ಬೆಂಗಳೂರು, (www.thenewzmirror.com);
ಇನ್ನೇನು ಪರೀಕ್ಷೆಗಳು ಹತ್ರ ಬರ್ತಿವೆ.., ಮಕ್ಕಳು, ಪೋಷಕರು ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಶಿಕ್ಷಕರು ಪಠ್ಯವನ್ನ ಪೂರ್ತಿಯಾಗಿ ಪೂರ್ಣಗೊಳಿಸಿ ಪರೀಕ್ಷೆಗೆ ಮಕ್ಕಳನ್ನ ತಯಾರು ಮಾಡುವ ಹಂತದಲ್ಲಿದ್ದಾರೆ. ಹೀಗಿರುವಾಗ ಬಿಬಿಎಂಪಿ ಇಂಥ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಜತೆ ಚೆಲ್ಲಾಟ ಆಡೋಕೆ ಹೊರಟಿದ್ಯಾ ಎನ್ನುವ ಪ್ರಶ್ನೆ ಮೂಡುತ್ತಿದೆ.
ಅಂತಿಮ ಪರೀಕ್ಷೆಗೆ ಉಳಿದಿರುವುದು ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ.., ಇಂಥದ್ರಲ್ಲಿ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರನ್ನ ಬದಲಾವಣೆ ಮಾಡುವುದಕ್ಕೆ ಹೊರಟಿದೆ. ಅದೂ ಕೂಡ ಹೊರಗುತ್ತಿಗೆಯಲ್ಲಿ ಕೆಲ್ಸ ಮಾಡುತ್ತಿದ್ದ ಶಿಕ್ಷಕರನ್ನ ಬದಲಾಯಿಸಿ ಹೊಸ ಶಿಕ್ಷಕರನ್ನ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪೋಷಕರ ಅಸಮಧಾನಕ್ಕೆ ಕಾರಣವಾಗುತ್ತಿದೆ.
ಸದ್ಯ ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 600 ಕ್ಕೂ ಹೆಚ್ಚು ಶಿಕ್ಷಕರು/ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ.., ಪಾಲಿಕೆ ಕ್ರಿಸ್ಟಲ್ ಇನ್ಪೋಸಿಸ್ಟಮ್ ಆಂಡ್ ಸರ್ವಿಸಸ್ ಗೆ ನೀಡಿದ್ದ ಟೆ.ಡರ್ 2022 ರಂದೇ ಮುಕ್ತಾಯವಾಗಿತ್ತು. ಪಾಲಿಕೆ ಹೊಸ ಟೆಂಡರ್ ಕರೆಯುವ ವರೆಗೂ ಹಳೆ ಸಂಸ್ಥೆಯಿಂದಲೇ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರು ಶಿಕ್ಷಣ ನೀಡುತ್ತಿದ್ದರು.

ಇದೀಗ ಬಿಬಿಎಂಪಿ ಕರೆದಿದ್ದ ಹೊಸ ಟೆಂಡರ್ ಇದೀಗ ಪೂರ್ಣಗೊಂಡಿದ್ದು, ದಕ್ಷಿಣ ಮತ್ತು ಆರ್.ಆರ್.ನಗರ ವಲಯ ಅಪ್ಪು ಡಿಟೆಕ್ವಿವ್ ಆಂಡ್ ಸೆಕ್ಯೂರಿಟಿ ಸರ್ವಿಸಸ್ ಕಂಪನಿ ಟೆಂಡರ್ ಮೂಲಕ ಶಿಕ್ಷಕರನ್ನ ಹೊರ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನ ನೀಡೋಕೆ ಮುಂದೆ ಬಂದಿದೆ. ಅದರಂತೆ ಬಿಬಿಎಂಪಿಯೂ ಅನುಮೋದನೆ ನೀಡಿದೆ. ಪಾಲಿಕೆಯ ಈ ನಡೆ ಇದೀಗ ಪೋಷಕರು ಹಾಗೂ ವಿದ್ಯಾರ್ಥಿಗಳ ಅಸಮಧಾನಕ್ಕೆ ಕಾರಣವಾಗಿದೆ.
ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಹೊಸ ಶಿಕ್ಷಕರನ್ನ ನೀಡುವ ಗುತ್ತಿಗೆಯನ್ನು ಬದಲಾಯಿಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಬಿಬಿಎಂಪಿಯ ಕಾಣದ ಕೈಗಳು ಹೀಗೆ ತರಾತುರಿಯಲ್ಲಿ ಹೊಸ ಕಂಪನಿಗೆ ಟೆಂಡರ್ ಕೊಡಿಸುವಲ್ಲಿ ಯಶಸ್ವಿಯಾಗಿದೆ ಎನ್ನುವ ಗಂಭೀರ ಆರೋಪವೂ ಕೇಳಿ ಬರುತ್ತಿದೆ.

ಹೊಸದಾಗಿ ಶಿಕ್ಷಕರು/ಉಪನ್ಯಾಸಕರನ್ನ ನೇಮಿಸಿದರೆ ಕಳೆದ 15ರಿಂದ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಗತಿ, ಸ್ಥಿತಿ ಏನಾಗಬೇಕು. ಎನ್ನುವ ಪ್ರಶ್ನೆಗಿಂತ ಮಧ್ಯಂತರ ವಾರ್ಷಿಕ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಶಿಕ್ಷಕರನ್ನ ಸೇವೆಯನ್ನು ರದ್ದುಪಡಿಸಿ, ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರಿಗೆ ಎಷ್ಟು ಪಠ್ಯ ಮಾಡಬೇಕು ಹಾಗೂ ಏನು ತಯಾರಿ ಮಾಡಬೇಕು ಮತ್ತು ಮಕ್ಕಳ ಮನಸ್ಥಿತಿಗೆ ಹೊಂದಿಕೊಳ್ಳುವ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಹೊಸದಾಗಿ ಗುತ್ತಿಗೆ ಪಡೆಯುತ್ತಿರುವ ಟೆಂಡರ್ ದಾರರ ಬಳಿ ನುರಿತ/ಅನುಭವಿ ಶಿಕ್ಷಕರು/ಉಪನ್ಯಾಸಕರು ಲಭ್ಯವಿರುತ್ತಾರೆಯೇ ಎನ್ನುವುದನ್ನ ಬಿಬಿಎಂಪಿ ಖಾತ್ರಿ ಪಡಿಸಿಕೊಂಡಿಲ್ಲ.., ಇಂಥದ್ರ ನಡುವೆಯೇ ಹೊಸ ಸಂಸ್ಥೆಯ ಶಿಕ್ಷಕರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಿದರೆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಕಲ್ಪನೆಯನ್ನೂ ಬಿಬಿಎಂಪಿ ಮುಖ್ಯ ಆಯುಕ್ತರು ಮಾಡಿದಂತಿಲ್ಲ..,
ಇನ್ನು ಬಿಬಿಎಂಪಿಯ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೂಡ ಅಸಮಧಾನ ಹೊರಹಾಕಿದ್ದಾರೆ. ಟೆಂಡರ್ ಅವಧಿ ಮುಗಿದ ಮೇಲೆ ಹೊಸ ಟೆಂಡರ್ ವಿಳಂಬ ಮಾಡಿದ್ದು ಸರಿಯಲ್ಲ. ಪರೀಕ್ಷಾ ಸಂಧರ್ಭದಲ್ಲಿ ಹೊಸ ಸಂಸ್ಥೆಯ ಶಿಕ್ಷಕರನ್ನ ನೇಮಿಸಿದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೀಗಾಗಿ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡು ಫಲಿತಾಂಶ ಬಡುವ ವರೆಗಾದ್ರೂ ಇದೇ ಶಿಕ್ಷಕರಿಂದ ಶಿಕ್ಷಣ ಕೊಡಿಸಿ ಅಂತ ಬಿಬಿಎಂಪಿಗೆ ಮನವಿ ಮಾಡಿದ್ದಾರೆ.