TNW Big Breking ರಾಜ್ಯದಲ್ಲಿ ಒಂದೇ ಹಂತದಲ್ಲಿ‌ ಚುನಾವಣೆ

ಬೆಂಗಳೂರು, (www.thenewzmirror.com) ;

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಪ್ರಕಟ ಮಾಡಿದರು. 

RELATED POSTS

ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದ ಮುಖ್ಯ ಆಯುಕ್ತರು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದರು.
– ಮೇ 10ರಂದು ಮೊದಲ ಹಂತದ ಮತದಾನ
– ಮೇ 13ರಂದು ಮತಗಳ ಎಣಿಕೆ

ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 5,21,76,579 ಕೋಟಿ ಮತದಾರರಿದ್ದಾರೆ.


ಈ ಪೈಕಿ ಪುರುಷ ಮತದಾರರ ಸಂಖ್ಯೆ – 2,62,42,561 ಹಾಗೂ ಮಹಿಳಾ ಮತದಾರರ ಸಂಖ್ಯೆ 2,59,26,319 ಇದೆ. ರಾಜ್ಯದಲ್ಲಿ ಅಂದಾಜು 4,699 ತೃತೀಯ ಲಿಂಗಿಗಳಿದ್ದು, ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ (18+) – 9,17,241.

ಚುನಾವಣಾ ಪ್ರಕ್ರಿಯೆ ವಿವರ

– ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
– ಏಪ್ರಿಲ್ 23 ನಾಮಪತ್ರ ಪರಿಶೀಲನೆ ಕೊನೆಯ ದಿನ
– ಏಪ್ರಿಲ್ 24 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ
– ಮೇ 10 ಮತದಾನ ನಡೆಯುವ ದಿನಾಂಕ
– ಮೇ 13 ಕ್ಕೆ ಫಲಿತಾಂಶ

ಮನೆಯಿಂದಲೇ ಮತದಾನಕ್ಕೆ ಅವಕಾಶ

ಇದೇ ಮೊದಲ ಬಾರಿಗೆ 80 ವರ್ಷ ಅದಕ್ಕಿಂತ ಮೇಲ್ಪಟ್ಟವರು ಹಾಗೂ ವಿಶೇಷ ಚೇತನ ಮತದಾರರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮಂದಿ ಮತದಾರರಿದ್ದಾರೆ. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದಾರೆ. 5.55 ಲಕ್ಷ ಅಂಗವಿಕಲರಿದ್ದು, ಈ ಪೈಕಿ ಮತದಾನ ಕೇಂದ್ರಕ್ಕೆ ಬರಲಾಗದೆ ಮನೆಯಲ್ಲೇ ಮತದಾನ ಬಯಸುವವರಿಗೆ ಆಯೋಗ ಸೌಲಭ್ಯ ಕಲ್ಪಿಸಲಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist