು ವರ್ಷದ ವರೆಗೂ ಅತ್ಯಂತ ಸುಂದರ ಹಾಗೂ ಲವವಿಕೆಯಿಂದ ಇದ್ದ ಗಹನ್ ಬೆಳವಣಿಗೆಯಲ್ಲಿ ಇದ್ದಕ್ಕಿದ್ದ ಹಾಗೆ ಕುಂಠಿತವಾಯ್ತು.., ಆರಂಭದಲ್ಲಿ ಯಾಕೆ ಅಂತ ಗೊತ್ತಿರಲಿಲ್ಲ. ಹತ್ತಾರು ವೈದ್ಯರ ಬಳಿ ಹೋಗಿ ವಿಚಾರಿಸಿದಾಗ ಬಡ ಕುಟುಂಬಕ್ಕೆ ನಿಜವಾಗ್ಲೂ ಶಾಕ್ ಕಾದಿತ್ತು. ಯಾಕಂದರೆ ಮಗುವಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದೆ ಎಂಬ ಅಂಶ ಹೆತ್ತ ಕರುಳಿಗೂ ಅಗರಿಸಿಕೊಳ್ಳೋದಿಕ್ಕೆ ಆಗಲಿಲ್ಲ..

ಕಳೆದ ಹಲವು ತಿಂಗಳಿನಿಂದ ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿರುವ ಬಡ ಕುಟುಂಬಕ್ಕೆ ಇದೀಗ ನೆರವಿನ ಹಸ್ತ ಬೇಕಿದೆ…, ಆರ್ಥಿಕ ಸಹಾಯಕ್ಕಾಗಿ ಸಿಕ್ಕ ಸಿಕ್ಕರವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಬೆಳವಣಿಗೆ ಸಮಸ್ಯೆ ಎದುರಿಸುತ್ತಿರೋ ಪುಟ್ಟ ಮಗ

ಬಡ ನೌಕರನ ಸಹಾಯ ಕೋರಿ ಬರೆದ ಪತ್ರ


 ಸ್ನೇಹಿತರೇ ನಾನು ರಮೇಶ್ ಆರ್. ಬಿಎಂಟಿಸಿ ಡ್ರೈವರ್, ( ಟೋಕನ್ ನಂಬರ್ – 21301). ಡಿಪೋ 36 ಬಿಡದಿ. ನನ್ನ ಮಗ ಗಹನ್ ಆರ್. (4 ವರ್ಷ)  ಡೆವಲಪ್ ಮೆಂಟ್ ಡಿಲೇ – ಇಪಿಲೋಪ್ಸಿ ಎಂಬ  ಕಾಯಿಲೆಯಿಂದ ಬಳಲುತ್ತಿದ್ದು, ಅವನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣದ ಅವಶ್ಯಕತೆಯಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು 50 -100-200 ಹಣದ ಸಹಾಯ ಮಾಡಿ ಪ್ಲೀಸ್.., ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ರಮೇಶ್ ಎಂದು ಮನವಿ ಮಾಡಿಕೊಂಡಿದ್ದು, ನನ್ನ ಗೂಗಲ್ ಪೇ, ಫೋನ್ ಪೇ ನಂಬರ್ 9964902114 ನಂಬರ್ ಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಎಂಟಿಸಿ ನೌಕರ ರಮೇಶ್ ಸಹಾಯ ಕೋರಿರುವ ಪತ್ರ

ಮಕ್ಕಳಲ್ಲಿ‌ ಬೆಳವಣಿಗೆ ವಿಳಂಬ ಅಂದರೇನು.?

ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿರೋ ರಮೇಶ್ಗೆ ನಿಗಮದ ವತಿಯಿಂದ ನಿರೀಕ್ಷೆ ಮಾಡಿದಷ್ಟು ಮಟ್ಟಿಗೆ ಸಹಾಯ ಸಿಕ್ಕಿಲ್ಲ.., ಡ್ರೈವರ್ ಕೆಲಸ ಬಿಟ್ಟರೆ ಬೇರೆ ಯಾವುದೇ ಕೆಲಸವೇ ಇಲ್ಲದ ಈ ನೌಕರನಿಗೆ ಇದೀಗ ಸಹಾಯದ ಹಸ್ತ ಬೇಕಿದೆ.

ಕೆಲವು ಮಕ್ಕಳು ಬೇಗನೆ ನಡೆಯಲು ಶುರು ಮಾಡುತ್ತವೆ, ಕೆಲವು ಮಕ್ಕಳು ಬೇಗನೆ ಮಾತಾಡಲು ಶುರು ಮಾಡುತ್ತವೆ. ಇನ್ನೂ ಕೆಲವು ಮಕ್ಕಳು ನಡೆಯುವುದನ್ನು ಸ್ವಲ್ಪ ತಡವಾಗಿ ಶುರು ಮಾಡಬಹುದು ಮತ್ತು ತಡವಾಗಿ ಮಾತಾಡುವುದನ್ನು ಶುರು ಮಾಡಬಹುದು. ಮಕ್ಕಳು ತಮ್ಮದೇ ಆದ ವೇಗದಲ್ಲಿ ಬೆಳವಣಿಗೆಯ (Development) ಮೈಲಿಗಲ್ಲುಗಳನ್ನು ತಲುಪುತ್ತಾರೆ ಮತ್ತು ಕೆಲವರು ಇತರರಿಗಿಂತ ಬೆಳವಣಿಗೆಯಲ್ಲಿ ವೇಗವಾಗಿರುತ್ತಾರೆ.

ಈ ಕೆಳಗಿನವುಗಳು ಬೆಳವಣಿಗೆ ವಿಳಂಬದ  ಚಿಹ್ನೆಗಳು

– ಸಡಿಲವಾದ ಸೊಂಟ ಮತ್ತು ಕೈಕಾಲುಗಳು
–  ಬಿಗಿಯಾದ ತೋಳುಗಳು ಮತ್ತು ಕಾಲುಗಳು
– ತೋಳುಗಳು ಮತ್ತು ಕಾಲುಗಳಲ್ಲಿ ಸೀಮಿತ ಚಲನೆ
– 9 ತಿಂಗಳ ವಯಸ್ಸಿನವರಿಗೆ ಬೆಂಬಲವಿಲ್ಲದೆ ಕುಳಿತುಕೊಳ್ಳಲು ಅಸಾಮರ್ಥ್ಯ
– ಸ್ವಯಂಪ್ರೇರಿತ ಚಲನೆಗಳ ಮೇಲೆ ಅನೈಚ್ಛಿಕ ಪ್ರತಿವರ್ತನೆಗಳ ಪ್ರಾಬಲ್ಯ
– ಕಾಲುಗಳ ಮೇಲೆ ಭಾರವನ್ನು ಹೊರಲು ಮತ್ತು ಸುಮಾರು ಒಂದು ವರ್ಷದವರೆಗೆ ನಿಲ್ಲಲು ಅಸಮರ್ಥತೆ

ಬೆಳವಣಿಗೆ ವಿಳಂಬಕ್ಕೆ ಕಾರಣಗಳೇನಿರಬಹುದು‌?

ಹೆಚ್ಚಿನ ಬೆಳವಣಿಗೆಯ ನ್ಯೂನತೆಗಳು ಮಗು ಹುಟ್ಟುವ ಮೊದಲು ಸಂಭವಿಸುತ್ತವೆ, ಆದರೆ ಕೆಲವು ಸೋಂಕು, ಗಾಯ ಅಥವಾ ಇತರ ಅಂಶಗಳಿಂದಾಗಿ ಜನನದ ನಂತರ ಸಹ ಇವು ಸಂಭವಿಸಬಹುದು. ಬೆಳವಣಿಗೆಯ ವಿಳಂಬದ ಕಾರಣಗಳನ್ನು ಗುರುತಿಸುವುದು ಕಷ್ಟವಾಗಬಹುದು ಮತ್ತು ವಿವಿಧ ವಿಷಯಗಳು ಅದಕ್ಕೆ ಕಾರಣವಿರಬಹುದು. ಕೆಲವು ಪರಿಸ್ಥಿತಿಗಳು ಡೌನ್ ಸಿಂಡ್ರೋಮ್‌ನಂತಹ ಅನುವಂಶಿಕ ಮೂಲವಾಗಿವೆ. ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕು ಅಥವಾ ಇತರ ತೊಡಕುಗಳು ಮತ್ತು ಅಕಾಲಿಕ ಜನನ, ಬೆಳವಣಿಗೆಯ ವಿಳಂಬಕ್ಕೆ ಕಾರಣವಾಗಬಹುದು.

ಬೆಳವಣಿಗೆಯ ವಿಳಂಬವು ಇತರ ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳ ಲಕ್ಷಣವೂ ಆಗಿರಬಹುದು, ಅವುಗಳಲ್ಲಿ ಆಟಿಸಂ ಸ್ಪೆಕ್ಟ್ರಂ ಸಮಸ್ಯೆಗಳು, ಸೆರೆಬ್ರಲ್ ಪಾಲ್ಸಿ, ಆಲ್ಕೋಹಾಲ್ ಸ್ಪೆಕ್ಟ್ರಂ ಸಮಸ್ಯೆಗಳು, ಲ್ಯಾಂಡೌ ಕ್ಲೆಫ್ನರ್ ಸಿಂಡ್ರೋಮ್, ಮಯೋಪತಿ, ಸ್ನಾಯು ವಿಕಲತೆಗಳು ಸೇರಿದಂತೆ ಡೌನ್ ಸಿಂಡ್ರೋಮ್ ಮತ್ತು ದುರ್ಬಲ ಎಕ್ಸ್ ಸಿಂಡ್ರೋಮ್‌ನಂತಹ ಅನುವಂಶಿಕ ಸಮಸ್ಯೆಗಳು ಆಗಿವೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist